ಸಹಾಯ ಕೇಳಿಕೊಂಡು ಬಂದ ಮಂಗಳಮುಖಿಗೆ ಡಿ ಬಾಸ್ ಮಾಡಿದ ಸಹಾಯ ಎಂತದ್ದು ನೋಡಿ! ಇದಕ್ಕೆ ಕಣ್ರೀ ಅಭಿಮಾನಿಗಳು ಇವರನ್ನು ತಲೆಯ ಮೇಲೆ ಹೊತ್ತು ಮೇರೆಸುತ್ತಿರುವುದು!

ಸುದ್ದಿ

ಹಲೋ ಪ್ರೀತಿಯ ವೀಕ್ಷಕರೆ, ಇಂದಿನ ಲೇಖನದ ಬಗ್ಗೆ ನೀವು ಓದಿದರೆ ಖಂಡಿತ ಭೇಷ್ ಅಂತೀರಾ. ಸಿನೆಮಾರಂಗದ ನಟರು ಎಂದರೆ ಕೇವಲ ನಟನೆ ಮಾಡುವುದು, ಐಷರಾಮಿ ಜೀವನದಲ್ಲ ಬದುಕುವುದು, ಮೋಜು ಮಾಸ್ತಿ ಮಾಡುವುದು ಅಂದು ಕೊಂಡರೆ ಅದು ಶುದ್ಧ ಸುಳ್ಳು ಬಹುತೇಕರ ಅಭಿಪ್ರಾಯ ಸಿನೆಮಾ ರಂಗದವರು ಯಾರಿಗೂ ಸಹಾಯ ಮಾಡೋಲ್ಲ, ಇವರಿಂದ ಯಾರಿಗೂ ಉಪಯೋಗವಿಲ್ಲ ಎಂಬುವುದೇ ಸಹಜವಾಗಿ ಎಲ್ಲಾ ನಟರ ಮೇಲಿರುವ ಆರೋಪ ಇತ್ತು ಆದರೆ ಪುನೀತ್ ರಾಜ್ ಕುಮಾರ್ ಅಗಲಿಕೆಯ ನಂತರ ಹಲವು ನಟ ನಟಿಯರು ಹಲವಾರು ಸಮಾಜ ಸೇವೆಯ ಕಾರ್ಯಗಳು ಇದು ಬೆಳಕಿಗೆ ಬಂದಿದೆ.

ಬಲಗೈ ಯಿಂದ ಕೊಟ್ಟ ಧಾನ ಎಡಗೈಗೆ ಗೊತ್ತಾಗಬಾರದೆಂದು ಅನೇಕ ನಟ ನಟಿಯರು ನಮ್ಮ ಸಿನೆಮಾರಂಗದಲ್ಲಿದ್ದಾರೆ. ಅಂತವರಲ್ಲಿ ಒಬ್ಬರಾಗಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಣಬಹುದು. ದರ್ಶನ್ ಜನರ ಕಷ್ಟಗಳಿಗೆ ಸ್ಪಂದಿಸುವ ಸಿನೆಮಾ ನಟರ ಪೈಕಿ ಒಬ್ಬರು. ಇವರು ಇದುವರೆಗೂ ಯಾರಿಗೆಲ್ಲ ನೆರವಾದರು ಎಂದು ಅವರ ಅಭಿಮಾನಿಗಳು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಬರೆದುಕೊಂಡಿರೋದನ್ನು ನಾವು ನೋಡಿದ್ದೇವೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿಬಾಸ್ ಬಗ್ಗೆ ಸಾಕಷ್ಟು ಜನರು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

ಹೌದು ಜನರಿಗೆ ಮಾತ್ರವಲ್ಲದೇ ಸಾಕಷ್ಟು ಗೋಶಾಲೆ ಮತ್ತು ಅನಾಥಾಶ್ರಮ, ಮಠ ಮತ್ತು ದೇವಸ್ಥಾನಗಳಿಗೆ ಸಹಾಯ ಮಾಡಿದ್ದಾರೆ. ಕೊರೊನ ಸಮಯದಲ್ಲಿ ಡಿಬಾಸ್ ಅಭಿಮಾನಿಗಳ ಬಳಗ ಉಸಿರು ಎಂಬ ತಂಡದ ಮೂಲಕ ತಮ್ಮ ಕೈಯಲಾದಷ್ಟು ಜನರ ಸೇವೆಗಳನ್ನು ಮಾಡಿದ್ದಾರೆ. ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಅಷ್ಟೇ ಅಲ್ಲ. ಜೊತೆಗೆ ಸ್ನೇಹಜೀವಿ ಕೂಡ. ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ ಇದು ದರ್ಶನ್ ಅವರ ರಕ್ತದಲ್ಲೇ ಬಂದಿದೆ.

ಸಿನೆಮಾರಂಗದಲ್ಲಿ ಅವಕಾಶಗಳಿಲ್ಲದೆ ಕುಗ್ಗಿ ಹೋಗಿದ್ದ ತಮ್ಮ ತಂದೆಯ ಕಾಲದ ಖಳನಟರ ಮಕ್ಕಳಿಗೆ ನವಗ್ರಹ ಸಿನೆಮಾ ಮೂಲಕ ಮತ್ತೆ ಅವಕಾಶ ಕೊಟ್ಟ ನಟ ದರ್ಶನ್. ವಿನೋದ್ ಪ್ರಭಾಕರ್, ಪ್ರಜ್ವಲ್ ದೇವರಾಜ್, ತರುಣ್ ಸುಧೀರ್ ಸೃಜನ್ ಲೋಕೇಶ್, ಹೀಗೆ ಅನೇಕರು ದರ್ಶನ್ ರ ಪ್ರಾಣ ಸ್ನೇಹಿತರು. ಅವರೆಲ್ಲರಿಗೂ ಡಿಬಾಸ್ ಎಂದರೆ ಅಚ್ಚು ಮೆಚ್ಚು. ಅದೇ ರೀತಿ ವಿನೋದ್ ಪ್ರಭಾಕರ್, ತರುಣ್ ಸುಧೀರ್, ಬುಲೆಟ್ ಪ್ರಕಾಶ್, ಕಾಮಿಡಿ ಕಿಲಾಡಿ ಸಂಜು ಹೀಗೇ ಅನೇಕ ನಟರಿಗೆ ಸಹಾಯ ಮಾಡಿದ್ದಾರೆ.

ರಾಜ್ಯದ 60 ಅನಾಥ ಆಶ್ರಮ ಮತ್ತು 1 ಮಠಕ್ಕೆ ಅಗತ್ಯ ವಸ್ತು 70 ಟನ್ ದವಸ ಧನ್ಯವಾದಗಳು ಪೂರೈಕೆ, ಸಾವಿರಾರು ಅಭಿಮಾನಿಗಳಿಂದ ಕ್ಯಾನ್ಸರ್ ಪೀಡಿತ ಪುಟ್ಟ ಮಕ್ಕಳಿಗೆ ರಕ್ತದನಾ, 50 ಲಾರಿ ತುಂಬಾ ಗೋ ಶಾಲೆಗೆ ಮೇವು, 2 ಲಕ್ಷಕ್ಕೂ ಹೆಚ್ಚು ಜನರಿಗೆ ತಾನು ದುಡಿದ ದುಡ್ಡಿನಿಂದ ಅನ್ನದಾನ, 20ಕ್ಕೂ ಹೆಚ್ಚು ಅಂಗವಿಕಲರಿಗೆ ವೀಲ್ ಚೇರ್, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅನಾಥ ಆಶ್ರಮಕ್ಕೆ ಅಭಿಮಾನಿಗಳಿಂದ ಅನುದಾನ ಜೊತೆಗೆ ಕ್ರೀಡೆ ವಸ್ತು ನೀಡಿ ಪ್ರೋತ್ಸಾಹ.

ಆಟೋ ಚಾಲಕರು ,ಕ್ಯಾಬ್ ಚಾಲಕರು , ಸಣ್ಣಪುಟ್ಟ ವ್ಯಾಪಾರಿಗಳಿಗೆ , ಅಂಗಡಿ ಮುಂಗಟ್ಟು ಮಾಲೀಕರಿಗೆ ಸಹಾಯ. ನೂರಾರು ಬಡವರಿಗೆ ಕಾಣದ ರೀತಿ ಸಹಾಯಹಸ್ತ ಮುಂತಾದವುಗಳು ಇವರ ಸಮಾಜ ಸೇವೆಯಾಗಿದ್ದು ಇತ್ತೀಚೆಗಷ್ಟೇ ಕ್ರಾಂತಿ ಸಿನೆಮಾ ಪ್ರಚಾರದಲ್ಲಿದ್ದಂತಹ ಸಂದರ್ಭ ಅಭಿಮಾನಿಗಳ ದಂಡಿನಲ್ಲಿ ಮಂಗಳ ಮುಖಿ ಯೊಬ್ಬರು ಸಹಾಯ ಕೇಳಿದ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈ’ರಲ್ ಆಗಿದೆ.

ಈ ಮೂಲಕ ವಿಶಾಲಹೃದಯದ ದಾಸ ಕಷ್ಟ ಎಂದು ಬಂದವರನ್ನು ಯಾರನ್ನು ಹಾಗೇ ಕಳುಹಿಸದ ಇವರು ಮಂಗಳ ಮುಖಿಯರು ಸಹಾಯ ಕೇಳಿದರೆ ಹಾಗೇ ಕಳುಹಿಸಲು ಸಾಧ್ಯವೇ. ಖಂಡಿತಾ ಸಹಾಯ ಮಾಡುವೆ ಎಂದು ಭರವಸೆ ನೀಡಿದ್ದು ಮಾತ್ರವಲ್ಲದೆ ತಮ್ಮ ಮ್ಯಾನೇಜರ್ ಬಳಿ ಅವರಿಗೆ ಸಹಾಯ ಮಾಡುವ ವ್ಯವಸ್ಥೆ ಮಾಡುವಂತೆ ತಿಳಿಸಲಾಯಿತು. ಒಟ್ಟಾರೆಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನೆರವಿನ ಕಾರ್ಯ ನಿರಂತರವಾಗಿದ್ದು ಇದಕ್ಕೆ ಎಲ್ಲೆಡೆ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ. ನೀವು ಇದರ ಕುರಿತು ವಿಡಿಯೋ ನೋಡಲು ಕೆಳಗಿನ ಲಿಂಕ್ ಓಪನ್ ಮಾಡಿ ಶೇರ್ ಮಾಡಿ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ತಿಳಿಸಿ.


Leave a Reply

Your email address will not be published. Required fields are marked *