ಬಾಲಿವುಡ್ ಚಿತ್ರರಂಗದ ಬಗ್ಗೆ ಹೇಳುವುದಾದರೆ ನಿಮಗೆಲ್ಲ ಗೊತ್ತಿರುವ ಹಾಗೆ ಡ್ರಾಮ ಹಾಗೂ ಹಂಗಾಮ ಗಳು ಹೆಚ್ಚಾಗಿ ನಡೆಯುತ್ತದೆ. ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಯಶಸ್ವಿಯಾಗಿ ಇರುವಂತಹ ಚಿತ್ರರಂಗ ಬಾಲಿವುಡ್ ಇರಬಹುದು ಆದರೆ ಇಲ್ಲಿ ನಟ-ನಟಿಯರ ನಾಟಕಗಳು ಕೂಡ ದೊಡ್ಡದಾಗಿ ಸುದ್ದಿಯಾಗುತ್ತದೆ. ಇಂದಿನ ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಎಂದೇ ಖ್ಯಾತರಾಗಿರುವ ಸಲ್ಮಾನ್ ಖಾನ್ ರವರ ಕುರಿತಂತೆ.
ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದ ಬ್ಯಾಡ್ ಬಾಯ್ ಎನ್ನುವ ಕುಖ್ಯಾತಿಗೆ ಪಾತ್ರರಾಗಿದ್ದ ಸಲ್ಮಾನ್ ಖಾನ್ ಅವರು ಇತ್ತೀಚಿನ ದಿನಗಳಲ್ಲಿ ತಾವು ಮಾಡುತ್ತಿರುವ ಒಳ್ಳೆಯ ಕಾರ್ಯಗಳಿಂದಾಗಿ ಸಾಕಷ್ಟು ಜನಪ್ರಿಯರಾಗಿದ್ದಾರೆ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಲಾಕ್ ಡೌನ್ ನಲ್ಲಿ ಸಲ್ಮಾನ್ ಖಾನ್ ರವರು ಬಡಜನರಿಗೆ ಆಹಾರ ಪೂರೈಕೆ ಮಾಡಿರುವ ವಿಚಾರ ನಿಮಗೆಲ್ಲರಿಗೂ ತಿಳಿದಿರಬಹುದು. ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನ ಆದಾಯದ 65 ಪ್ರತಿಶತದಷ್ಟು ಜನರ ಸೇವೆಗಾಗಿ ಮಾಡುವ ಏಕೈಕ ಎಂದರೆ ಅದು ಸಲ್ಮಾನ್ ಖಾನ್ ಎನ್ನಬಹುದಾಗಿದೆ. ತಮ್ಮ ಬಳಿಗೆ ಯಾರೇ ಸಹಾಯ ಬೇಡಿಕೊಂಡು ಬಂದರು ಕೂಡ ಅವರ ಸಮಸ್ಯೆಯನ್ನು ಪರಿಹರಿಸುವ ಚಿನ್ನದ ಹೃದಯವುಳ್ಳ ವ್ಯಕ್ತಿ ಎಂದರೆ ತಪ್ಪಾಗಲಾರದು.
ಸಲ್ಮಾನ್ ಖಾನ್ ಎಂದಾಗ ಮಾಧ್ಯಮಗಳಲ್ಲಿ ಸುದ್ದಿಯಾಗುವ ಒಂದೇಒಂದು ವಿಚಾರವೇನೆಂದರೆ ಅವರ ಮದುವೆ ಸುದ್ದಿ. ವಯಸ್ಸು ಐವತ್ತು ದಾಟಿದ್ದರು ಕೂಡ ಇನ್ನು ಮದುವೆಯಾಗದೆ ಎವರ್ಗ್ರೀನ್ ಬ್ಯಾಚುಲರ್ ಆಗಿ ಉಳಿದುಕೊಂಡಿದ್ದಾರೆ ಸಲ್ಮಾನ್ ಖಾನ್. ಹೀಗಾಗಿ ಯಾರೇ ಎಲ್ಲೆ ಕೇಳಿದರೂ ಮೊದಲ ಪ್ರಶ್ನೆ ಸಲ್ಮಾನ್ ಖಾನ್ ನಿಮ್ಮ ಮದುವೆ ಯಾವಾಗ ಎನ್ನುವುದು. ಸಲ್ಮಾನ್ ಖಾನ್ ರವರು ಈ ವಿಚಾರದ ಕುರಿತಂತೆ ಅಂದಿನಿಂದ ಇಂದಿನವರೆಗೂ ಕೂಡ ಒಂದೋ ಮೌನ ವಹಿಸಿರುತ್ತಾರೆ ಇಲ್ಲವೇ ಹಾಸ್ಯಸ್ಪದವಾಗಿ ಉತ್ತರಿಸುತ್ತಾರೆ. ಇಂದಿನವರೆಗೆ ಮದುವೆ ಆಗುವ ಗೋಜಿಗೆ ಹೋಗಿಲ್ಲ. ಇನ್ನು ಸಲ್ಮಾನ್ ಖಾನ್ ಅವರ ಜೊತೆಗೆ ಹಲವಾರು ನಟಿಯರ ಹೆಸರು ತಳುಕು ಹಾಕಿಕೊಂಡಿರುವುದು ಹೊಸದೇನಲ್ಲ ಬಿಡಿ.
ಆದರೆ ಈಗ ಸದ್ಯಕ್ಕೆ ಕೇಳಿಬರುತ್ತಿರುವ ವಿಚಾರ ಖಂಡಿತವಾಗಿ ನಿಮಗೆ ಆಶ್ಚರ್ಯ ನೀಡಬಹುದು. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ಮದುವೆಯಾಗಿದೆ ಎಂಬುದಾಗಿ ಸುದ್ದಿಗಳು ಹರಿದಾಡುತ್ತಿವೆ. ಹೌದು ಅದು ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಶತ್ರುಘ್ನ ಸಿನ್ಹಾ ರವರ ಮಗಳಾಗಿರುವ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ರವರನ್ನು ಸಲ್ಮಾನ್ ಖಾನ್ ರವರು ಮದುವೆಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದೆ.
ಈ ಕುರಿತಂತೆ ಎಲ್ಲೆಡೆ ದೊಡ್ಡಮಟ್ಟದಲ್ಲಿ ಸುದ್ದಿ ಆಗುತ್ತಿದ್ದು ಇದು ಸೋನಾಕ್ಷಿ ಸಿನ್ಹಾ ರವರ ವರೆಗೂ ತಲುಪಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೋನಾಕ್ಷಿ ಸಿನ್ಹಾ ಇದು ಫೋಟೋಶಾಪ್ ಮಾಡಲಾಗಿದೆ ನಿಜವಾದ ಫೋಟೋ ಹಾಗೂ ಫೇಕ್ ಫೋಟೋ ನಡುವಿನ ವ್ಯತ್ಯಾಸವನ್ನು ತಿಳಿಯದೇ ಇರುವಷ್ಟು ದಡ್ಡರು ಆಗಿದ್ದೀರಾ ಎಂಬುದಾಗಿ ಹೇಳಿದ್ದಾರೆ. ಕೊನೆಗೂ ಕೂಡ ಈ ಫೋಟೋಗಳು ಹಿಂದಿನ ರಹಸ್ಯ ಬಹಿರಂಗವಾಗಿರುವುದು ಎಲ್ಲರೂ ನಿಟ್ಟಿಸಿರು ಬಿಡುವಂತಾಗಿದೆ.
ಹೌದು ಎಡಿಟೆಡ್ ಮಾಡಿರುವ ಫೋಟೋಗಳು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಜೋಡಿ ಗಳಾಗಿರುವ ಸಯ್ಯೇಶಾ ಹಾಗೂ ಆರ್ಯ ರವರ ಮದುವೆಯ ಫೋಟೋ ಆಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಮದುವೆಯ ಫೋಟೋದಲ್ಲಿ ಸಲ್ಮಾನ್ ಖಾನ್ ಹಾಗೂ ಸೋನಾಕ್ಷಿ ಸಿನ್ಹಾ ರವರನ್ನು ಎಡಿಟ್ ಮಾಡಿ ಅವರ ಮುಖವನ್ನು ಕೂರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ. ಇಂತಹ ವಿಚಾರಗಳು ಸೆಲೆಬ್ರಿಟಿಗಳ ವಿಚಾರದಲ್ಲಿ ಆಗುವುದು ಸರ್ವೇ ಸಾಮಾನ್ಯವಾಗಿದ್ದು ಇದು ಮೂರರಲ್ಲಿ ಮತ್ತೊಂದು ಎನ್ನುವುದಾಗಿ ತಿಳಿಯಬಹುದಾಗಿದೆ.
ಸಲ್ಮಾನ್ ಖಾನ್ ಅವರ ಹೆಸರು ಈಗಾಗಲೇ ಹಲವಾರು ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರ ಜೊತೆಗೆ ಕೇಳಿಬಂದಿದ್ದರೂ ಕೂಡ ಒಬ್ಬರ ಜೊತೆಯೂ ಇನ್ನೂ ಮದುವೆಯಾಗಿಲ್ಲ. ಇನ್ನು ಸೋನಾಕ್ಷಿ ಸಿನ್ಹಾ ರವರು ಕೂಡ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಸಲ್ಮಾನ್ ಖಾನ್ ನಟನೆಯ ಸಿನಿಮಾ ಮೂಲಕವೇ. ಇದುವರೆಗೂ ಕೂಡ ಸಲ್ಮಾನ್ ಖಾನ್ ರವರು ಮದುವೆಯಾಗುವ ಗೋಜಿಗೆ ಹೋಗಿಲ್ಲ. ಮುಂದೆ ಆದ್ರೂ ಮದುವೆಯಾಗುತ್ತಾರೆ ಎಂಬುದಾಗಿ ಕಾದುನೋಡಬೇಕಾಗಿದೆ. ಮುಂದೆ ಆದ್ರೂ ಸಲ್ಮಾನ್ ಖಾನ್ ರವರು ಮದುವೆಯಾಗುತ್ತಾರೋ ಇಲ್ಲವೋ ಎನ್ನುವುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.