ಸಾ’ಯೋ ನಿರ್ಧಾರ ಮಾಡಿದ್ರಂತೆ ಪ್ರಕಾಶ್ ರಾಜ್; ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ..!?

ಸುದ್ದಿ

ಕನ್ನಡ ಚಿತ್ರರಂಗದಿಂದ ಪರಭಾಷೆಗೆ ಹೋಗಿ ಜನಪ್ರಿಯತೆಯನ್ನು ಪಡೆದುಕೊಂಡವರು ಸಾಕಷ್ಟು ಜನ ಇದ್ದಾರೆ. ಅವರಲ್ಲಿ ಇಂದು ಒಬ್ಬರು ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಕರಾವಳಿ ಮೂಲದ ನಟ ಪ್ರಕಾಶ್ ರೈ ಅವರ ಕುರಿತಂತೆ. ಕನ್ನಡದ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸಿ ಈಗ ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಸಿನಿಮಾಗಳಲ್ಲಿಯೂ ಕೂಡ ತಮ್ಮ ಪ್ರಾಬಲ್ಯವನ್ನು ಹೊಂದಿರುವಂತಹ ಪ್ರಕಾಶ್ ಅವರ ಕುರಿತಂತೆ ಕೆಲವೊಂದು ವಿಚಾರಗಳನ್ನು ಹೇಳಲು ಹೊರಟಿದ್ದೇವೆ.

ಪ್ರಕಾಶ್ ರೈ ರವರು ಕನ್ನಡ ಚಿತ್ರರಂಗಕ್ಕೆ ಯಾವುದೇ ಬೆಂಬಲವಿಲ್ಲದೆ ಕಾಲಿಟ್ಟವರು. ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ತಮ್ಮ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿ ಕೊಂಡವರು. ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಮ್ಮ ಚಿತ್ರಕ್ಕೆ ಪ್ರಕಾಶ್ ರೈ ರವರೆ ಬೇಕು ಎನ್ನುವುದಾಗಿ ನಿರ್ಮಾಪಕ- ನಿರ್ದೇಶಕರು ತುದಿಗಾಲಿನಲ್ಲಿ ನಿಂತು ಕೊಂಡಿರುತ್ತಾರೆ. ನಿಜಕ್ಕೂ ಕೂಡ ಪ್ರಕಾಶ ರೈ ರವರು ಪ್ರತಿಭೆಯ ಆಗರವೆಂದರೆ ಖಂಡಿತವಾಗಿ ತಪ್ಪಾಗಲಾರದು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಪ್ರಕಾಶ್ ರೈ ರವರು ಅದನ್ನು ನೀರು ಕುಡಿದಷ್ಟು ಸುಲಭವಾಗಿ ಮಾಡುತ್ತಾರೆ. ನಟನೆಯ ಯುನಿವರ್ಸಿಟಿ ಪ್ರಕಾಶ್ ಎಂದರೆ ಖಂಡಿತವಾಗಿ ಅತಿಶಯೋಕ್ತಿಯಲ್ಲ.

ರಾಜಕೀಯ ಕ್ಷೇತ್ರದಲ್ಲಿ ಕೂಡ ಇವರು ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ಯಾವುದು ಅಧಿಕಾರವನ್ನು ಪಡೆದುಕೊಳ್ಳದಿದ್ದರೂ ಕೂಡ ಒಂದು ಹಳ್ಳಿಯನ್ನು ದತ್ತು ಪಡೆದುಕೊಂಡು ಅಲ್ಲಿ ಬೇಕಾಗಿರುವಂತಹ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸುವಂತಹ ಕಾರ್ಯವನ್ನು ಮಾಡಿದ್ದಾರೆ. ನಿಜಕ್ಕೂ ಕೂಡ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಪ್ರಕಾಶ್ ರೈ ರವರು ಆಸಕ್ತಿಯನ್ನು ವಹಿಸಿರುವುದೇ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ನಿಮಗೆ ಗೊತ್ತಾ ಪ್ರಕಾಶ್ ರಾಜ್ ರವರು ಒಮ್ಮೆ ತಮ್ಮ ಜೀವನವನ್ನೇ ಕಳೆದುಕೊಳ್ಳುವಂತಹ ನಿರ್ಧಾರವನ್ನು ಮಾಡಿದ್ದರಂತೆ. ಇಷ್ಟೊಂದು ಯಶಸ್ವಿ ನಟ ಯಾಕೆ ಆ ತರಹ ಮಾಡಿರುತ್ತಾರೆ ಎಂಬುದಾಗಿ ನೀವು ಯೋಚಿಸಬಹುದು.

ಹೌದು ಮೊದಲಿಗೆ ಲಲಿತಾ ಕುಮಾರಿ ಎನ್ನುವವರನ್ನು ಪ್ರಕಾಶ್ ರಾಜ್ ರವರು ಮದುವೆಯಾಗುತ್ತಾರೆ. ಆಗ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಜನಿಸುತ್ತಾನೆ. ಸಿದ್ದು ಮಗನ ಹೆಸರು. ಸಿದ್ದು ಫಾರ್ಮ್ ಹೌಸ್ ನ ಮನೆಯ ಮಹಡಿಯಿಂದ ಕೆಳಗೆ ಬಿದ್ದು ಮರ’ಣ ಹೊಂದುತ್ತಾನೆ. ಈ ಕಾರಣದಿಂದಾಗಿಯೇ ಗಂಡ-ಹೆಂಡತಿ ನಡುವೆ ವೈಮನಸ್ಸು ಉಂಟಾಗಿ ಇಬ್ಬರು ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿಯೇ ಪ್ರಕಾಶ್ ರಾಜ್ ರವರು ಇಂತಹ ಯೋಚನೆಯನ್ನು ಮಾಡುತ್ತಾರೆ. ಆಗ ಪ್ರಕಾಶ್ ರಾಜ್ ರವರು ಇಲ್ಲ ನಾನು ಹೀಗೆ ಮಾಡಿಕೊಳ್ಳಬಾರದು ಬದುಕಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂದುಕೊಳ್ಳುತ್ತಾರಂತೆ. ಈಗ ತೆರೆ ಮರೆಯಲ್ಲಿ ನಿಂತುಕೊಂಡು ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ.


Leave a Reply

Your email address will not be published. Required fields are marked *