ದಕ್ಷಿಣ ಭಾರತದ ಸಿನೆಮಾರಂಗದಲ್ಲಿ ಅನೇಕ ನಟರ ಮಕ್ಕಳು ಸಿನೆಮಾಗಳಲ್ಲಿ ನಟಿಸುವ ಮೂಲಕ ತಮ್ಮದೇ ಅದ್ಭುತ ನಟನೆಯ ಮೂಲಕ ಸಿನೆಮಾಕ್ಷೇತ್ರದಲ್ಲಿ ಮುಂದೆಬರುತ್ತಿದ್ದಾರೆ. ಅನೇಕ ಸ್ಟಾರ್ ನಟರ ಮಕ್ಕಳು ಸಿನೆಮಾರಂಗದಲ್ಲಿ ಸಕ್ರಿಯವಾಗಿ ನಟಿಸುತ್ತಾ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈ ಪೈಕಿಯಲ್ಲಿ ಕೆಲವೊಂದು ನಟ ಹಾಗೂ ನಟಿಯರು ತಮ್ಮ ಪೋಷಕರ ಬ್ಯಾಕ್ರೌಂಡ್ ನಿಂದ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಇನ್ನೂ ಕೆಲ ನಟ ಹಾಗೂ ನಟಿಯರು ತಮ್ಮ ಸ್ವಂತ ಪ್ರತಿಭೆಯಿಂದ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಶ್ರುತಿ ಹಾಸನ್ ತಮ್ಮ ಸ್ವಂತ ಪ್ರತಿಭೆಯಿಂದ ಸಿನೆಮಾಕ್ಷೇತ್ರದಲ್ಲಿ ಮುನ್ನುಗ್ಗುತ್ತಿದ್ದಾರೆ.
ತಮಿಳು ಸಿನೆಮಾರಂಗದ ಸ್ಟಾರ್ ನಟ ಲೋಕನಾಯಕ ಎಂದೇ ಕರೆಯಲಾಗುವ ಕಮಲ್ ಹಾಸನ್ ಪುತ್ರಿಯಾದ ಶ್ರುತಿ ಹಾಸನ್ ಈಗಾಗಲೇ ಸ್ಟಾರ್ ಪಟ್ಟವನ್ನು ದಕ್ಕಿಸಿಕೊಂಡಿದ್ದಾರೆ. ಈಗಲೂ ಕೂಡ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೆಸರಿಗೆ ಮಾತ್ರ ದೊಡ್ಡ ಸೂಪರ್ ಸ್ಟಾರ್ ಮಗಳು ಆದರೆ ಇವರು ತನ್ನ ಸ್ವಂತ ಪ್ರತಿಭೆಯಿಂದಲೇ ಸಿನೆಮಾರಂಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಆಕೆ ಇದುವರೆಗೂ ತನ್ನ ತಂದೆಯ ಹೆಸರನ್ನು ಹೇಳಿಕೊಂಡು ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿಲ್ಲ. ತಂದೆಯ ಹೆಸರನ್ನು ಹೇಳಿಕೊಂಡು ನಾನು ಯಾವುದೇ ಸಿನಿಮಾದ ಆಫರ್ ಸಹ ಪಡೆದಿಲ್ಲ ಎಂದು ನಟಿ ಶ್ರುತಿ ಹಾಸನ್ ಹೇಳಿದ್ದಾರೆ.
ನಟಿ ಶ್ರುತಿ ಹಾಸನ್ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಾ ಹಿಟ್ ಸಿನೆಮಾಗಳನ್ನು ಅಭಿಮಾನಿಗಳಿಗೆ ನೀಡುತ್ತಿದ್ದಾರೆ. ತನ್ನ ನಟನೆಯ ಟ್ಯಾಲೆಂಟ್ ಪ್ರದರ್ಶನ ಮಾಡಿ ಸಿನೆಮಾಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವ ಸ್ಟಾರ್ ನಟಿಯರಲ್ಲಿ ಶ್ರುತಿ ಹಾಸನ್ ಕೂಡ ಅಗ್ರ ಸ್ಥಾನದಲ್ಲಿದ್ದಾರೆ. ಇನ್ನೂ ಹಲವರಿಗೆ ಒಂದು ಕುತೂಹಲ ಕೂಡ ಇರುತ್ತದೆ ಅದೇನೆಂದರೆ ಸಿನೆಮಾರಂಗದಲ್ಲಿ ದೊಡ್ಡ ಸ್ಟಾರ್ ನಟರ ಮಕ್ಕಳಿಗೆ ಪ್ರತ್ಯೇಕವಾದ ಸ್ಥಾನವನ್ನು ಕೊಡುತ್ತಾರೆ ಎಂಬ ಮಾತುಗಳು ಕೂಡ ಕೇಳಿಬಂದಿರುತ್ತದೆ.
ಆದರೆ ನಟಿ ಶ್ರುತಿ ಹಾಸನ್ ಮಾತ್ರ ಇದರಿಂದ ಹೊರತಾಗಿದ್ದಾರೆ. ನಾನು ನನ್ನ ಫ್ಯಾಮಿಲಿ ಹೆಸರು ಹೇಳಿಕೊಂಡು ಸಿನೆಮಾಗಳಲ್ಲಿ ಅವಕಾಶ ಪಡೆದುಕೊಂಡಿಲ್ಲ. ನನ್ನ ಫ್ಯಾಮಿಲಿಯಾ ರಕ್ತದಿಂದಲೇ ನನಗೆ ಅಭಿನಯ ಎಂಬುದು ಬಂದಿದೆ. ಆದರೆ ಸಿನೆಮಾಗಳಲ್ಲಿ ಆಫರ್ ಪಡೆಯುವ ಅಥವಾ ಬಿಲ್ ಪೇ ಮಾಡಲು ನಾನು ಪೋಷಕರ ಹೆಸರನ್ನು ಎಲ್ಲೂ ಬಳಕೆ ಮಾಡಿಕೊಂಡಿಲ್ಲ. ಈ ವಿಚಾರದಲ್ಲಿ ನನಗೆ ತುಂಬಾ ಕ್ಲಾರಿಟಿ ಇದೆ ಎಂದು ನಟಿ ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.
ಇನ್ನೂ ನಾನು ಸಿನೆಮಾರಂಗದಲ್ಲಿ ಕಷ್ಟ ಪಟ್ಟು ಕೆಲಸ ಮಾಡುತ್ತೇನೆ. ನನ್ನ ಸರ್ ನೇಮ್ ಹಾಸನ್ ಕಾರಣಕ್ಕೆ ನನಗೆ ಮೊದಲು ಸಿನೆಮಾಗಳಲ್ಲಿ ಆಫರ್ ಬಂತು ಎಂಬುದು ವಾಸ್ತವವಾಗಿದೆ. ಆದರೆ ಸದ್ಯಕ್ಕೆ ನನಗೆ ಸಿಗುತ್ತಿರುವ ಆಫರ್ ಗಳು ನನ್ನ ಟ್ಯಾಲೆಂಟ್ ಅನ್ನು ಗುರುತಿಸಿ ಸಿಗುತ್ತಿದೆ ಹೊರತು ಯಾವುದೇ ಫ್ಯಾಮಿಲಿ ಅಥವಾ ಇನ್ನೊಂದು ಅಲ್ಲಾ ಎಂದಿದ್ದಾರೆ.
ಇನ್ನೂ ಪ್ರಭಾಸ್ ಜೊತೆ ಕೆಲವೊಂದು ಕಾರಣಗಳಿಂದ ಸಿನೆಮಾಗಳಿಂದ ದೂರ ಇದ್ದರು. ಕ್ರಾಕ್ ಸಿನೆಮಾದ ಮೂಲಕ ರಿ ಎಂಟ್ರಿ ಕೊಟ್ಟರು. ಬಳಿಕ ಕೆಲವೊಂದು ಸಿನೆಮಾಗಳಲ್ಲಿ ಅಭಿನಯಿಸಿ ಮತ್ತೆ ಮರಳಿ ಟ್ರಾಕ್ ಗೆ ಬಂದಿದ್ದಾರೆ.ಸದ್ಯ ಶ್ರುತಿ ಹಾಸನ್ ಸಲಾರ್ ಎಂಬ ಸಿನೆಮಾದಲ್ಲಿ ಆದ್ಯ ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ನಟಿ ಶ್ರುತಿ ಹಾಸನ್ ಈ ಸಿನೆಮಾದ ಮೇಲೆ ಸಮುದ್ರದಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.ಸದ್ಯ ಶೂಟಿಂಗ್ ಕೆಲಸಗಳು ಭಾರದಿಂದ ಸಾಗುತ್ತಿದೆ ಸಲಾರ್ ಸಿನೆಮಾ ಮುಂದಿನ ವರ್ಷ ದೇಶದಾದ್ಯಂತ ಬಿಡುಗಡೆಯಗಲಿದೆ.
ಈ ಸಿನೆಮಾದ ಬಳಿಕ ಹಲವು ಸ್ಟಾರ್ ನಟರ ಜೊತೆ ನಟಿಸುವ ಅವಕಾಶಗಳು ಶ್ರುತಿ ಹಾಸನ್ ಅವರ ಕೈಯಲ್ಲಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ.