ಸೀರೆ ಉಟ್ಟುಕೊಂಡು ಫೋಟೋಶೂಟ್ ಮಾಡಿಸಿಕೊಂಡ ನಟಿ ಮೇಘನಾ ರಾಜ್; ಅಷ್ಟಕ್ಕೂ ಇದು ಅಷ್ಟೊಂದು ಸದ್ದು ಮಾಡುತ್ತಿರುವುದು ಯಾಕೆ ಗೊತ್ತಾ ಸೀರೆ ತಂದು ಕೊಟ್ಟವರಾದ್ರೂ ಯಾರು..!?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಮೇಘನರಾಜ್ ರವರು ಮೊದಲಿನಿಂದಲೂ ಕೂಡ ಚಿತ್ರರಂಗದ ಕುರಿತಂತೆ ಸಾಕಷ್ಟು ಚೆನ್ನಾಗಿ ಬಲ್ಲವರು. ಅವರ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯಿ ಕೂಡ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಕಾಲದಿಂದ ಪೋಷಕ ನಟರಾಗಿ ನಟಿಸಿಕೊಂಡು ಬರುತ್ತಿದ್ದಾರೆ. ಹೀಗಾಗಿ ಚಿಕ್ಕವಯಸ್ಸಿನಿಂದಲೂ ಚಿತ್ರರಂಗದ ಗಣ್ಯಾತಿಗಣ್ಯರ ಪರಿಚಯ ಮೇಘನರಾಜ್ ಅವರಿಗಿದೆ. ಇನ್ನು ನಾಯಕ ನಟಿಯಾಗಿ ಮೇಘನರಾಜ್ ರವರು ಮಲಯಾಳಂ ಚಿತ್ರರಂಗದಿಂದ ಪಾದರ್ಪಣೆ ಮಾಡುತ್ತಾರೆ.

ಮಲಯಾಳಂ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ನಮ್ಮೆಲ್ಲರ ನೆಚ್ಚಿನ ನಟಿ ಮೇಘನರಾಜ್. ಮಲಯಾಳಂ ಚಿತ್ರದ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುತ್ತಾರೆ. ಇಲ್ಲಿ ಕೂಡ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ನಂತರ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಚಿರು ಸರ್ಜಾ ರವರನ್ನು ಪ್ರೀತಿಸಿ ಎರಡು ಧರ್ಮಗಳ ಪ್ರಕಾರ ಸಾಂಪ್ರದಾಯಕವಾಗಿ ಮದುವೆಯಾಗುತ್ತಾರೆ. ಎಲ್ಲವೂ ಸರಿಯಾಗಿತ್ತು ಎಲ್ಲವೂ ಸಂತೋಷದಿಂದ ನಡೆಯುತ್ತಿತ್ತು ಎಂದು ಅಂದುಕೊಳ್ಳುವಾಗಲೇ ಅಕಾಲಿಕವಾಗಿ ಚಿರು ನಮ್ಮನ್ನೆಲ್ಲಾ ಗೆಲ್ಲುತ್ತಾರೆ.

ಗರ್ಭಿಣಿಯಾಗಿರುವಾಗಲೇ ಮೇಘನಾ ರಾಜ್ ರವರು ತಮ್ಮ ಪತಿ ಆಗಿರುವ ಚಿರು ಸರ್ಜಾ ರವರನ್ನು ಕಳೆದುಕೊಂಡಿದ್ದು ಅವರಿಗೆ ಎಲ್ಲಿಲ್ಲದ ದುಃಖವನ್ನು ಹಾಗೂ ಜೀವನದಲ್ಲಿ ಎಲ್ಲಾ ಆಸೆಗಳನ್ನು ಉಡುಗಿ ಹೋಗುವಂತೆ ಮಾಡುತ್ತದೆ. ಅತಿ ಚಿಕ್ಕ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡಂತಹ ಪಾಡು ನಿಜಕ್ಕೂ ಕೂಡ ಯಾರಿಗೂ ಬೇಡ ಎಂದು ಮೇಘನರಾಜ್ ರವರನ್ನು ನೋಡಿದವರಲ್ಲ ಹೇಳುತ್ತಿದ್ದರು. ಚಿರು ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನರಾಜ್ ರವರು ಎಲ್ಲೂ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ. ನಂತರ ಮೇಘನಾ ರವರು ಜೂನಿಯರ್ ಚಿರು ಸರ್ಜಾ ರವರಿಗೆ ಜನ್ಮವನ್ನು ನೀಡುತ್ತಾರೆ. ನಂತರ ಮಗನಿಗಾಗಿ ಬದುಕುವ ನಿರ್ಧಾರವನ್ನು ಮಾಡುತ್ತಾರೆ.

ಇದೇ ಕಾರಣಕ್ಕಾಗಿ ಹಲವಾರು ಸಮಯಗಳಿಂದ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ಮೇಘನಾ ರಾಜ್ ರವರು ಎರಡು ಸಿನಿಮಾಗಳಿಗೆ ಸಹಿ ಹಾಕುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮಕ್ಕೆ ಖಾಯಂ ತೀರ್ಪುಗಾರರಾಗಿ ಹೋಗುತ್ತಾರೆ. ಇಷ್ಟು ಮಾತ್ರವಲ್ಲದೆ ಹಲವಾರು ಜಾಹೀರಾತುಗಳಲ್ಲಿ ಕೂಡ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್ ನಲ್ಲಿ ಕೂಡ ಮೇಘನರಾಜ್ ರವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಹೀಗಾಗಿ ಇನ್ಸ್ಟಾಗ್ರಾಮ್ ಖಾತೆಯ ಮೂಲಕವೂ ಕೂಡ ಹಲವಾರು ಪ್ರಮೋಷನ್ ಮಾಡುತ್ತಿದ್ದಾರೆ.

ಇನ್ಸ್ಟಾಗ್ರಾಂ ಖಾತೆಯಲ್ಲಿ ಹಲವಾರು ಫೋಟೋಗಳನ್ನು ಕೂಡ ಮೇಘನರಾಜ್ ಅವರು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೇ ಸೀರೆ ಯೊಂದರಲ್ಲಿ ಮೇಘನಾ ರಾಜ್ ರವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಈ ಫೋಟೋಶೂಟ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಾಕೆಂದರೆ ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಸೀರೆಯನ್ನು ತಮ್ಮ ಅತ್ತಿಗೆ ಗಾಗಿ ಧ್ರುವಸರ್ಜಾ ರವರು ತಂದುಕೊಟ್ಟಿದ್ದರು. ಇದೇ ಸೀರೆಯಲ್ಲಿ ಈಗ ಫೋಟೋಶೂಟ್ ಮಾಡಿಕೊಂಡಿರುವುದು ಕೂಡ ಬಹಳಷ್ಟು ವಿಶೇಷವಾಗಿ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *