ಸೂಪರ್ ಆಗಿ ಸೌಂಡ್ ಮಾಡುತ್ತಿದೆ ದುನಿಯಾ ವಿಜಯ್ ರವರ ಪತ್ನಿ ಕೀರ್ತಿ ರವರ ಹೊಸ ಫೋಟೋಸ್..!?

ಸುದ್ದಿ

ನಮ್ಮ ಕನ್ನಡ ಚಿತ್ರರಂಗ ಎನ್ನುವುದು ಪ್ರತಿಭೆ ಇದ್ದವರಿಗೆ ಸಲಹೆ ಪೋಷಿಸಿ ಅವಕಾಶವನ್ನು ನೀಡಿದೆ ಎಂದರೆ ತಪ್ಪಾಗಲಾರದು. ಇಲ್ಲಿ ಕೇವಲ ಹಿನ್ನೆಲೆ ಇದ್ದವರಿಗೆ ಅಥವಾ ಹಣವಿದ್ದವರಿಗೆ ಮಾತ್ರ ಅಲ್ಲ ಬದಲಾಗಿ ಪ್ರತಿಭೆ ಇದ್ದವರಿಗೆ ಮೊದಲ ಆದ್ಯತೆಯನ್ನು ವುದಾಗಿ ಹಲವಾರು ಬಾರಿ ಸಾಬೀತಾಗಿದೆ. ದುನಿಯಾ ವಿಜಯ್ ಅವರು ಕನ್ನಡ ಚಿತ್ರರಂಗಕ್ಕೆ ಮೊದಲಿಗೆ ಜೂನಿಯರ್ ಆರ್ಟಿಸ್ಟ್ ಆಗಿ ಕಾಲಿಡುತ್ತಾರೆ. ನಂತರ ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಕೂಡ ಹಲವಾರು ಬಾರಿ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ರಂಗ ಎಸೆಸೆಲ್ಸಿ ಡೆ’ಡ್ಲಿ ಆದಿತ್ಯ ನಟನೆಯ ಡೆ’ಡ್ಲಿ ಸಿನಿಮಾದಲ್ಲಿ ಖಳನಾಯಕನಾಗಿ ದೊಡ್ಡಮಟ್ಟದಲ್ಲಿ ಹೆಸರನ್ನು ಮಾಡಿದರು. ಇದೇ ರೀತಿ ಆಗಾಗ ಕನ್ನಡ ಚಿತ್ರರಂಗದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಾ ಹೋದರು ಕೂಡ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಇನ್ನು ಮೊದಲ ಬಾರಿಗೆ 2006 ರಲ್ಲಿ ದುನಿಯಾ ಚಿತ್ರದಲ್ಲಿ ನಟಿಸುವ ಮೂಲಕ ನಾಯಕನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಣಿಸಿಕೊಳ್ಳುತ್ತಾರೆ. ಮೊದಲ ಚಿತ್ರದಲ್ಲಿ ನಾಯಕನಾಗಿ ಅಭೂತಪೂರ್ವ ಯಶಸ್ಸನ್ನು ದುನಿಯಾ ವಿಜಯ್ ರವರು ಸಾಧಿಸುತ್ತಾರೆ. ದುನಿಯಾ ಸಿನಿಮಾ ಎನ್ನುವುದು ದುನಿಯಾ ವಿಜಯ್ ರವರನ್ನು ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಕರೆತಂದಿದೆ.

ನಿಮಗೆಲ್ಲ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ದುನಿಯಾ ವಿಜಯ್ ಅವರ ಜನಪ್ರಿಯತೆಯನ್ನು ವುದು ತೆಲುಗು ಚಿತ್ರರಂಗಕ್ಕೆ ಕೂಡ ವಿಸ್ತರಿಸಿದೆ. ಹೌದು ಇತ್ತೀಚಿಗಷ್ಟೇ ಬಿಡುಗಡೆಯಾಗಿರುವ ಸಲಗ ಚಿತ್ರದ ಯಶಸ್ಸಿನಿಂದಾಗಿ ಅವರ ಮಾರುಕಟ್ಟೆಯನ್ನು ವುದು ಪರಭಾಷೆಗಳಿಗೆ ಕೂಡ ವಿಸ್ತರಣೆಯಾಗಿದೆ. ಸಲಗ ಚಿತ್ರದ ಮೂಲಕ ಕೇವಲ ನಾಯಕನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿಯೂ ಕೂಡ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ. ಮಾಸ್ ಸಿನಿಮಾಗಳು ಎಂದರೆ ಇನ್ನು ಮುಂದೆ ದುನಿಯಾ ವಿಜಯ್ ಅವರನ್ನು ನೋಡಿ ಕಲಿಯಿರಿ ಎಂದು ಹೇಳಬಹುದಾಗಿದೆ. ಈಗ ಸದ್ಯಕ್ಕೆ ತೆಲುಗಿನ ಲೆಜೆಂಡರಿ ನಟರಾಗಿರುವ ಬಾಲಯ್ಯ ರವರ 107ನೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದಕ್ಕೆ ಆಯ್ಕೆಯಾಗಿದ್ದಾರೆ.

ದುನಿಯಾ ವಿಜಯ್ ರವರ ವೈವಾಹಿಕ ಜೀವನಕ್ಕೆ ಬರುವುದಾದರೆ ದುನಿಯಾ ವಿಜಯ ರವರ ಪತ್ನಿ ಕೀರ್ತಿ ಅವರು ತಮ್ಮ ಪತಿಗೆ ಸಾಕಷ್ಟು ಬೆಂಬಲವಾಗಿ ನಿಂತಿದ್ದಾರೆ. ಎಲ್ಲಾ ವಿಚಾರದಲ್ಲಿ ಕೂಡ ದುನಿಯಾ ವಿಜಯ್ ಅವರಿಗೆ ದೊಡ್ಡ ಶಕ್ತಿಯಾಗಿ ಕೀರ್ತಿ ರವರು ಕಾಣಿಸಿಕೊಂಡಿದ್ದಾರೆ. ಕೀರ್ತಿ ರವರು ಕೂಡ ಮಾಡೆಲ್ ಹಾಗೂ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಕೀರ್ತಿ ರವರು ಸೂಪರ್ ಆಕ್ಟಿವ್ ಆಗಿದ್ದಾರೆ.

ಗಂಡನ ಸಿನಿಮಾ ನಿರ್ಮಾಣ ನಿರ್ದೇಶನ ಕಾರ್ಯದಲ್ಲಿ ಹಾಗೂ ಪ್ರಮೋಷನ್ ಕಾರ್ಯದಲ್ಲಿ ಕೂಡ ಕೀರ್ತಿ ರವರು ದೊಡ್ಡ ಸಪೋರ್ಟ್ ನೀಡುತ್ತಿದ್ದಾರೆ. ನೀನು ಇತ್ತೀಚಿಗಷ್ಟೇ ಕೀರ್ತಿ ರವರು ಫೋಟೋಶೂಟ್ ಮಾಡಿಸಿಕೊಂಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದೆ. ಮಾಡರ್ನ್ ಬಟ್ಟೆಯಲ್ಲಿ ಕೀರ್ತಿ ರವರು ಮಾಡಿಕೊಂಡಿರುವ ಫೋಟೋಶೂಟ್ ಈಗ ಪ್ರತಿಯೊಬ್ಬರ ಮನಗೆದ್ದಿದೆ. ಇದೇ ರೀತಿ ದುನಿಯಾ ವಿಜಯ್ ಅವರ ಎಲ್ಲ ಕಾರ್ಯಗಳಲ್ಲಿ ಕೂಡ ಕೀರ್ತಿ ರವರು ಸಾಥ್ ನೀಡಲು ಇವರಿಬ್ಬರು ನೂರು ಕಾಲ ಚೆನ್ನಾಗಿ ಬಾಳಲಿ ಎಂದು ಹಾರೈಸೋಣ.


Leave a Reply

Your email address will not be published. Required fields are marked *