ನಮಸ್ತೆ ಪ್ರೀತಿಯ ವೀಕ್ಷಕರೇ ದಕ್ಷಿಣ ಭಾರತ ಚಿತ್ರರಂಗದ ನಟಿ ವಿಜಯಲಕ್ಷ್ಮಿಅವರು ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ತಮಾಗಾದ ನೋವನ್ನು ತೋಡಿಕೊಳ್ಳುತ್ತಿದ್ದಾರೆ. ನಟಿ ವಿಜಯಲಕ್ಷ್ಮಿ ಅವರು ತಮಿಳು ಅಲ್ಲದೇ ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಕೂಡ ಒಬ್ಬರಾಗಿದ್ದರು. ಕನ್ನಡ ಅಲ್ಲದೇ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಮತ್ತು ಧಾರಾವಾಹಿಯಲ್ಲಿ ಕೂಡ ನಟನೆಯನ್ನು ಮಾಡಿ ಇವರದ್ದೇ ಆದ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ಅಭಿನಯ ಮಾಡಿದ ನಟಿ ವಿಜಯ್ ಲಕ್ಷ್ಮಿ ಅವರು ಕನ್ನಡ ಸಿನೆಮಾರಂಗದಲ್ಲಿ ಅದ್ಭುತ ನಟಿ ಎಂಬ ಪಾತ್ರಕ್ಕೆ ಹೆಗ್ಗಳಿಕೆಯಾಗಿದ್ದಾರೆ. ಇನ್ನೂ ಇದೀಗ ಕನ್ನಡ ಚಿತ್ರರಂಗದಿಂದ ಬಹಳ ದೂರ ಉಳಿದುಕೊಂಡಿರುವ ವಿಜಯ್ ಲಕ್ಷ್ಮಿ ಅವರು ಜೀವನದಲ್ಲಿ ಬಹಳ ನೊಂದಿದ್ದಾರೆ. ಇನ್ನೂ ಮೊನ್ನೆ ತಾನೇ ವಿಜಯ್ ಲಕ್ಷ್ಮಿ ಅವರ ಅಕ್ಕನ ಅರೋಗ್ಯದಲ್ಲಿ ಬಹಳ ಏರು ಪೇರು ಆಗಿದ್ದ ಕಾರಣ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶಿವಣ್ಣ ಅವರ ಬಳಿ ಸಹಾಯವನ್ನು ಕೇಳಿದ್ದರು.ನಿಮಗೆ ಗೊತ್ತಿರುವ ಹಾಗೆ ನಟಿ ವಿಜಯ ಲಕ್ಷ್ಮಿ ಹಾಗಿ ಸೃಜನ್ ಲೋಕೇಶ್ ಅವರಿಬ್ಬರಿಗೂ ತುಂಬಾ ವರ್ಷಗಳ ಹಿಂದೆ ಮದುವೆ ಮಾಡಿಕೊಳ್ಳಲು ಅದ್ದೂರಿಯಾಗಿ ನಿಶಿತಾರ್ಥ ಕೂಡ ಮಾಡಿಕೊಂಡಿದ್ದರು.
ಇವರಿಬ್ಬರ ನಡುವೆ ನಡೆದ ನಿಶ್ಚಿತಾರ್ಥ ಇದ್ದಕಿದಂತೆ ಮುರಿದು ಬಿತ್ತು ನಂತರ ಸೃಜನ್ ಲೋಕೇಶ್ ಅವರು ಕಿರುತೆರೆ ನಟಿ ಗ್ರಿಷ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇದೀಗ ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ ವಿಜಯ ಲಕ್ಷ್ಮಿ ಅವರು ಈಗಲೂ ಕೂಡ ತನ್ನ ಅಕ್ಕನ ಜೊತೆ ಒಂಟಿ ಜೀವನ ಸಾಗಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಅವರಿಗೆ ಆಗದೇ ಇರುವ ಕಿಡಿಗೇಡಿಗಳು ಸೃಜನ್ ಅವರಿಗೆ ಕೈಕೊಟ್ಟ ಕಾರಣ ನೀವು ಬೀದಿಗೆ ಬಂದ್ದಿದ್ದೀರಿ ಎಂದು ಟ್ರೋ-ಲ್ ಮಾಡುತ್ತಿದ್ದು ಇದಕ್ಕೆ ವಿಜಯ ಲಕ್ಷ್ಮಿ ಲೈವ್ ಬಂದು ಅಂದು ನಡೆದ ನಿಜಾಂಶಗಳನ್ನು ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಈಗ ಎಲ್ಲಾ ಕಡೆ ಸೃಜನ್ ಲೋಕೇಶ್ ಅವರನ್ನು ಯಾಮಾರಿಸಿದ್ದಕ್ಕೆ ನೀವು ಬೀದಿಗೆ ಬಂದಿದ್ದೀರಿ ಎಂದು ಹೇಳುತ್ತಿದ್ದಾರೆ. ನಾನು ಯಾವ ಬೀದಿಗೆ ಬಂದಿದ್ದೀನಿ ನೋಡಿದವರು ಸ್ವಲ್ಪ ಹೇಳುತ್ತೀರಾ? ನನ್ನ ಬಗ್ಗೆ ಮಾಧ್ಯಮದವರಿಗೆ ಎಲ್ಲ ಗೊತ್ತು. ನಾನು ಹೇಗ್ ಇದ್ದೀವಿ, ಯಾರನ್ನ ಯಾಮಾರಿಸಿದ್ವಿ, ಅನ್ನೋದು ಎಲ್ಲವನ್ನು ಮಾಧ್ಯಮದವರೇ ಹೇಳುತ್ತಾರೆ. ಯಾಮಾರಿಸಿದೆ ಅನ್ನೋದು ದೊಡ್ಡ ಪದ. ನೀವು ಬೇಕಾದರೆ ಸೃಜನ್ ಅವರನ್ನೇ ಕೇಳಬಹುದು. ಅಂದು ಲಕ್ಷ ಲಕ್ಷ ಖರ್ಚು ಮಾಡಿ ಚನ್ನೈ ನಲ್ಲಿ ನಿಶ್ಚಿತಾರ್ಥ ಮಾಡಿರೋದು ನಮ್ಮ ದುಡ್ಡಿನಿಂದಲೇ ಈಗ ಹೇಳಿ ನಾನು ಯಾರನ್ನು ಯಾಮಾರಿಸಿದೆ?
ಅಷ್ಟು ದುಡ್ಡು ಖರ್ಚು ಮಾಡಿ ಎಂಗೇಜ್ಮೆಂಟ್ ಮಾಡಿದ್ದು ನಾವೇ. ಅದಾದ ಬಳಿಕ ಮದುವೆ ತಯಾರಿ ಮಾಡುತ್ತಿರುವಾಗ ಒಂದು ಮಾತು ಬಂತು ನೀವು ತಮಿಳರು. ನೀವು ಹೇಗೆ ಮಾಡಿದ್ದೀರಾ ಹಾಗೆ ಮಾಡಿದ್ದೀರಾ ನಾವು ಕನ್ನಡದವರು ಹಾಗೆ ಹೀಗೆ ಅಂತೆಲ್ಲ. ನನ್ನ ಹಾಗೂ ಸೃಜನ್ ನಡುವಿನ ಸಂಬಂಧ ಯಾವುದೇ ಬಿರುಕು ಇರಲಿಲ್ಲ. ನಾವಿಬ್ಬಬ್ಬರು ಒಳ್ಳೆಯ ಸ್ನೇಹಿತರೇ ಆಗಿದ್ವಿ. ಆದರೆ ನೀವು ತಮಿಳುನವರು ಅಂಥ ಮನಸ್ತಾಪ ಬಂತು ಆಗ ಬಹಳ ಭಾರವಾದ ಮನಸ್ಸಿನಿಂದ ಇಬ್ಬರು ಮಾತನಾಡಿಕೊಂಡು ಈ ನಿರ್ಧಾರ ತೊಗೊಂಡಿದ್ದು. ಮನೆಯಲ್ಲಿ ಈತರ ಭಾಷೆಯ ವಿಚಾರದಲ್ಲಿ ಮಸಸ್ತಾಪ ಇದ್ದಾಗ ಇದನ್ನು ಮುಂದುವರಿಸಿಕೊಂಡು ಹೋಗೋದು ಬೇಡ ಎಂದು ಹೇಳಿದೆ.
ಇದರ ಬೆನ್ನಲ್ಲೇ ವಿಜಯ ಲಕ್ಷ್ಮಿ ಅವರ ಅಂದಿನ ಪ್ರಿಯಕರನಾಗಿರುವ ಸೃಜನ್ ಅವರು ಏನು ಸಹಾಯ ಮಾಡಿದ್ದಾರೆ ಗೊತ್ತಾ.? ಹೌದು ಸೃಜನ್ ಅವರು ನಟಿ ವಿಜಯ ಲಕ್ಷ್ಮಿ ಅವರಿಗೆ ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣವನ್ನು ಸಹಾಯವನ್ನು ಮಾಡಿದ್ದು ಈ ಕುರಿತಾಗಿ ಸೃಜನ್ ಆಗಲಿ ವಿಜಯ ಲಕ್ಷ್ಮಿ ಆಗಲಿ ಎಲ್ಲೂ ಕೂಡ ಹೇಳಿ ಕೊಂಡಿಲ್ಲ. ಈ ಕುರಿತು ಸೃಜನ್ ಅವರ ಮನೆಯವರಿಗೂ ಕೂಡ ತಿಳಿದಿಲ್ಲ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.