ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಬಗ್ಗೆ ನಿಮಗೆ ಎಲ್ಲರಿಗೂ ಗೊತ್ತು. ನಿರೂಪಕಿ ಅನುಶ್ರೀ ಅಂದರೆ ಅವರ ಕೊಂಡಿದ್ದಾಕಿಂತ ಹೆಚ್ಚಾಗಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದೆ ಹೆಚ್ಚು ಕಿರುತೆರೆಯ ಅನೇಕ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವ ಅನುಶ್ರೀ ಮೂಲತಹ ಮಂಗಳೂರಿನವರು. ಅನುಶ್ರೀ ಅವರು ಮೊದಲು ಮಂಗಳೂರಿನ ನಮ್ಮ ಟಿವಿ ಚಾನೆಲ್ ಅಂತ್ಯಕ್ಷರಿ ಮ್ಯೂಸಿಕ್ ಶೋ ಮೂಲಕ ಟಿವಿ ಜರ್ನಿ ಶುರು ಮಾಡಿದರು. ಅದಾದ ನಂತರ ಅನುಶ್ರೀ ಅವರು ತಿರುಗಿ ನೋಡಿದ್ದೇ ಇಲ್ಲ.
ಅವರಿಗೆ ಬಂದ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾ ನಿರೂಪಿಸುತ್ತ ಬಂದ ಅಬರಿಗೆ ಅದೃಷ್ಟದ ಬಾಗಿಲು ತೆರೆಯಿತು. ಈ ಟಿವಿಯಲ್ಲಿ ಬಂದಿರುವ “ಡಿಮ್ಯಾಂಡಪ್ಪೋ ಡಿಮ್ಯಾಂಡ್” ಎಂಬ ಕಾರ್ಯಕ್ರಮದ ಮೂಲಕ ಇವರಿಗೆ ಒಳ್ಳೆಯ ಹೆಸರು ಕೂಡ ಸಿಕ್ಕಿತು. ಅಂದಹಾಗೆ, ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕುಣಿಯೋಣ ಬಾರ, ಕಾಮಿಡಿ ಕಿಲಾಡಿಗಳು ಹೀಗೆ ಅನೇಕ ರಿಯಾಲಿಟಿ ಶೋಗಳಲ್ಲ ನಿರೂಪಣೆ ಮಾಡಿದ್ದರೆ.
ಇನ್ನು ಚಿತ್ರದಲ್ಲಿ ಅಭಿನಯಿಸಿದ ಅನುಶ್ರೀ ಅವರು ಮೊದಲನೇ ಸಿನೆಮಾ ಬೆಂಕಿ ಪಟ್ಟಣ, ಅದಾದ ಬಳಿಕ ಮುರಳಿ ಮಿಡ್ಸ್ ಮೀರಾ, ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ ಅನುಶ್ರೀ ಅವರಿಗೆ ಈ ಚಿತ್ರಕ್ಕೆ ಕರ್ನಾಟಕ ಸ್ಟೇಟ್ ಅವಾರ್ಡ್ ಕೂಡ ದೊರಕಿತ್ತು.
ಕನ್ನಡದಲ್ಲಿ ಸೃಜನ್ ಲೋಕೇಶ್ ಅವರು ಬಿಟ್ರೆ ನಿರೂಪಣೆಯಲ್ಲಿ ಅತೀ ಹೆಚ್ಚು ಬೇಡಿಕೆ ಹೊಂದಿರುವ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ. ಅನುಶ್ರೀ ಅವರು ತಮ್ಮ ಸ್ವಂತ ಯುಟ್ಯೂಬ್ ಚಾನಲ್ ಕೂಡ ನಡೆಸುತ್ತಿದ್ದಾರೆ ಅದರಲ್ಲಿ ಸೆಲೆಬ್ರಿಟಿಗಳ ಸಂದರ್ಶನ ಮಾಡುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಅನುಶ್ರೀ ಅವರು ಚಿಕ್ಕ ವಯಸ್ಸುನಿಂದಲೂ ಕಷ್ಟಪಟ್ಟು ಬೆಳೆದು ಬಂದಿರುವ ಹೆಣ್ಣುಮಗಳು ಏನುದರಲ್ಲಿ ಅನುಮಾನವೇ ಇಲ್ಲ ಎಲ್ಲಾ ಹೆಣ್ಣುಮಕ್ಕಳಿಗೂ ಮಾದರಿಯಾಗುವಂತೆ ಅನುಶ್ರೀ ಬೆಳೆದಿದ್ದರೆ. ಅವರಿಗೆ ಎಷ್ಟೇ ಅಡೆ ತಡೆ ಗಳು ಬಂದರು ಅದನ್ನೆಲ್ಲ ಮೀರಿ ತಮ್ಮ ತಾಯಿ ಮತ್ತು ತಮ್ಮ ಸಹೋದರನನ್ನು ಬಹಳ ಚನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ವೈಯಕ್ತಿಕ ಬದುಕಿನಲ್ಲಿ ಎಷ್ಟೇ ಕಷ್ಟಗಳಿದ್ದರು ಕೂಡ ಅದನ್ನೆಲ್ಲಾ ಯಾರ ಮುಂದೆಯೂ ತೋರಿಸಿಕೊಳ್ಳಲಾಗದೆ. ನಗು ನಗುತ್ತಾ ಇದ್ದಾರೆ. ಅನುಶ್ರೀ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ನಟಿ ಅನುಶ್ರೀಯವರು ರೀಲ್ಸ್ ಗಳನ್ನು ಮಾಡುತ್ತಾ, ಆ ವಿಡಿಯೋಗಳನ್ನು ಹಂಚಿಕೊಳುತ್ತ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಕೆಲಸದ ಸಮಯದಲ್ಲಿ ಹೊರತು ಪಡಿಸಿ, ಬಿಡುವು ಸಿಕ್ಕಾಗೆಲ್ಲ ಶೋವಿನ ಸ್ಪರ್ದಿಗಳ ಜೊತೆಗೆ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ಅನುಶ್ರೀಯವರು ಸೊಂಟ ಬಳುಕಿಸಿದ್ದು, ಈ ವಿಡಿಯೋ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕನ್ನಡದ ನೊಂ 1 ನಿರೂಪಕಿ ಯಾಗಿರುವ ಅನುಶ್ರೀಯವರು ಕಳೆದ ಕೆಲವು ದಿನಗಳಿಂದ ತಂದೆಯ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಾರೆ. ಹಲವು ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿದ್ದ ಅನುಶ್ರೀ ಅವರ ತಂದೆ ಏಕಏಕಿ ಪ್ರತ್ಯಕ್ಷವಾಗಿ ಬಿಟ್ಟಿದ್ದರು. ನಿಜ ಮಾಧ್ಯಮದ ಮುಂದೆ ಬಂದಿದ್ದ ಸಂಪತ್ ಕುಮಾರ್ ಅವರು ಒಂದಿಷ್ಟು7 ಹೇಳಿಕೆಯನ್ನು ನೀಡಿದ್ದರು. ಅದರ ಜೊತೆಗೆ ಅನಾರೋಗ್ಯದ ಸಮಸ್ಸೆಯಿಂದಗಿ ಹಾಸ್ಪಿಟಲ್ ಸೇರಿದ್ದರು. ಈ ಕುರಿತು ಸುದ್ದಿಯಲ್ಲಿದ್ದ ನಟಿ ಅನುಶ್ರೀ ನೇರವಾಗಿ ತಂದೆಯ ಕುರಿತು ಇರುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.