ಸ್ಟಾರ್ ನಟಿಯರನ್ನು ನಾಚಿಸುವಂತೆ ಫೋಟೋಶೂಟ್ ಮಾಡಿಸಿದ ಮೇಘನಾ ರಾಜ್! ಅಬ್ಬಬ್ಬಾ ಇಲ್ಲಿವೆ ನೋಡಿ ಮಸ್ತ್ ಫೋಟೋಸ್ !!

ಸುದ್ದಿ

ಕನ್ನಡ ಚಿತ್ರದ ಹೆಸರಾಂತ ಕುಟುಂಬದಿಂದ ಬೆಳೆದು ಚಿಕ್ಕ ವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಇಂದಿಗೂ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನಟಿ ಮೇಘನಾ ರಾಜ್ ಅವರ ತಂದೆ ತಾಯಿ ಇಬ್ಬರು ಕನ್ನಡ ಚಿತ್ರರಂಗದ ಹಲವು ವರ್ಷಗಳಿಂದ ಸಕ್ರಿಯವಾಗಿದ್ದಾರೆ. ಹಾಗಾಗಿ ಮೇಘನಾ ರಾಜ್ ಅವರಿಗೆ ಕನ್ನಡ ಚಿತ್ರರಂಗ ಎನ್ನುವುದು ಎರಡನೇ ಮನೆ ಇದ್ದ ಹಾಗೆ. ಇಲ್ಲಿನ ಹಿರಿಯ ಕಲಾವಿದರ ಜೊತೆ ಚಿಕ್ಕ ವಯಸ್ಸಿನಿಂದಲೂ ಆಡಿಕೊಂಡು ಬೆಳೆದವರು ನಟಿ ಮೇಘನಾ ರಾಜ್
ನಟಿ ಮೇಘನಾ ರಾಜ್ ಅವರ ತಂದೆ ತಾಯಿ ತುಂಬಾ ಮುದ್ದಾಗಿ ಸಾಕಿದ್ದಾರೆ. ಆದರೆ ಈ ಚಿಕ್ಕ ವಯಸ್ಸಿನಲ್ಲಿ ಎಷ್ಟೆಲ್ಲ ಕಷ್ಟಗಳನ್ನು ಮೇಘನಾ ರಾಜ್ ಅನುಭವಿಸಬೇಕಾಗುತ್ತದೆ ಎಂದು ಚಿತ್ರರಂಗದಲ್ಲಿ ಯಾರು ಊಹಿಸಿರಲು ಸಾಧ್ಯ ಇಲ್ಲ. ಪತಿ ಅಗಲುವಿಕೆಯಾ ನೋವಿನಲ್ಲಿ ಇದ್ದ ಮೇಘನಾ ರಾಜ್, ಮುದ್ದು ಮಗನ ಆಗಮನ ದಿಂದ ಮಗ ರಾಯನ್ ನನ್ನು ನೋಡಿಕೊಳ್ಳುದರಲ್ಲೇ ಹೆಚ್ಚಿನ ಸಮಯ ಕಳೆಯಿತ್ತಿದ್ದಾರೆ.

ಇಷ್ಟ ಪಟ್ಟು ಮದುವೆಯಾದ ಪತಿಯನ್ನು ಕಳೆದುಕೊಂಡ ಮೇಲೆ ಚಿರು ನೆನಪಲ್ಲಿ ಮಗನಿದ್ದರೂ. ಚಿರು ಇಲ್ಲದೆ ಇರುವ ಒಂದು ನೋವು ಮೇಘನಾ ರಾಜ್ ಅವರ ಮನಸ್ಸಲ್ಲಿ ಇದ್ದೆ ಇರುತ್ತದೆ. ನೋವಿನಿಂದ ಹೊರಬರಲು ಹಲವು ತಿಂಗಳುಗಳ ಕಾಲ ಮೇಘನಾ ರಾಜ್ ಅವರು ಯಾವ ಮಾಧ್ಯಮ ಅಥವಾ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ.
ಮುದ್ದಿನ ಮಗ ರಾಯನ್ ನಾಮಕರಣದ ದಿನ ಮಾಧ್ಯಮದ ಮುಂದೆ ಬಂದ ಮೇಘನಾ ರಾಜ್ ಹಲವು ವಿಚಾರಗಳನ್ನು ಮುಕ್ತವಾಗಿ ಮಾಧ್ಯಮ ಮುಂದೆ ಹಂಚಿಕೊಂಡರು. ಈಗಿನ ಜೀವನ ಹೇಗಿದೆ ಎಂಬುದನ್ನು ವಿವರಿಸಿದರು. ಹಾಗೆಯೇ ಮಗನಿಗಾಗಿ ಮಗನ ಭವಿಷ್ಯಕ್ಕಾಗಿ ನಟನೆಗೆ ಮರಳಿ ಬರುತ್ತೇನೆ, ಸಿನೆಮಾನೇ ನನ್ನ ಜಗತ್ತು ಬಿಟ್ಟು ಬೇರೆ ಏನು ಗಿತ್ತಿಲ್ಲ ಎಂದು ಸಹ ನಟಿ ಮೇಘನಾ ರಾಜ್ ಹೇಳಿದ್ದಾರೆ.

ಮಗನ ಹುಟ್ಟುಹಬ್ಬದ ದಿನ ಮೇಘನಾ ರಾಜ್ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿರುವ ಸಂತೋಷದ ವಿಚಾರವನ್ನು ಖುದ್ದಾಗಿ ಮೇಘನಾ ರಾಜ್ ಅವರೇ ಹೇಳಿದ್ದಾರೆ. ಮೇಘನಾ ರಾಜ್ ಅಭಿನಯದ ಹೊಸ ಸಿನಿಮಾವನ್ನು ಮೇಘನಾ ರಾಜ್ ಹಾಗೂ ಚಿರು ಅವರ ಗೆಳೆಯನಾದ ಪನ್ನಗ ಭಾರಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ಮೇಘನಾ ರಾಜ್ ಅವರು ಫೋಟೋಶೂಟ್ ಗಳಿಗೆ ಪೋಸ್ ನೀಡಿ ಅವುಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನೀಲಿ ಶೇಡ್ ಗಳಿರುವ ಗ್ರಾಂಡ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಮೇಘನಾ ರಾಜ್. ಈ ಹೊಸ ಫೋಟೋ ಗಳನ್ನು ಶೇರ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ ಅವರ ಅಭಿಮಾನಿಗಳು ಕೂಡ ತುಂಬಾ ಖುಷಿಯಾಗಿದ್ದರೆ. ನೀವು ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *