ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ! ಹುಡುಗ ಯಾರು ಗೊತ್ತಾ.?

ಸುದ್ದಿ

ಚಂದನವನದ ಚಂದದ ಖ್ಯಾತ ನಿರೂಪಕಿ ಅನುಶ್ರೀ ಅವರಿಗೆ ಮದುವೆಯಾಗಲು ಸಜ್ಜಗಿದ್ದರೆ. ಹಾಸೆಮಣಿ ಇರೋದಕ್ಕೆ ಸತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ ಬನ್ನಿ ಮುಂದೆ ಓದೋಣ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಿರೂಪಕಿ ಯಾರು ಎಂದು ಕೇಳಿದರೆ ಅನುಶ್ರೀ ಅವರು ಎಂಬುದಾಗಿ ಚಿಕ್ಕಮಕ್ಕಳು ಕೂಡ ಹೇಳುತ್ತಾರೆ. ಅಷ್ಟರಮಟ್ಟಿಗೆ ಕರ್ನಾಟಕದ ಮೂಲೆಮೂಲೆಯಲ್ಲೂ ಕೂಡ ಅನುಶ್ರೀ ಅವರ ಹೆಸರು ಜನಪ್ರಿಯವಾಗಿದೆ. ಆದರೆ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಗೂ ಬಹು ಮೆಚ್ಚಿನ ನಿರೂಪಕಿಯಾಗಿ ರೂಪುಗೊಳ್ಳಲು ಅನುಶ್ರೀ ಅವರಿಗೆ ಯಾರು ಕೂಡ ಸಹಾಯ ಮಾಡಿರಲಿಲ್ಲ.

ಕರಾವಳಿ ಕ್ಷೇತ್ರದಿಂದ ಏನನ್ನಾದರೂ ಜೀವನದಲ್ಲಿ ಸಾಧಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ತಾಯಿಯನ್ನು ಹಾಗೂ ತಮ್ಮನ್ನು ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಮೊದಮೊದಲಿಗೆ ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡಿದರು ಕೂಡ ಕೈತುಂಬ ಸಂಬಳ ಸಿಗುವುದಿಲ್ಲ. ಆದರೂ ಕೂಡ ಅನುಶ್ರೀ ಅವರು ಎಲ್ಲೂ ತಮ್ಮ ಸೋಲನ್ನು ಒಪ್ಪಿಕೊಳ್ಳದೆ ಛಲಬಿಡದ ತ್ರಿವಿಕ್ರಮನಂತೆ ಇನ್ನಷ್ಟು ಪ್ರಯತ್ನ ಪಡುತ್ತಾರೆ. ಮೊದಲಿಗೆ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುವ ಅಂತಹ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಒಂದಾದ ಮೇಲೊಂದರಂತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತಾರೆ.

ಆದರೆ ನಿಜವಾಗಿ ಅವರ ಅದೃಷ್ಟ ಖುಲಾಯಿಸೋದು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೂಲಕ ಎಂದರೆ ತಪ್ಪಾಗಲಾರದು. ಸರಿಗಮಪ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕರ್ನಾಟಕದ ಪ್ರತಿಯೊಂದು ಮನೆಮನೆಗೂ ಕೂಡ ತಲುಪುತ್ತಾರೆ. ಕಿರುತೆರೆ ವೀಕ್ಷಕರ ನೆಚ್ಚಿನ ನಿರೂಪಕಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.

ಈಗ ಪ್ರತಿಯೊಂದು ಸಿನಿಮಾ ಕಾರ್ಯಕ್ರಮಗಳಿಗೂ ಕೂಡ ಅನುಶ್ರೀ ಅವರೇ ನಿರೂಪಕಿಯಾಗಿ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಮಧ್ಯರಾತ್ರಿ ಎರಡು ಗಂಟೆಗೆ ಅವರಿಗೆ ಮಾಹಿತಿ ನೀಡಿದರೂ ಕೂಡ ಸೂಪರ್ ಆಕ್ಟಿವ್ ಆಗಿ ಕಾರ್ಯಕ್ರಮವನ್ನು ನಿರೂಪಕಿಯಾಗಿ ನಡೆಸಿಕೊಡುತ್ತಾರೆ. ನಿಜಕ್ಕೂ ಕೂಡ ಅನುಶ್ರೀ ಅವರು ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.

ಇನ್ನು ಅನುಶ್ರೀ ಅವರಿಗೆ ವಯಸ್ಸು 32 ಆದರೂ ಕೂಡ ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವುದಾಗಿ ಅವರ ಅಭಿಮಾನಿಗಳು ಹಾಗೂ ಪ್ರೇಕ್ಷಕರು ಕೇಳುತ್ತಲೇ ಇರುತ್ತಾರೆ. ಆದರೆ ಅದಕ್ಕೊಂದು ಕಾರಣ ಕೂಡ ಇದೆ. ಅನುಶ್ರೀ ಅವರಿಗೆ ಇನ್ನು ಕೂಡ ಬದುಕಿನಲ್ಲಿ ಸಾಧಿಸುವುದು ಬಹಳಷ್ಟಿದೆ. ಇತ್ತೀಚೆಗಷ್ಟೇ ತಮ್ಮ ಅಮ್ಮನಿಗಾಗಿ ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಇದೇ ರೀತಿ ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಆಗುತ್ತಿದೆ ಅಂತ ಸ್ವತಃ ಅನುಶ್ರೀ ಅವರೇ ತಮ್ಮ ಮನದ ಮಾತುಗಳನ್ನು ಖಾಸಗಿ ಶೋವೊಂದರಲ್ಲಿ ತಾನು ಮದುವೆಯಾಗಬೇಕು ಎಂದು ಹೇಳಿದ್ದಾರೆ.

ಅದೇನೇ ಇರಲಿ ಅನುಶ್ರಿ ಅವರ ಚುರುಕುತನಕ್ಕೆ ಯಾರು ಕೂಡ ಸರಿಸಾಟಿ ಇಲ್ಲ ಎಂದು ಅನುಮಾನವಿಲ್ಲದೆ ಹೇಳಬಹುದಾಗಿದೆ. ಇತ್ತೀಚಿಗೆ ಹಲವಾರು ವಿಚಾರಗಳಲ್ಲಿ ಸಿಲುಕಿಕೊಂಡರು ಕೂಡ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದರು. ಇದೇ ರೀತಿ ಅವರಿಗೆ ಇನ್ನೂ ಹೆಚ್ಚೆಚ್ಚು ಅವಕಾಶಗಳು ಹುಡುಕಿಕೊಂಡು ಬರಲಿ ಎಂದು ಆಶಿಸೋಣ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *