ಕಳೆದ ವರ್ಷ ಪ್ರೇಮಿಗಳ ದಿನದಂದು (ಫೆ.14) ಸಪ್ತಪದಿ ತುಳಿದಿದ್ದ ಸ್ಯಾಂಡಲ್ವುಡ್ನ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್, ಈಗ ಹನಿಮೂನ್ ಪ್ರವಾಸಕ್ಕೆ ತೆರಳಿದ್ದಾರೆ. ಅಂದಹಾಗೆ, ಈ ಜೋಡಿ ತಮ್ಮ ಹನಿಮೂನ್ ಪ್ರವಾಸಕ್ಕೆ ಆಯ್ಕೆ ಮಾಡಿಕೊಂಡಿರುವ ಜಾಗ ಮಾಲ್ಡೀವ್ಸ್! ಈಚೆಗೆ ಅನೇಕ ತಾರೆಯರು ಮಾಲ್ಡೀವ್ಸ್ ಸಮುದ್ರ ತೀರಕ್ಕೆ ಹೋಗಿಬಂದಿದ್ದಾರೆ. ನಟಿ ಕಾಜಲ್ ಮತ್ತು ಗೌತಮ್ ಕಿಚಲು ದಂಪತಿ ಕೂಡ ಹನಿಮೂನ್ಗೆ ಮಾಲ್ಡೀವ್ಸ್ಗೆ ಹೋಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಮಕ್ಕಳ ಜೊತೆಗೆ ಮಾಲ್ಡೀವ್ಸ್ಗೆ ಹೋಗಿ ಒಂದಷ್ಟು ದಿನ ಇದ್ದು ಬಂದಿದ್ದರು.
ಇದೀಗ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಕೂಡ ಮಾಲ್ಡೀವ್ಸ್ ನೀಲಿ ಸಮುದ್ರ ತೀರದಲ್ಲಿ ಕಾಲ ಕಳೆಯುತ್ತಿದೆ. ಸದ್ಯ ಡಾರ್ಲಿಂಗ್ ಕೃಷ್ಣ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಿಲನಾ ಅವರ ಒಂದು ವಿಡಿಯೋವನ್ನು ಸಹ ಅವರು ಅಪ್ಲೋಡ್ ಮಾಡಿದ್ದು, ಸಾಕಷ್ಟು ಮೆಚ್ಚುಗೆಗಳು ಬಂದಿದೆ.
ಇನ್ನು ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದಂತಹ ಲವ್ ಮಾಕ್ಟೇಲ್ ಚಿತ್ರದ ಗೆಲುವಿನ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಈ ಚಿತ್ರವನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ನೀಡುವ ಮೂಲಕ ಎಂದೆಂದು ಮರೆಯಲಾರದಂತಹ ಸಿನಿಮಾ ಅನುಭವವನ್ನು ನೀಡಿತ್ತು. ಆದರೆ ಈ ಚಿತ್ರವನ್ನು ಮಾಡಲು ಪಟ್ಟಂತಹ ಕಷ್ಟ ಕಂಡಿತವಾಗಿ ಯಾರಿಗೂ ಕೂಡ ತಿಳಿದಿರುವುದಿಲ್ಲ.
ಹೌದು ಲವ್ ಮಾಕ್ಟೇಲ್ ಸಿನಿಮಾಗೂ ಮೊದಲು ನಿಮಗೆಲ್ಲರಿಗೂ ಗೊತ್ತಿರುವಂತೆ ಡಾರ್ಲಿಂಗ್ ಕೃಷ್ಣ ರವರು ಹಲವಾರು ಫ್ಲಾಪ್ ಸಿನಿಮಾಗಳಿಂದ ಕಂಗೆಟ್ಟಿದ್ದರು. ಇನ್ನು ಲವ್ ಮಾಕ್ಟೇಲ್ ಚಿತ್ರದ ಸಂದರ್ಭದಲ್ಲಿ ನಡೆದಂತಹ ಹಲವಾರು ವಿಚಾರಗಳನ್ನು ಲವ್ ಮಾಕ್ಟೇಲ್ 2 ಸಿನಿಮಾದ ಕಾರ್ಯಕ್ರಮವೊಂದರಲ್ಲಿ ಎಲ್ಲರ ಎದುರುಗಡೆ ಡಾರ್ಲಿಂಗ್ ಕೃಷ್ಣರವರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಸಂದರ್ಭದಲ್ಲಿ ಏನನ್ನು ಹೇಳಿದ್ದಾರೆ ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ.
ಹೌದು ಗೆಳೆಯರೇ ಡಾರ್ಲಿಂಗ್ ಕೃಷ್ಣರವರು ಲವ್ ಮಾಕ್ಟೇಲ್ ಸಿನಿಮಾಗಾಗಿ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದರು. ಅದಾಗಲೇ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ರವರು ಮದುವೆಯಾಗುವುದು ಎನ್ನುವುದಾಗಿ ತೀರ್ಮಾನವಾಗಿತ್ತು. ಇಬ್ಬರೂ ಸೇರಿಕೊಂಡು ಸಾಲಸೋಲ ಮಾಡಿಕೊಂಡು ಸಿನಿಮಾವನ್ನು ನಿರ್ಮಿಸುತ್ತಾ. ಮೇಕಪ್ ನಿಂದ ಹಿಡಿದು ನಿರ್ದೇಶನ ತನಕ ಎಲ್ಲವನ್ನು ಇಬ್ಬರೇ ನೋಡಿಕೊಳ್ಳುತ್ತಿದ್ದರು.
ಚಿತ್ರೀಕರಣವನ್ನು ದಿನಕ್ಕೆ 20ರಿಂದ 30 ಸಾವಿರ ರೂಪಾಯಿ ಖರ್ಚಿನ ಒಳಗಡೆ ಗಾಗಿ ಮುಗಿಸಿ ಬಿಡುತ್ತಿದ್ದರು. ಚಿತ್ರ ಬಿಡುಗಡೆಯಾದಾಗ ಮೊದ-ಮೊದಲಿಗೆ ನಿರೀಕ್ಷಿತ ಪ್ರದರ್ಶನವನ್ನು ಕಾಣದೆ ಬಾಕ್ಸಾಫೀಸ್ ನಲ್ಲಿ ಕೂಡ ಮಂಕಾಗಿ ಕುಳಿತಿತ್ತು. ಇದರಿಂದಾಗಿ ಡಾರ್ಲಿಂಗ್ ಕೃಷ್ಣರವರು ಸಾಕಷ್ಟು ಡಿಪ್ರೆಶನ್ ಗೆ ಹೋಗಿದ್ದರು.
ತಮ್ಮ ಜೀವನವನ್ನು ಕೊನೆಗಾಣಿಸುವ ನಿರ್ಧಾರಕ್ಕೆ ಕೂಡಾ ಡಾರ್ಲಿಂಗ್ ಕೃಷ್ಣರವರು ಬಂದಿದ್ದರಂತೆ. ನಂತರ ಮಿಲನಾ ನಾಗರಾಜ್ ರವರ ಮುಖವನ್ನು ನೋಡಿ ಆ ಯೋಚನೆಯನ್ನು ಬಿಟ್ಟು ಬಿಟ್ಟಿದ್ದರಂತೆ. ನಂತರದ ದಿನಗಳಲ್ಲಿ ಲವ್ ಮಾಕ್ಟೇಲ್ ಯಾವ ರೀತಿಯ ವಿಜಯವನ್ನು ಸಾಧಿಸಿದೆ ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಲವ್ ಮಾಕ್ಟೇಲ್ 2 ಕೂಡ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಜಯವನ್ನು ಸಾಧಿಸಿದೆ.
ಕಷ್ಟ ಪಟ್ಟರೆ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನುವುದಕ್ಕೆ ಇದೇ ಜೀವಂತ ಉದಾಹರಣೆ. ಸದ್ಯ ಈ ಮುದ್ದಾದ ಜೋಡಿಗಳು ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ. ಈ ಜೋಡಿಗಳ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ