ಹಾಟ್ ಡ್ರೆಸ್ ನಲ್ಲಿ ಬಳ್ಳಿಯಂತೆ ಬಳಕುವ ನಟಿ ವೈಷ್ಣವಿ ಗೌಡ ರವರ ಮಸ್ತ್ ಡಾನ್ಸ್ ಈಗ ಭಾರಿ ವೈರಲ್! ನೋಡಿ ಮಸ್ತ್ ಡಾನ್ಸ್ ವಿಡಿಯೋ!!

ಸುದ್ದಿ

ಕನ್ನಡದ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಎಂದರೆ ಬಿಗ್ ಬಾಸ್. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಡೆಸಿಕೊಡುವ ಈ ಕಾರ್ಯಕ್ರಮ ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇನ್ನು ಒಮ್ಮೆ ಬಿಗ್ಬಾಸ್ ಮನೆಗೆ ಹೋದರೆ ಸಾಕು ಖಂಡಿತವಾಗಿ ಜನಪ್ರಿಯತೆ ಸಿಕ್ಕೇ ಸಿಗುತ್ತದೆ ಎಂಬುದಾಗಿ ಎಲ್ಲರಲ್ಲೂ ನಂಬಿಕೆ ಇದೆ. ಇದು ಹಲವಾರು ಬಾರಿ ಸಾಬೀತು ಕೂಡ ಆಗಿದೆ. ಬಿಗ್ ಬಾಸ್ ನಲ್ಲಿ ಭಾಗವಹಿಸಿದವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದಿವೆ.

ಕಳೆದ ಬಿಗ್ ಬಾಸ್ ನಲ್ಲಿ ಭಾಗವಹಿಸಿದಂತಹ ವೈಷ್ಣವಿ ಗೌಡರವರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ವೈಷ್ಣವಿ ಗೌಡ ಎಂದಾಕ್ಷಣ ನಮಗೆ ನೆನಪಾಗುವುದು ಅವಳ ಅಗ್ನಿಸಾಕ್ಷಿ ಧಾರಾವಾಹಿ. ಇದಕ್ಕಿಂತ ಮುಂಚೆ ಹಲವಾರು ಬಾರಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು ಕೂಡ ಅವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯ ಅಗ್ನಿಸಾಕ್ಷಿ ಧಾರವಾಹಿ. ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ಸನ್ನಿಧಿ ಪಾತ್ರದಲ್ಲಿ ಕನ್ನಡಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇಂದಿಗೂ ಕೂಡ ವೈಷ್ಣವಿ ಅವರನ್ನು ಸನ್ನಿಧಿ ಎಂಬುದಾಗಿ ಕರೆಯುವರು ಸಾಕಷ್ಟು ಜನ ಇದ್ದಾರೆ. ಧಾರವಾಹಿ ಪಾತ್ರವೊಂದು ಪ್ರೇಕ್ಷಕರ ಮನದಲ್ಲಿ ಇಷ್ಟೊಂದು ಪರಿಣಾಮ ಬೀರುತ್ತದೆ ಎಂದರೆ ನಾವು ನಂಬಲೇ ಬೇಕು.

ಕಳೆದ ಬಾರಿಯ ಬಿಗ್ ಬಾಸ್ ನಲ್ಲಿ ಭಾಗವಹಿಸಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಲಕ್ಷಾಂತರ ಅಭಿಮಾನಿಗಳನ್ನು ವೈಷ್ಣವಿ ಗೌಡ ಹೊಂದಿದ್ದಾರೆ. ಆಗಾಗ ಕಿರುತೆರೆಯ ಕಾರ್ಯಕ್ರಮಗಳಲ್ಲಿ ವೈಷ್ಣವಿ ಗೌಡರವರು ಕಾಣಿಸಿಕೊಳ್ಳುತ್ತಾರೆ. ಬಿಗ್ ಬಾಸ್ ನಿಂದ ಹೊರ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈಷ್ಣವಿ ಗೌಡ ಅವರ ಅಭಿಮಾನಿಗಳು ಯಾವಾಗ ಮದುವೆ ಆಗುತ್ತೀರಿ ಎಂಬುದಾಗಿ ಕೇಳುತ್ತಲೇ ಇದ್ದಾರೆ. ವೈಷ್ಣವಿ ಗೌಡರವರು ಕೂಡ ಅತಿಶೀಘ್ರದಲ್ಲಿ ಎಂದು ಉತ್ತರ ನೀಡುತ್ತಲೇ ಬಂದಿದ್ದಾರೆ. ಆದರೆ ಈ ಅತಿಶೀಘ್ರ ಯಾವಾಗ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇಂದು ನಾವು ಮಾತನಾಡಲು ಹೊರಟಿರುವುದು ಬೇರೆ ವಿಚಾರ.

ಹೌದು ವೈಷ್ಣವಿ ಗೌಡರವರ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ದೊಡ್ಡಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಬಿಳಿ ಬಟ್ಟೆಯಲ್ಲಿ ವೈಷ್ಣವಿ ಗೌಡರವರು ಸುಂದರವಾಗಿ ಕಾಣಿಸಿಕೊಂಡು ವಿಡಿಯೋ ಕೂಡ ಚೆನ್ನಾಗಿ ಮೂಡಿ ಬರುವಂತೆ ಮಾಡಿದ್ದಾರೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲೂ ಈ ವೀಡಿಯೋದೇ ಸುದ್ದಿ. ನೀವು ಕೂಡ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ. ವೈಷ್ಣವಿ ಗೌಡ ಹಾಗೂ ವಿಡಿಯೋದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.


Leave a Reply

Your email address will not be published. Required fields are marked *