ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮಗ ಪಂಕಜ್ ಅವರ ಮದುವೆ ಸಂಭ್ರಮ ಹೇಗಿತ್ತು ಗೊತ್ತಾ! ಹುಡುಗಿ ಯಾರು ನೋಡಿ ಶಾಕ್ ಆಗ್ತೀರಾ

ಸುದ್ದಿ

ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕರಾದ ಎಸ್ ನಾರಾಯಣ್ ಅವರ ಮನೆಯ ಮದುವೆ ಸಂಭ್ರಮದ ಸುಂದರ ಕ್ಷಣಗಳು ನಾವು ಇಂದು ನಿಮಗೆ ತೋರಿಸ್ತೀವಿ ಬನ್ನಿ. ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಅವರ ಮಗ ಪಂಕಜ್ ಅವರು ಇತ್ತೀಚಿಗೆ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಎಸ್ ನಾರಾಯಣ್ ಅವರ ಮದುವೆ ಸಂಭ್ರಮಕ್ಕೆ ಕನ್ನಡ ಚಿತ್ರರಂಗದ ಗಣ್ಯರು ಮತ್ತು ಹಲವಾರು ಸ್ನೇಹಿತರು, ಹಾಗೂ ಕುಟುಂಬಸ್ಥರು ಭಾಗವಹಿಸಿ ಈ ಹೊಸ ನೂತನ ಮದುಮಕ್ಕಳಿಗೆ ಶುಭಹಾರೈಸಿದ್ದಾರೆ.. ನಾರಾಯಣ್ ಅವರ ಮಗ ಪಂಕಜ್ ಅವರ. ಮದುವೆ ಸಂಭ್ರಮ ನಡೆದಿರುವುದು ಮೈಸೂರಿನ ಸ್ಪೆಕ್ಟ್ರಾ ಕಾನ್ವೆಂಷನ್ ಹಾಲ್ ನಲ್ಲಿ. ಪಂಕಜ್ ಅವರು ರಕ್ಷಿತಾ ಎನ್ನುವರ ಜೊತೆಗೆ ಮದುವೆ ನಡೆದಿದೆ. ಮುದ್ದು ಮಗನ ಮದುವೆ ತಯಾರಿ ಸಾಕಷ್ಟು ದಿನಗಳಿಂದ ಫುಲ್ ತಯಾರಿ ಮಾಡಿಕೊಂಡಿದ್ದರು. ಈ ಕೊರೋನ ಇದ್ದ ಕಾರಣ ಮದುವೆಯನ್ನು ಮುಂದೆ ಹಾಕಲಾಗಿತ್ತು. ಈಗ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಮದುವೆ ನಡೆದಿದೆ ಮಾಡಗುವೆ ಸ್ಯಾಂಡಲ್ವುಡ್ ನಾ ಸಾಕಷ್ಟು ದೊಡ್ಡ ವ್ಯಕ್ತಿಗಳು ಭಾಗಿಯಾಗಿದ್ದರು.

ಕರ್ನಾಟಕ ಜನರಿಗೆ ಗೊತ್ತಿರುವ ಹಾಗೇ ಡಾ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ರು. ಹಾಗಾಗಿ ವಿಷ್ಣುವರ್ಧನ್ ಅವರ ಪತ್ನಿ ಕುಟುಂಬದ ಜೊತೆಗೆ ಬಂದು ಎಸ್. ನಾರಾಯಣ್ ಅವರ ಮಗನ ಮದುವೆಗೆ ಬಂದು ಶುಭ ಕೊರಿದ್ದಾರೆ. ನಟಿ ಶ್ವೇತಾ ಚಂಗಪ್ಪ ಸೇರಿದಂತೆ ಇನ್ನು ಹಲವು ಚಿತ್ರರಂಗದ ಗಣ್ಯರು ಗಣ್ಯರು ಪಂಕಜ್ ಹಾಗೂ ರಕ್ಷಿತಾ ಅವರ ಮದುವೆಗೆ ಬಂದು ದಂಪಗಳನ್ನು ಆಶೀರ್ವಾದ ಮಾಡಿದ್ದಾರೆ.

ಪಂಕಜ್ ಅವರು 16ವರ್ಷ ಇದ್ದಾಗಲೇ ಚಿತ್ರದ ಚಂದ್ರಮ ಸಿನಿಮಾ ಮೂಲಕ ನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ನಂತರ ಚಲುವಿನ ಚಿಲಿ ಪಿಲಿ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದರು. ನಂತರ ದುಷ್ಟ ಮತ್ತು ದಾಂಡಿಗ ಚಿತ್ರಗಳಲ್ಲಿ ನಟಿಸಿದ್ದರು. ಹಾಗೂ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಹ ನಟಿಸಲು ಶುರು ಮಾಡಿದರು ಅವರು ಪೋಷಕ ಪಾತ್ರ ನಟನೆಯ ಚಿತ್ರಗಳು ದಕ್ಷ, ಒಡೆಯ, ಈ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

ಇತ್ತೀಚಿಗೆ ಪಂಕಜ್ ಅವರ ಮದುವೆ ನಡೆದಿದ್ದು. ಇವರ ವೈವಾಹಿಕ ಜೀವನ ಸುಂದರವಾಗಿರಲಿ ಎಂದು ಎಲ್ಲರೂ ಹಾರೈಸೋಣ. ಇನ್ನು ಎಸ್ ನಾರಾಯಣ್ ಅವರ ಮಗ ಪಂಕಜ್ ಹಾಗೂ ದರ್ಶನ್ ಇಬ್ಬರು ಒಳ್ಳೆಯ ಸ್ನೇಹಿತರು ಇತ್ತೀಚಿಗೆ ಬಿಡುಗಡೆಯದ ದರ್ಶನ್ ಅವರ ಒಡೆಯ ಚಿತ್ರದಲ್ಲಿ ಕೂಡ ಪಂಕಜ್ ಅವರನ್ನು ಮುಖ್ಯ ಪಾತ್ರವನ್ನು ಮಾಡಿಸಿದ್ದಾರೂ. ಪಂಕಜ್ ಹಾಗೂ ರಕ್ಷಿತಾ ಅವರ ಮದುವೆಗೆ ಡಿಬಾಸ್ ಶುಭಕೋರಿದ್ದಾರೆ. ದರ್ಶನ್ ಅವರು ತಮ್ಮ ಸ್ನೇಹಿತರದ ವಿನೋದ್ ಹಾಗೂ ಚಿಕ್ಕಣ್ಣ ಅವರ ಜೊತೆಗೆ ಮದುವೆಗೆ ಬಂದು ಮದುಮಕ್ಕಳಿಗೆ ಆಶೀರ್ವಾದ ಮಾಡಿದರು.
ಸ್ಯಾಂಡಲ್ವುಡ್ ನಾ ಹಿರಿಯ ನಟ ಎಸ್ ನಾರಾಯಣ್ ಅವರ ಮಗ ಪಂಕಜ್ ಅವರ ಮದುವೆಯನ್ನು ತುಂಬಾ ಸರಳ ರೀತಿಯಲ್ಲಿ ಮಾಡಿದ್ದು, ಕೇವಲ ಅವರ ಕುಟುಂಬದವರನ್ನು ಕನ್ನಡ ಚಿತ್ರರಂಗದ ಕೆಲವು ಗಣ್ಯರು ಬಂದಿದ್ದರು. ಪಂಕಜ್ ಅವರ ಮದುವೆಗೆ ಹಿರಿಯ ನಟಿ ಸುಧಾರಣಿ , ಸೃಜನ್ ಲೋಕೇಶ್, ಗಿರಿಜಾ ಲೋಕೇಶ್, ನಿರ್ದೇಶಕ ಯೋಗರಾಜ್ ಭಟ್, ಡಾ. ವಿಷ್ಣುವರ್ಧನ್ ಕುಟುಂಬ ಸೇರಿದಂತೆ ಕೆಲವು ಗಣ್ಯರು ಬಂದು ಜೋಡಿಗೆ ಶುಭ ಕೊರಿದ್ದಾರೆ. ಪಂಕಜ್ ಇಲ್ಲಿಯವರೆಗೆ ಸುಮಾರು 5 ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಬಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಎಸ್. ನಾರಾಯಣ್ ಅವರು ತನ್ನ ಮಗನನ್ನು ದೊಡ್ಡ ಹೀರೋ ಮಾಡಬೇಕೆಂದು ಎಸ್. ನಾರಾಯಣ್ ಅವರು ಕನಸು ಕಂಡಿದ್ದರು. ಅವರ ಕನಸುಗಳು ಆದಷ್ಟು ಬೇಗ ನೆರವೇರಲಿ ಎಂದು ಚಿತ್ರಪ್ರೇಮಿಗಳದ ನಾವು ಹಾರೈಸೋಣ. ಇನ್ನು ಪುತ್ರ ಪಂಕಜ್ ಅವರಿಗೆ ತಂದೆ ಒಂದು ಹೊಸ ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಆ ಸಿನಿಮಾದ ಬಗ್ಗೆ ಅತೀ ಶೀಘ್ರದಲ್ಲಿ ನಾರಾಯಣ್ ಅವರು ಅಭಿಮಾನಿಗಳಿಗೆ ತಿಳಿಸಲಿದ್ದಾರೆ ಎಂಬ ಮಾಹಿತಿ ಲಭ್ಯ ವಾಗಿದೆ.
ನೀವು ಕೂಡ ಈ ಹೊಸ ಜೋಡಿಗಳಿಗೆ ಶುಭ ಹಾರೈಸಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು


Leave a Reply

Your email address will not be published. Required fields are marked *