ಹುಟ್ಟುಹಬ್ಬದ ಸಂದರ್ಭದಲ್ಲಿ ಸಿಕ್ಕಿಬಿಡ್ತು ಅಪ್ಪು ಬರೆದ ಪತ್ರ; ಅಪ್ಪು ಪತ್ರದಲ್ಲಿ ಏನು ಬರೆದಿದ್ದರು ಗೊತ್ತಾ..!?

Cinema information

ಈ ಬಾರಿ ಮೊದಲ ಬಾರಿಗೆ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಇಲ್ಲದೆ ಯಾವ ಹುಟ್ಟುಹಬ್ಬವನ್ನು ಅವರ ಬಂಧು ಮಿತ್ರರು ಹಾಗೂ ಅಭಿಮಾನಿಗಳು ಆಚರಿಸುತ್ತಿದ್ದಾರೆ ಇದು ನಿಜ ಕೂಡ ದುಃಖಕರವಾದ ವಿಚಾರವಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮೊದಲಿನಿಂದಲೂ ಕೂಡ ಅಭಿಮಾನಿಗಳೊಂದಿಗೆ ಜನ್ಮದಿನದ ಮುಂಚಿನ ದಿನದ ರಾತ್ರಿಯ ಸಮಯದಿಂದಲೇ ಪ್ರಾರಂಭವಾಗಿ ಇಡೀ ದಿನ ಅಭಿಮಾನಿಗಳೊಂದಿಗೆ ದಿನವನ್ನು ಕಳೆಯುವುದರ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದರು.

ಆದರೆ ಈ ಬಾರಿ ಅವರು ಇಲ್ಲ ಎನ್ನುವ ದುಃಖವನ್ನು ಮರೆಸಲು ಅವರ ಕೊನೆಯ ಸಿನಿಮಾ ವಾಗಿರುವ ಜೇಮ್ಸ್ ಚಿತ್ರವನ್ನು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಜೇಮ್ಸ್ ಚಿತ್ರ ದೊಡ್ಡ ಮಟ್ಟದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುತ್ತಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಇನ್ನು ಪ್ರತಿ ಹುಟ್ಟುಹಬ್ಬದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಪತ್ರವನ್ನು ಬರೆಯುತ್ತಿದ್ದರಂತೆ.

ಈ ಬಾರಿ ಕೂಡ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಬರೆದಿರುವಂತಹ ಪತ್ರ ದೊರಕಿದೆ ಎಂಬುದಾಗಿ ಕೇಳಿಬಂದಿದೆ. ಹಾಗಿದ್ದರೆ ಆ ಪತ್ರದಲ್ಲಿ ಏನಿದೆ ಎಂಬುದನ್ನು ತಪ್ಪದೇ ವಿವರವಾಗಿ ತಿಳಿಯೋಣ ಬನ್ನಿ. ತಪ್ಪದೇ ಲೇಖನಿಯನ್ನು ಕೊನೆಯವರೆಗೂ ಓದುವುದರ ಮೂಲಕ ವಿಚಾರವನ್ನು ವಿವರವಾಗಿ ತಿಳಿಯಿರಿ.

ಪ್ರತಿವರ್ಷ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ತಮ್ಮ ಪತ್ನಿಗಾಗಿ ವಿಶೇಷವಾದ ಪತ್ರವೊಂದನ್ನು ಬರೆಯುತ್ತಿರುತ್ತಾರೆ. ಪುನೀತ್ ರಾಜಕುಮಾರ್ ರವರು ಎಲ್ಲೇ ಇದ್ದರೂ ಕೂಡ ತಮ್ಮ ಹೆಂಡತಿಯ ಜನ್ಮದಿನದಂದು ಪತ್ರ ಬರೆಯುವುದನ್ನು ಮಾತ್ರ ಮರೆಯುತ್ತಿರಲಿಲ್ಲ.ಕಳೆದ ವರ್ಷವೂ ಕೂಡ ತಮ್ಮ ಪತ್ನಿಯ ಜನ್ಮದಿನಾಚರಣೆಯನ್ನು ಪುನೀತ್ ರಾಜಕುಮಾರ್ ಅವರು ಅದ್ದೂರಿಯಾಗಿ ಸಂಭ್ರಮದಿಂದ ಆಚರಿಸಿಕೊಂಡಿದ್ದರು.ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ರವರ ತಮ್ಮ ಪತ್ನಿಗಾಗಿ ಪ್ರೀತಿಯಿಂದ ಪತ್ರವನ್ನು ಕೂಡ ಬರೆದಿದ್ದರು. ಇವೆಲ್ಲದರ ಕುರಿತು ವಿವರವಾಗಿ ತಿಳಿಯೋಣ ಬನ್ನಿ.

ಇನ್ನು ಕಳೆದ ಬಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ ಮೆಚ್ಚಿನ ಮಡದಿ ಆಗಿರುವ ಅಶ್ವಿನಿ ಪುನೀತ್ ರಾಜಕುಮಾರ್ ರವರ ಜನ್ಮ ದಿನವನ್ನು ಹೇಗೆ ಆಚರಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಆ ದಿನದಂದು ತನ್ನ ಮಡದಿ ಹಾಗೂ ಮಕ್ಕಳೊಂದಿಗೆ 1000ಕ್ಕೂ ಅಧಿಕ ಇರುವ ವೃದ್ಧಾಶ್ರಮದಲ್ಲಿ ಕಾಲಕಳೆಯುತ್ತಾರೆ. ಅವರಿಗೆ ಸಿಹಿ ತಿನ್ನಿಸಿ ಊಟವನ್ನು ಹಾಕಿಸಿ ತಮ್ಮ ಪತ್ನಿ ಅಶ್ವಿನಿ ಅವರ ಕೈಯಿಂದಲೇ ಬಟ್ಟೆಯನ್ನು ಕೂಡ ದಾನ ಮಾಡಿದ್ದರು. ಸದಾಶಿವನಗರದ ಮನೆಗೆ ಬಂದು ತಮ್ಮ ಹೆಂಡತಿ ಮಕ್ಕಳೊಂದಿಗೆ ಸರಳವಾಗಿ ಹುಟ್ಟುಹಬ್ಬವನ್ನು ಕೂಡ ಆಚರಿಸಿಕೊಂಡಿದ್ದಾರೆ. ನಂತರ ಹೆಂಡತಿಗೆ ಬೆಲೆಬಾಳುವ ವಜ್ರದ ನೆಕ್ಲೇಸ್ ಹಾಗೂ ಒಂದು ಜೊತೆ ಕಿವಿಯೋಲೆಗಳನ್ನು ಉಡುಗೊರೆಯಾಗಿ ನೀಡಿದ್ದರು.

ಇಷ್ಟು ಮಾತ್ರವಲ್ಲದೆ ಪ್ರೀತಿಯಿಂದ ಪತ್ರವನ್ನು ಕೂಡ ತಮ್ಮ ಹೆಂಡತಿಗಾಗಿ ಬರೆದಿದ್ದರು. ಆ ಪತ್ರದಲ್ಲಿ ಅಪ್ಪು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ನಾನು ನನ್ನ ಸಿನಿಮಾ ಕಮಿಟ್ಮೆಂಟ್ ಗಳಿಂದ ಬಿಸಿ ಆಗಿರಬಹುದು ಆದರೆ ನನ್ನ ಮನಸ್ಸಿನಲ್ಲಿ ಸದಾಕಾಲ ನಿನ್ನ ಹಾಗೂ ಮಕ್ಕಳ ನೆನಪು ಖಂಡಿತವಾಗಿ ಇದ್ದೇ ಇರುತ್ತದೆ. ನಾನು ಯಾವತ್ತೂ ಕೂಡ ಕುಟುಂಬದ ಗೌರವಕ್ಕೆ ಧಕ್ಕೆ ಬರುವಂತಹ ಕೆಲಸ ಯಾವತ್ತೂ ಮಾಡುವುದಿಲ್ಲ. ನಿನ್ನ ಖುಷಿನೇ ನನ್ನ ಖುಷಿ. ಮುಂದಿನ ದಿನಗಳಲ್ಲಿ ನಮ್ಮ ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಮೂಲಕ ಚಿತ್ರದ ನಿರ್ಮಾಣದ ಸಂಪೂರ್ಣ ಜವಾಬ್ದಾರಿಯನ್ನು ನೀನೆ ವಹಿಸಿಕೊಳ್ಳಬೇಕು. ಇನ್ನು ಹಲವಾರು ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಕೆಲಸ ಮಾಡಬೇಕು ಎಂಬುದಾಗಿ ಬರೆದಿದ್ದರಂತೆ. ಆ ಪತ್ರವನ್ನು ಈಗ ಓದಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾವುಕರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


Leave a Reply

Your email address will not be published. Required fields are marked *