ನಮಸ್ತೆ ಪ್ರೀತಿಯ ವೀಕ್ಷಕರೇ ಕನ್ನಡ ಕಿರುತೆರೆ ಲೋಕಕ್ಕೆ ಅನೇಕ ನಟ ನಟಿಯರು ಪ್ರತಿ ವರ್ಷ ಪಾದಾರ್ಪಣೆ ಮಾಡುತ್ತಾ ಇರುತ್ತಾರೆ. ಹೊಸ ಹೊಸ ಧಾರಾವಾಹಿಯ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹೀಗೆ ತೆರೆಯ ಮೇಲೆ ಬಂದು ಫೇಮಸ್ ಆಗಿರುವ ನಟಿಯರಲ್ಲಿ ಕನ್ನಡದ ಸೂಪರ್ ಹಿಟ್ ಧಾರಾವಾಹಿಯ ನಟಿಯರಲ್ಲಿ ಗಟ್ಟಿಮೇಳ ಧಾರಾವಾಹಿಯ ರೌಡಿ ಬೇಬಿ ಪಾತ್ರದ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಗಟ್ಟಿ ಮೇಳ ಧಾರಾವಾಹಿ ಯಲ್ಲಿ ರೌಡಿ ಬೇಬಿ ಪಾತ್ರದಲ್ಲಿ ಗುರುತಿಸಿಕೊಂಡಿರುವ ನಟಿ ನಿಶಾ ರಾಮಕೃಷ್ಣ ಅವರು ನಿಜ ಜೀವನದಲ್ಲಿ ತುಂಬಾ ಸೈಲೆಂಟ್ ಹುಡುಗಿ.
ನಿಶಾ ಅವರು ಮಾಧ್ಯಮ ಕುಟುಂಬದಲ್ಲಿ ಹುಟ್ಟಿಬೇಳೆದವರು. ಇವರ ತಂದೆ ತಾಯಿಯ ಮುದ್ದಿನ ಮಗಳಾಗಿ ನಿಶಾ ಅವರು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಿರುತೆರೆಯಲ್ಲಿ ರೌಡಿ ಬೇಬಿಯಾಗಿ ವೀಕ್ಷಕರ ಪಾಲಿಗೆ ಅಮೂಲ್ಯಲಾಗಿ ಸಾಕಷ್ಟು ಅಭಿಮಾನಿಗಳನ್ನನು ಸಂಪಾದಿಸಿಕೊಂಡಿದ್ದಾರೆ ನಟಿ ನಿಶಾ.
ಕಿರುತೆರೆಯಲ್ಲಿ ಬರುವ ಗಟ್ಟಿಮೇಳ ಧಾರಾವಾಹಿಯಲ್ಲಿರೌಡಿ ಬೇಬಿಯಾಗಿರುವ ನಟಿ ನಿಶಾ ರಾಮಕೃಷ್ಣ ಅವರು ತುಂಬಾ ಪ್ರತಿಭವಂತ ಹುಡುಗಿಯಾಗಿದ್ದಾಳೆ. ಚಿಕ್ಕ ವಯಸ್ಸಿನಲ್ಲೆ ಸ್ಕೂಲ್ ನಲ್ಲಿ ಟ್ಯಾಲೆಂಟ್ ಹುಡುಗಿಯಾಗಿ ಗುರುತಿಸಿಕೊಂಡಿದ್ದಾಳೆ. ಆರನೇ ತರಗತಿಯಲ್ಲಿ ಇದ್ದಾಗಲೇ ಚಿಂಟು ಟಿವಿಯ ನಿರೂಪಕಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
ಇನ್ನು ಸ್ಟಾರ್ ಸುವರ್ಣದ ಸರ್ವ ಮಂಗಳ ಮಾಂಗಲ್ಯ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದರು ನಿಶಾ. ನಂತರ ನಿಶಾ ರಾಮಕೃಷ್ಣ ಅವರಿಗೆ ಬಣ್ಣದ ಜಗತ್ತು ಕೈ ಹಿಡಿಯಿತು. ನಿಶಾ ಅವರಿಗೆ ಈ ಹಿಂದನ ಧಾರಾವಾಹಿಗಳು ಅಷ್ಟೇನು ಕೈ ಹಿಡಿಯಲಿಲ್ಲ. ನಂತರ ಅವರ ಪಾಲಿಗೆ ಒಲಿದುಬಂದ ಧಾರಾವಾಹಿ ಗಟ್ಟಿಮೇಳ ಧಾರಾವಾಹಿ ಈ ಧಾರಾವಾಹಿ ನಿಶಾ ಅವರಿಗೆ ನೇಮ್ ಹಾಗೂ ಫೇಮ್ ಎರಡು ಕೊಟ್ಟಿತ್ತು.
ನಿಶಾ ಅವರು ಬರೇ ನಟನೆ ಮಾತ್ರ ಅಲ್ಲದೇ ಡ್ಯಾನ್ಸ್ ಹಾಗೂ ಶಾಸ್ತ್ರಿಯ ನೃತ್ಯ, ಹಲವು ಚಟುವಟಿಕೆಯ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಡಿದ್ದಾರೆ. ಇವರ ಈ ಪ್ರತಿಭೆಯನ್ನು ಗಮನಿಸಿ ಇವರಿಗೆ ಗಟ್ಟಿ ಮೇಳ ಧಾರಾವಾಹಿಯಲ್ಲಿ ರೌಡಿ ಬೇಬಿ ಪಾತ್ರಕ್ಕೆ ಆಯ್ಕೆಆದರು. ರೌಡಿ ಲುಕ್ ನ ಹಳ್ಳಿ ಹುಡುಗಿ ಪಾತ್ರದಲ್ಲಿ ಗಟ್ಟಿಮೇಳ ಧಾರಾವಾಹಿಯಲ್ಲಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇವರು ರಿಯಲ್ ಲೈಫ್ ನಲ್ಲಿ ಸಕ್ಕತ್ ಮರ್ಡರ್ನ್ ಆಗಿದ್ದಾರೆ. ಇವರು ನಟನೆಯ ಜೊತೆಗೆ ಮಾಡಾಲಿಂಗ್ ನಲ್ಲೂ ಈಕೆ ಸೈ ಎನಿಸಿಕೊಂಡಿದ್ದಾರೆ. ಹೀಗಾಗಿ ನಿಶಾ ರಾಮಕೃಷ್ಣ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು ಬಳಗನೇ ಇದೇ.
ಅಷ್ಟೇ ಅಲ್ಲದೇ, ನಿಶಾ ರಾಮಕೃಷ್ಣ ಅವರು ಕನ್ನಡ ಮಾತ್ರವಾಲ್ಲದೆ ತೆಲುಗಿನಲ್ಲೂ ಮಿಂಚಿದ್ದಾರೆ. ಮುತ್ತ್ಯ ಮಂತ ಮುದ್ದು ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸಿದ್ದಾರೆ. ಬರೇ ಸೀರಿಯಲ್ ನಲ್ಲಿ ಮಾತ್ರ ವಲ್ಲದೆ ಸಿನಿಮಾದಲ್ಲಿಯೂ ನಿಶಾ ಮಿಂಚಿದ್ದಾರೆ. ಅದೊಂದಿತ್ತು ಕಾಲ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ಅವರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನು ಇವರ ಇನ್ಸ್ಟಾಗ್ರಾಮ್ ನಲ್ಲಿ ಲಕ್ಷ ಅಭಿಮಾನಿಗಳನ್ನು ಹೊಂದಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟಿವ್ ಇರುವ ನಿಶಾ ಅವರು ರೀಲ್ಸ್ ಗಳನ್ನು ಮಾಡುತ್ತಾ, ತಮ್ಮ ಅಭಿಮಾನಿಗಳನ್ನು ಯಾವಾಗಲು ಖುಷಿ ಪಡಿಸುತ್ತಾರೆ. ಇತ್ತೀಚಿಗೆ ನಟಿ ನಿಶಾ ಅವರು ಹುಟ್ಟುಹಬ್ಬ ವನ್ನು ತುಂಬಾ ಜೋರಾಗಿದ್ದು ಚಿತ್ರರಂಗದ ಗಣ್ಯರು, ಸ್ನೇಹಿತರು, ಅಭಿಮಾನಿಗಳು, ತಮ್ಮ ನಟಿಗೆ ಶುಭಾಶಯಗಳನ್ನು ಕೊರಿದ್ದಾರೆ. ನೀವು ಕೂಡ ನಿಮ್ಮ ನೆಚ್ಚಿನ ನಟಿಗೆ ಶುಭಾಶಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.