ಹೆಂಡತಿಯ ಫೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿ ಗಂಡ ಬರೆದುಕೊಂಡಿದ್ದೇನು ಗೊತ್ತಾ; ಇಲ್ಲಿ ನಡೆದಿದ್ದು ನೋಡಿ ಪೊಲೀಸರಿಗೆ ಶಾಕ್..!?

News

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಬಳಕೆಯನ್ನು ವುದು ಯುವಜನರಲ್ಲಿ ಮಾತ್ರವಲ್ಲದೆ ವಯಸ್ಕರಲ್ಲಿ ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಸೋಶಿಯಲ್ ಮೀಡಿಯಾ ಬಳಕೆಯಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇರುತ್ತದೆ ಆದರೆ ಅದು ನಿಮ್ಮ ಬಳಕೆಯ ಉದ್ದೇಶದ ಮೇಲೆ ನಿಂತಿರುತ್ತದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ದೊಡ್ಡಮಟ್ಟದ ಸುದ್ದಿ ಮಾಡುತ್ತಿದೆ.
ಹೌದು ನಡೆದಿರುವುದು ಬೇರೆ ಯಾವುದೋ ದೇಶದಲ್ಲಿ ಅಥವಾ ಬೇರೆ ಯಾವುದು ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮ ದೊಡ್ಡಬಳ್ಳಾಪುರದಲ್ಲಿ. ದೊಡ್ಡಬಳ್ಳಾಪುರದ ನಿವಾಸಿಯಾಗಿರುವ ಮುನಿಕೃಷ್ಣ ಎನ್ನುವಾತ 2018 ರಲ್ಲಿ ಲೀಲಾವತಿಯನ್ನುವರನ್ನು ಮದುವೆಯಾಗಿದ್ದ. ಈ ದಂಪತಿಗೆ ಒಂದು ಮಗು ಕೂಡ ಇದೆ. ಚೆನ್ನಾಗಿದ್ದ ಇವರ ದಾಂಪತ್ಯದಲ್ಲಿ ಆಗಾಗ ಜಗಳಗಳು ಕಂಡುಬರುತ್ತಿತ್ತು.
ಇದೇ ಸಂದರ್ಭದಲ್ಲಿ ಗಂಡ ಮುನಿಕೃಷ್ಣ ನ ಫೋನಿನಿಂದ ಆತನ ಫೇಸ್ಬುಕ್ನಲ್ಲಿ ಹೆಂಡತಿಯ ಫೋಟೋವನ್ನು ಶೇರ್ ಮಾಡಿಕೊಂಡು ರೆಸ್ಟ್ ಇನ್ ಪೀಸ್ ಎನ್ನುವುದಾಗಿ ಪೋಸ್ಟ್ ಮಾಡಿರುತ್ತಾನೆ. ಇದನ್ನು ನೋಡಿದಂತಹ ಆಕೆಯ ಪೋಷಕರು ಕೂಡಲೇ ತಮ್ಮ ಅಳಿಯನ ಮನೆಗೆ ಬಂದಾಗ ಅಲ್ಲಿ ಆಕೆ ಇಲ್ಲದ್ದನ್ನು ಕಂಡು ಪೊಲೀಸರಿಗೆ ದೂರು ನೀಡುತ್ತಾರೆ. ಈ ಪ್ರಕರಣವನ್ನು ಬೆನ್ನತ್ತಿ ಬಂದ ಪೊಲೀಸರಿಗೆ ಮುನಿಕೃಷ್ಣನ ತಮ್ಮ ನಡೆದಂತಹ ಘಟನೆಯನ್ನು ವಿವರವಾಗಿ ಹೇಳುತ್ತಾನೆ.
ಹೌದು ಬರ್ತಡೇ ಪಾರ್ಟಿಗೆ ಹೋಗುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು. ಈ ಕಾರಣದಿಂದಾಗಿ ಕೋಪಗೊಂಡು ಲೀಲಾವತಿ ಗಂಡನ ಫೋನನ್ನು ತೆಗೆದುಕೊಂಡು ಬಟ್ಟೆ ಪ್ಯಾಕ್ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾಳೆ. ಈ ಸಂದರ್ಭ ದಲ್ಲಿ ಗಂಡನ ಫೋನಿನಿಂದ ಫೇಸ್ಬುಕ್ನಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡು ರೆಸ್ಟ್ ಇನ್ ಪೀಸ್ ಎನ್ನುವುದಾಗಿ ಹಾಕಿಕೊಂಡಿದ್ದಾಳೆ. ಅವಳ ಫೋನನ್ನು ಟ್ರ್ಯಾಕ್ ಮಾಡಿರುವ ಪೊಲೀಸರಿಗೆ ಆಕೆ ತಿರುಪತಿಯಲ್ಲಿ ಇದ್ದಾಳೆ ಎನ್ನುವುದು ತಿಳಿದುಬಂದಿದೆ. ದಾಂಪತ್ಯದಲ್ಲಿ ಜಗಳ ನಡೆದರೆ ಹೀಗೂ ಕೂಡ ಮಾಡುತ್ತಾರೆ ಎನ್ನುವುದನ್ನು ಈ ಘಟನೆ ನೋಡಿದ ನಂತರವೇ ಎಲ್ಲರೂ ತಿಳಿದುಕೊಂಡಿದ್ದಾರೆ.


Leave a Reply

Your email address will not be published. Required fields are marked *