ಹೆಣ್ಣುಮಕ್ಕಳ ಮೈ ಮುಟ್ಟದೆ ನಿಮಗೆ ಸಿನಿಮಾ ಮಾಡೋಕೆ ಬರಲ್ವಾ ಅಂತ ಕೇಳಿದ ಪ್ರಶ್ನೆಗೆ ನಟ ರವಿಚಂದ್ರನ್ ಕೊಟ್ಟ ಉತ್ತರವೇನು ಗೊತ್ತ.? ನೋಡಿ ಶಾಕ್ ಆಗ್ತೀರಾ

ಸುದ್ದಿ

ನಮಸ್ತೆ ಪ್ರೀತಿಯ ವೀಕ್ಷಕರೆ ನಮ್ಮ ಸ್ಯಾಂಡಲ್ವುಡ್ ಒಂಥರಾ ಸಮುದ್ರ ಇದ್ದಂಗೆ ಅನೇಕ ಕಲಾವಿದರು ಬರುತ್ತಾರೆ ಹೋಗುತ್ತಾರೆ ಆದರೆ ಅವರಲ್ಲಿ ಕೊನೆಯವರೆಗೂ ಹೆಸರು ಉಳಿಸಿಕೊಂಡು ಫೇಮಸ್ ಆದವರು ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಆ ಸಾಲಿನಲಿ ನಮ್ಮ ರವಿಚಂದ್ರನ್ ಕೂಡ ಸೇರುತ್ತಾರೆ. ಇನ್ನೂ ತಂದೆಯ ಕಾಲದಿಂದನು ಸಿನೆಮಾ ಅಂದರೆ ರವಿಚಂದ್ರನ್ ಅವರಿಗೆ ಎಲ್ಲಿಲ್ಲದ ಕ್ರೇಜ್ ಹಾಗೂ ಪ್ರೀತಿ. ಅದಕ್ಕಾಗಿಯೇ ಅಭಿಮಾನಿಗಳು ಅವರನ್ನು ಕ್ರೀಜಿಸ್ಟಾರ್ ರವಿಚಂದ್ರನ್ ಎಂದು ಕರೆಯುತ್ತಾರೆ. ರವಿಚಂದ್ರನ್ ಕೇವಲ ಒಬ್ಬ ನಟ ಮಾತ್ರ ಅಲ್ಲದೆ ನಿರ್ಮಾಪಕನಾಗಿ, ನಿರ್ದೇಶಕನಾಗಿ, ಸಂಗೀತಗಾರನಾಗಿ, ಸಂಗೀತ ನಿರ್ದೇಶಕನಾಗಿ ಹೀಗೆ ಹಲವಾರು ಸಿನೆಮಾಗೆ ಸಂಬಂಧ ಪಟ್ಟ ವಿಷಯಗಳನ್ನು ಅರೆದು ಕುಡಿದಿದ್ದಾರೆ ರವಿಚಂದ್ರನ್.

ಈಗಲೂ ಕೂಡ ರವಿಚಂದ್ರನ್ ಅವರ ಚಿತ್ರ ಬಿಡುಗಡೆಯಗುತ್ತದೆ ಎಂದರೆ ಜನರಿಗೆ ನಿರೀಕ್ಷೆಗಳು ಹೆಚ್ಚು. ಯಾಕೆಂದರೆ ರವಿಚಂದ್ರನ್ ಅವರು ಸಿನೆಮಾ ಎಂದರೆ ಹೆಂಡತಿಕಿಂತ ಹೆಚ್ಚಾಗಿದೆ ಪ್ರೀತಿಸುತ್ತಾರೆ ಆದ್ದರಿಂದ ಅವರ ಹೊಸ ಹೊಸ ವಿಭಿನ್ನ ರೀತಿಯಲ್ಲಿ ಸಿನೆಮಾಗಳನ್ನು ಅಭಿಮಾನಿಗಳಿಗೋಸ್ಕರ ತೆರೆಯ ಮೇಲೆ ತರುತ್ತಾರೆ. ರವಿಚಂದ್ರನ್ ಎಂದರೆ ಸುಂದರ ಹಾಡುಗಳು, ಒಳ್ಳೆಯ ಹೀರೋಯಿನ್, ಹೂವುಗಳು, ರೊಮ್ಯಾಂಟಿಕ್ ಸೀನ್ ಗಳು, ಅದ್ಭುತ ಕಥೆಗಳು, ಅದ್ಧುರಿ ವೆಚ್ಚದಲ್ಲಿ ನಿರ್ಮಾಣವಾಗುವ ಸಿನೆಮಾ ಇವೆಲ್ಲವೂ ರವಿಚಂದ್ರನ್ ಅವರಿಗೆ ಮಾತ್ರ ಸಾಧ್ಯ.ಕ್ರೀಜಿಸ್ಟಾರ್ ರವಿಚಂದ್ರನ್ ಅವರು ಪ್ರೇಮಲೋಕ ಎನ್ನುವ ಸಿನೆಮಾದ ಮೂಲಕ ಕನ್ನಡದಲ್ಲಿ ಹೊಸದೊಂದು ಸಂಚಲನವನ್ನು ಸೃಷ್ಟಿಮಾಡಿದರು. ಅಂದಿನಿಂದ ಆನೆ ನಡೆದಿದ್ದೆ ದಾರಿ ಅನ್ನೋ ಹಾಗೆ ರವಿಚಂದ್ರನ್ ಅವರು ನಡೆದರು.

ಇನ್ನೂ ರವಿಚಂದ್ರನ್ ಅವರ ಸಿನೆಮಾಗಳಲ್ಲಿ ವಿಶೇಷತೆ ಏನೆಂದರೆ ಒಬ್ಬ ನಾಯಕನ ಪಾತ್ರಕ್ಕೆ ಇರುವಷ್ಟು ಬೆಲೆಯನ್ನು ಸಿನೆಮಾದ ನಾಯಕಿಯ ಪಾತ್ರಕ್ಕೂ ಕೂಡ ಕೊಡುತ್ತಿದ್ದರು.ಹೀಗಾಗಿ ರವಿಚಂದ್ರನ್ ಅವರ ಸಿನೆಮಾಗಳಲ್ಲಿ ಒಂದು ಬಾರಿಯಾದರೂ ನಟಿಸುವ ಅವಕಾಶ ದಕ್ಕಿಸಿಕೊಳ್ಳಬೇಕು ಎಂದು ಎಲ್ಲಾ ನಟಿಮಣಿಯರು ಕಾಯುತ್ತಾರೆ. ಎಲ್ಲಾ ಭಾಷೆಯ ನಟಿಯರನ್ನು ಕೂಡ ಕನ್ನಡದ ಸಿನೆಮಾಗಳಿಗೆ ಕರೆತಂದ ಹೆಗ್ಗಳಿಕೆ ಪಾತ್ರ ರವಿಚಂದ್ರನ್ ಅವರದ್ದು. ಇವರ ಸಿನೆಮಾ ಪೂರ್ತಿ ಹೀರೋಯಿನ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಇವರನ್ನು ಕನ್ನಡದ ರೊಮ್ಯಾಂಟಿಕ್ ಹೀರೋ ಎಂದೇ ಕರೆಯುತ್ತಾರೆ.

ರವಿಚಂದ್ರನ್ ಅವರ ಸಿನೆಮಾಗಳಲ್ಲಿ ಬರಿ ಕಥೆಗೆ ಪ್ರಾಮುಖ್ಯತೆ ಕೊಡದೆ ಕಥೆಗೆ ಬೇಕಾಗುವ ಹಾಡುಗಳ ಸೆಟ್ ಗಳಿಗೆ ಪ್ರಾಪರ್ಟಿಗಳಿಗೂ ಅಷ್ಟೇ ಪ್ರಾಮುಖ್ಯತೆ ಕೊಟ್ಟಿರುತ್ತಾರೆ. ಇನ್ನೂ ರವಿಚಂದ್ರನ್ ಅವರು ಸಿನೆಮಾಗಳಿಗೆ ಉಪಯೋಗಿಸದ ಪ್ರಾಣಿ, ಪಕ್ಷಿ, ಹೂಗಳು, ಹಣ್ಣುಗಳು, ಲೊಕೇಶನ್ ಗಳು ಎಲ್ಲವನ್ನು ಕಂಡಿದ್ದೀರಿ. ಈ ರೀತಿಯ ವಿಭಿನ್ನ ಯೋಚನೆಗಳು ರವಿಚಂದ್ರನ್ ಅವರಿಗೆ ಮಾತ್ರ ಬರಲು ಸಾಧ್ಯ. ಕನ್ನಡದಲ್ಲಿ ಪ್ರೇಮಲೋಕ ಸಿನೆಮಾದ ನಂತರ ಇವರ ಸಿನೆಮಾಗಳನ್ನು ನೋಡುವವರಿಗೆ ಇದೇ ತರದ ನಿರೀಕ್ಷೆಗಳು ಹೆಚ್ಚು.

ಇಲ್ಲಿಯವರೆಗೂ ಕ್ರೀಜಿ ಸ್ಟಾರ್ ರವಿಚಂದ್ರನ್ ಅವರು ಅಭಿನಯಿಸಿರುವ ಎಲ್ಲಾ ಸಿನೆಮಾಗಳಲ್ಲೂ ಕೂಡ ಸಿನೆಮಾಗಳಷ್ಟೇ ಹಾಡುಗಳನ್ನು ಕೂಡ ಸೂಪರ್ ಹಿಟ್ ಮಾಡಿದ್ದಾರೆ. ಹಾಡುಗಳ ವಿಚಾರವಾಗಿ ಅವರು ಅವುಗಳ ಸಾಹಿತ್ಯ ಸಂಗೀತ ಜೊತೆಗೆ ಸೀನುಗಳಿಗೂ ತುಂಬಾ ಗಮನ ಚಿತ್ರಿಕಾರಣ ಮಾಡುತ್ತಾರೆ. ಹೀಗಾಗಿ ರವಿಚಂದ್ರನ್ ಅವರು ಅವರ ಕ್ರೀಜಿನೆಸ್ ಇಂದ ರವಿಮಾಮ ಎಂದು ಬಹಳ ಫೇಮಸ್ ಆಗಿದ್ದಾರೆ. ಒಮ್ಮೆ ಇವರ ಸಿನೆಮಾಗಳನ್ನು ನೋಡಿ ಇವರ ಪತ್ನಿ ಪ್ರೆಶ್ನೆ ಮಾಡಿದ್ದಾರಂತೆ.

ನೀವು ನಿಮ್ಮ ಸಿನೆಮಾಗಳಲ್ಲಿ ನಟಿಯರನ್ನು ಮುಟ್ಟದೇ ಆಕ್ಟಿಂಗ್ ಮಾಡಲು ಆಗುದಿಲ್ಲವಾ ಹಾಡುಗಳನ್ನು ತೆಗೆಯಲು ಆಗುವುದಿಲ್ಲವಾ ಎಂದು ಪ್ರೆಶ್ನೆಮಾಡಿದ್ದರಂತೆ.ಈ ವಿಷಯವನ್ನು ಜೀ ಕನ್ನಡ ವೇದಿಕೆಯಲ್ಲಿ ವಿಕ್ರಂ ರವಿಚಂದ್ರನ್ ಅವರ ಸಿನೆಮಾ ವಿಷಯದ ಕಾರ್ಯಕ್ರಮದಲ್ಲಿ ಖುದ್ದಾಗಿ ನಟ ರವಿಚಂದ್ರನ್ ಅವರು ಹೇಳಿಕೊಂಡು ನಕ್ಕಿದ್ದರು. ನಿಜವಾಗಿಯು ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕು ಯಾಕೆಂದರೆ ಒಂದು ಸಿನೆಮಾದ ಮೇಲೆ ಸಾವಿರ ಕನಸುಗಳನ್ನು ಹೊತ್ತು ಸಿನೆಮಾವನ್ನೇ ಜೀವನ ಎಂದುಕೊಂಡಿರುವ ಜಾದೂಗಾರ ಕನ್ನಡದಲ್ಲಿ ಇರುವುದು ನಮ್ಮ ಅದೃಷ್ಟ ಎಂದೇ ಹೇಳಬಹುದು.

ಹೌದು ಇಂದಿಗೂ ಕ್ರೀಜಿಸ್ಟಾರ್ ರವಿಚಂದ್ರನ್ ಅವರು ತನ್ನ ಸಿನೆಮಾದ ಹಾಡುಗಳಿಗೆ ಕೋಟ್ಯಂತರ ರೂಪಾಯಿಯನ್ನು ಖರ್ಚು ಮಾಡುತ್ತಾರೆ ಅಷ್ಟೇ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಕಾಯುತ್ತಾರೆ. ಕನ್ನಡ ಚಿತ್ರರಂಗವನ್ನು ಇನ್ನೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾದವರಲ್ಲಿ ಕ್ರೀಜಿಸ್ಟಾರ್ ರವಿಚಂದ್ರನ್ ಕೂಡ ಒಬ್ಬರು. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಯನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *