ಹೆಣ್ಣುಮಗಳನ್ನು ದತ್ತು ಪಡೆದಿರುವುದು ಗಿಮಿಕ್ ಗಾಗಿ ಎಂದು ಟೀಕಿಸಿದ ನೆಟ್ಟಿಗನಿಗೆ ಸನ್ನಿ ಲಿಯೋನ್ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ..!?

Uncategorized

ನಿಮಗೆಲ್ಲರಿಗೂ ಗೊತ್ತಿರುವಂತೆ ಸನ್ನಿ ಲಿಯೋನ್ ರವರು ಯಾವ ಕ್ಷೇತ್ರದಿಂದ ಬಾಲಿವುಡ್ ಚಿತ್ರರಂಗಕ್ಕೆ ಬಂದವರು ಎಂದು. ಸನ್ನಿ ಲಿಯೋನ್ ಅವರನ್ನು ಎಲ್ಲರೂ ಗುರುತಿಸುವುದಕ್ಕೆ ಕಾರಣ ಕೂಡ ನೀಲಿ ಚಿತ್ರರಂಗವೆಂದರೆ ಖಂಡಿತವಾಗಿ ತಪ್ಪಾಗಲಾರದು. ಆದರೆ ಸನ್ನಿ ಲಿಯೋನ್ ಹಲವರು ಈಗ ಅದನ್ನೆಲ್ಲ ಬಿಟ್ಟು ತಮ್ಮ ಕುಟುಂಬದೊಂದಿಗೆ ಸಂತೋಷದಿಂದ ಸಮಯವನ್ನು ಕಳೆಯುತ್ತಿದ್ದರು. ಆ ಚಿತ್ರರಂಗವನ್ನು ಸನ್ನಿಲಿಯೋನ್ ರವರು ಆಯ್ಕೆ ಮಾಡಿದ್ದು ಕೂಡ ಕುಟುಂಬದ ಪರಿಸ್ಥಿತಿಯಿಂದಾಗಿ ಎನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು.
ಅದೇನೇ ಇರಲಿ ಈಗ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹುಬೇಡಿಕೆಯ ನಟಿ ಹಾಗೂ ಐಟಂ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಸಂಭಾವನೆ ವಿಚಾರದಲ್ಲಿ ಕೂಡ ಎಲ್ಲರನ್ನೂ ಹಿಂದಿಕ್ಕಿದ್ದಾರೆ. ಇನ್ನು ಸನ್ನಿ ಲಿಯೋನ್ ರವರು ಡೇನಿಯಲ್ ವೆಬರ್ ಅವರನ್ನು ಮದುವೆಯಾಗಿರುವುದು ಕೂಡ ನಮಗೆಲ್ಲ ಗೊತ್ತಿದೆ. ಡೇನಿಯಲ್ ವೆಬರ್ ಕೂಡ ಸನಿಲಿಯೋನ್ ರವರಿಗೆ ಇದೆ ಅಡಲ್ಟ್ ಫಿಲಂ ಇಂಡಸ್ಟ್ರಿಯಿಂದ ಪರಿಚಿತರಾದವರು. ಇನ್ನು ಇವುಗಳಿಂದ ಹೊರತಾಗಿ ನಟಿ ಸನ್ನಿ ಲಿಯೋನ್ ರವರು ಮಾನವೀಯ ವಿಚಾರಗಳಿಗಾಗಿ ಕೂಡ ಹೆಸರಾಗಿದ್ದಾರೆ.

ಹಲವಾರು ಜನರಿಗೆ ಕಷ್ಟದ ಸಂದರ್ಭದಲ್ಲಿ ಸಹಾಯ ಮಾಡಿರುವುದನ್ನು ಕೂಡ ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಪ್ರವಾಹ ಹಾಗೂ ಇನ್ನಿತರ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸನ್ನಿ ಲಿಯೋನ್ ರವರು ಕೋಟ್ಯಂತರ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿರುವುದನ್ನು ಕೂಡ ನಾವು ಇಲ್ಲಿ ನೆನೆಸಿಕೊಂಡು ಅವರ ಮಾತ್ರ ಹೃದಯವನ್ನು ನೆನೆಸಿಕೊಳ್ಳಬಹುದಾಗಿದೆ. ಇತ್ತೀಚಿಗಷ್ಟೇ ಸನ್ನಿ ಲಿಯೋನ್ ರವರು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರ ಇಬ್ಬರು ಮಕ್ಕಳನ್ನು ಕೈಹಿಡಿದುಕೊಂಡು ನಡೆಸಿಕೊಂಡು ಬರುತ್ತಿದ್ದರು. ಆದರೆ ಅವರು ದತ್ತು ತೆಗೆದುಕೊಂಡಿರುವ ಮಗು ಆಗಿರುವ ನಿಶಾಳನ್ನು ಮಾತ್ರ ಹಾಗೆ ಬಿಟ್ಟುಬಿಟ್ಟಿದ್ದರು. ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಜನರು ದತ್ತು ಮಗಳನ್ನು ಪಡೆದಿರುವುದು ನೀವು ಗಿಮಿಕ್ ಗಾಗಿ ಎಲ್ಲರನ್ನು ಸಮಾನವಾಗಿ ನೋಡಿಕೊಳ್ಳಿ ಎಂಬುದಾಗಿ ವ್ಯಂಗ್ಯವಾಗಿ ಕಾಮೆಂಟ್ ಮಾಡಿದ್ದಾರೆ.

ಅದಕ್ಕೆ ಸನ್ನಿ ಲಿಯೋನ್ ರವರು ಪೋಷಕರಾದ ನಮಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎನ್ನುವುದು ನಮಗೆ ತಿಳಿದಿದೆ. ಈ ಕುರಿತಂತೆ ನೀವು ಯೋಚಿಸುವುದು ಅಗತ್ಯವಿಲ್ಲ. ಕಾಮೆಂಟ್ ಮಾಡುತ್ತಿರುವವರಿಗೂ ನಮ್ಮ ಜೀವನಕ್ಕೂ ಒಂದು ಚೂರು ಕೂಡ ಸಂಬಂಧವಿಲ್ಲ. ಇವರ ಕಾಮೆಂಟ್ಗಳನ್ನು ನೋಡಿ ಯಾರು ಕೂಡ ನಂಬುವ ಅಗತ್ಯವಿಲ್ಲ ಎಂಬುದಾಗಿ ಸನ್ನಿ ಲಿಯೋನ್ ರವರು ಪ್ರತಿಕ್ರಿಯಿಸಿದ್ದಾರೆ.


Leave a Reply

Your email address will not be published. Required fields are marked *