ಹೊಸ ಕನಸಿನ ಮನೆ ಕಟ್ಟಿಸಲು ಮುಂದಾದ ನಿರೂಪಕಿ ಅನುಶ್ರೀ..! ಭೂಮಿ ಪೂಜೆಯಲ್ಲಿ ತೊಡಗಿದ ಫೋಟೋಸ್ ನೋಡಿ! ಈ ಭವ್ಯ ಬಂಗಲೆಗೆ ಎಷ್ಟು ಕೋಟಿ ಗೊತ್ತಾ.?

ಸುದ್ದಿ

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಬಹುಬೇಡಿಕೆಯ ನಿರೂಪಕಿ ಯಾರು ಎಂದು ಕೇಳಿದರೆ ಅನುಶ್ರೀ ಅವರು ಎಂಬುದಾಗಿ ಚಿಕ್ಕಮಕ್ಕಳು ಕೂಡ ಹೇಳುತ್ತಾರೆ. ಅಷ್ಟರಮಟ್ಟಿಗೆ ಕರ್ನಾಟಕದ ಮೂಲೆಮೂಲೆಯಲ್ಲೂ ಕೂಡ ಅನುಶ್ರೀ ಅವರ ಹೆಸರು ಜನಪ್ರಿಯವಾಗಿದೆ. ಆದರೆ ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಗೂ ಬಹು ಮೆಚ್ಚಿನ ನಿರೂಪಕಿಯಾಗಿ ರೂಪುಗೊಳ್ಳಲು ಅನುಶ್ರೀ ಅವರಿಗೆ ಯಾರು ಕೂಡ ಸಹಾಯ ಮಾಡಿರಲಿಲ್ಲ.

ಕರಾವಳಿ ಕ್ಷೇತ್ರದಿಂದ ಏನನ್ನಾದರೂ ಜೀವನದಲ್ಲಿ ಸಾಧಿಸಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡು ತಾಯಿಯನ್ನು ಹಾಗೂ ತಮ್ಮನ್ನು ಬಿಟ್ಟು ಬೆಂಗಳೂರಿಗೆ ಬರುತ್ತಾರೆ. ಮೊದಮೊದಲಿಗೆ ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡಿದರು ಕೂಡ ಕೈತುಂಬ ಸಂಬಳ ಸಿಗುವುದಿಲ್ಲ. ಆದರೂ ಕೂಡ ಅನುಶ್ರೀ ಅವರು ಎಲ್ಲೂ ತಮ್ಮ ಸೋಲನ್ನು ಒಪ್ಪಿಕೊಳ್ಳದೆ ಛಲಬಿಡದ ತ್ರಿವಿಕ್ರಮನಂತೆ ಇನ್ನಷ್ಟು ಪ್ರಯತ್ನ ಪಡುತ್ತಾರೆ. ಮೊದಲಿಗೆ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುವ ಅಂತಹ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಹೀಗೆ ಒಂದಾದ ಮೇಲೊಂದರಂತೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತಾರೆ.

ಆದರೆ ನಿಜವಾಗಿ ಅವರ ಅದೃಷ್ಟ ಖುಲಾಯಿಸೋದು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮದ ಮೂಲಕ ಎಂದರೆ ತಪ್ಪಾಗಲಾರದು. ಸರಿಗಮಪ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಕರ್ನಾಟಕದ ಪ್ರತಿಯೊಂದು ಮನೆಮನೆಗೂ ಕೂಡ ತಲುಪುತ್ತಾರೆ. ಕಿರುತೆರೆ ವೀಕ್ಷಕರ ನೆಚ್ಚಿನ ನಿರೂಪಕಿಯಾಗಿ ಕೂಡ ಕಾಣಿಸಿಕೊಳ್ಳುತ್ತಾರೆ.
ಈಗ ಪ್ರತಿಯೊಂದು ಸಿನಿಮಾ ಕಾರ್ಯಕ್ರಮಗಳಿಗೂ ಕೂಡ ಅನುಶ್ರೀ ಅವರೇ ನಿರೂಪಕಿಯಾಗಿ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಮಧ್ಯರಾತ್ರಿ ಎರಡು ಗಂಟೆಗೆ ಅವರಿಗೆ ಮಾಹಿತಿ ನೀಡಿದರೂ ಕೂಡ ಸೂಪರ್ ಆಕ್ಟಿವ್ ಆಗಿ ಕಾರ್ಯಕ್ರಮವನ್ನು ನಿರೂಪಕಿಯಾಗಿ ನಡೆಸಿಕೊಡುತ್ತಾರೆ. ನಿಜಕ್ಕೂ ಕೂಡ ಅನುಶ್ರೀ ಅವರು ಹೆಣ್ಣುಮಕ್ಕಳಿಗೆ ಸ್ಪೂರ್ತಿ ಎಂದರೆ ತಪ್ಪಾಗಲಾರದು.

ಅನುಶ್ರೀ ಅವರಿಗೆ ಇನ್ನು ಕೂಡ ಬದುಕಿನಲ್ಲಿ ಸಾಧಿಸುವುದು ಬಹಳಷ್ಟಿದೆ. ಇತ್ತೀಚಿಗೆ ಕನ್ನಡದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರು ಹೊಸ  ಜಾಗವನ್ನು ಖರೀದಿ ಮಾಡಿದ್ದಾರಂತೆ. ಹಾಗೆ ಹೊಸದೊಂದು ಮನೆಯನ್ನು ಕಟ್ಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಹೌದು ಹೊಸಮನೆ ಕಟ್ಟಿಸುವುದಕ್ಕೆ ನಿನ್ನೆ ಅನುಶ್ರೀ ಅವರು ಭೂಮಿ ಪೂಜೆ ಮಾಡಿದ್ದಾರೆ. ಭೂಮಿ ಪೂಜೆ ವೇಳೆಯಲ್ಲಿ ಅವರು ಮತ್ತು ಅವರ ತಮ್ಮ ಮತ್ತು ತಾಯಿ ಜೊತೆ ಇನ್ನು ಕೂಡ ಕೆಲವರು ಭಾಗಿಯಾಗಿದ್ದರು. ಹನುಮಂತನಗರದ ಶ್ರೀ ಕುಮಾರಸ್ವಾಮಿ ದೇವಾಲಯದ ಅರ್ಚಕರಾಗಿರುವ ಮಂಜುನಾಥ್ ಭಟ್ ಅವರು ಅನುಶ್ರೀ ಕೊಂಡುಕೊಂಡ ಹೊಸ ಜಾಗದ ಪೂಜೆ ಮಾಡಿದ್ದಾರೆ ಎನ್ನಲಾಗಿದೆ.
ಹೌದು ಅನುಶ್ರೀ ಅವರ ಹೊಸಮನೆ ಭೂಮಿ ಪೂಜೆಯಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ.ಹೌದು ಅನುಶ್ರೀ ಅವರು ಈಗ ಮನೆ ಕಟ್ಟುತ್ತಿರುವ ಜಾಗ ಜಯನಗರದ ಹೌಸಿಂಗ್ ಸೊಸೈಟಿ ಲೇಔಟ್ ನ ಸುಬ್ರಮಣ್ಯ ಪುರಂನಲ್ಲಿ ಎಂದು ತಿಳಿದುಬಂದಿದೆ. ಈ ಜಾಗವನ್ನು ಖರೀದಿಸಿದ್ದು ಇಂದು ಪೂಜೆ ಸಲ್ಲಿಸಿ ಹೊಸಮನೆ ಶುಭಾರಂಭದ ಕೆಲಸಕ್ಕೆ ಸಜ್ಜಾಗಿದ್ದಾರೆ. 

ಅದೇನೇ ಇರಲಿ ಅನುಶ್ರಿ ಅವರ ಚುರುಕುತನಕ್ಕೆ ಯಾರು ಕೂಡ ಸರಿಸಾಟಿ ಇಲ್ಲ ಎಂದು ಅನುಮಾನವಿಲ್ಲದೆ ಹೇಳಬಹುದಾಗಿದೆ. ಇತ್ತೀಚಿಗೆ ಹಲವಾರು ವಿಚಾರಗಳಲ್ಲಿ ಸಿಲುಕಿಕೊಂಡರು ಕೂಡ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದರು. ಇದೇ ರೀತಿ ಅವರಿಗೆ ಇನ್ನೂ ಹೆಚ್ಚೆಚ್ಚು ಅವಕಾಶಗಳು ಹುಡುಕಿಕೊಂಡು ಬರಲಿ ಎಂದು ಆಶಿಸೋಣ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ.


Leave a Reply

Your email address will not be published. Required fields are marked *