ಹೊಸ ಮನೆಯ ಗೃಹಪ್ರವೇಶದಲ್ಲಿ ಅಪ್ಪು ಹಾಗು ಅಶ್ವಿನಿ ಅವರ ಖುಷಿ ಹೇಗಿತ್ತು ಗೊತ್ತಾ? ಆ ಸುಂದರ ಕ್ಷಣಗಳ ವಿಡಿಯೋ ನೋಡಿ

ಸುದ್ದಿ

ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹಾಗೂ ದೊಡ್ಮನೆ ಸೊಸೆ ಅಶ್ವಿನಿಯವರು ಇವರಿಬ್ಬರೂ ಒಬ್ಬರೋನೊಬ್ಬರು ಪ್ರೀತಿಸಿ ಮದುವೆಯಾದವರು. ಇಷ್ಟು ವರ್ಷಗಳ ತಮ್ಮ ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿಗಳಿಬ್ಬರೂ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸುತಿದ್ದರು. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು, ಎಲ್ಲಾ ಕಲಸಗಳಿಗೂ ಕೈ ಜೋಡಿಸುವದು ಮಡದಿ ಹಾಗೂ ಕೈ ತುಂಬಾ ಸಿನೆಮಾಗಳ ಆಫರ್ಗಳು ಇತ್ತು.
ಇನ್ನೂ ಪುನೀತ್ ದಂಪತಿಗಳ ದಾಂಪತ್ಯ ಜೇವನದ ವಿಚಾರಕ್ಕೆ ಬಂದರೆ ಎಲ್ಲರಿಗೂ ಮಾದರಿಯಾಗಿಯೇ ಇದ್ದರು. ಆದರೆ ಕಳೆದ ವರ್ಷ ಅಕ್ಟೋಬರ್ 29 ರಂದು ಅಪ್ಪು ಇದ್ದಕ್ಕಿದಂತೆ ಅಸುನಿಗಿದರು. ಈ ಇನ್ನೂ ಯಾರಿಗೂ ಕೂಡ ಅಡಗಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಉಳಿದಿದೆ.

ಹೌದು ಇಡೀ ದೊಡ್ಮನೆ ಕುಟುಂಬ ಈ ವಿಷಯ ದಿಂದ ಇನ್ನೂ ಶಾಕ್ ನಲ್ಲಿ ಇದ್ದಾರೆ. ಅಪ್ಪು ಇಲ್ಲದೆ ಸುಮಾರು 8 ತಿಂಗಳು ಕಳೆಯುತ್ತ ಬಂದಿದೆ. ಅಪ್ಪು ಇಲ್ಲ ಎನ್ನುವ ನೋವು ಮಾತ್ರ ಇನ್ನು ಕಡಿಮೆಯಾಗಿಲ್ಲ. ಇನ್ನೂ ಕಳೆದ ವರ್ಷ ಡಿಸೇಂಬರ್ ಒಂದು 2011 ಕ್ಕೆ ಅಶ್ವಿನಿ ಹಾಗೂ ಪುನೀತ್ ರಾಜ್ ಕುಮಾರ್ ಮದುವೆಯಾಗಿ ಸುಮಾರು 22 ವರ್ಷ ಕಳೆದಿತ್ತು. ಪ್ರತಿ ವರ್ಷವೂ ಪುನೀತ್ ತನ್ನ ಮುದ್ದಿನ ಹೆಂಡತಿಯ ಜೊತೆಗೆ ಇರುತ್ತಿದ್ದರು. ಪತ್ನಿ ಮತ್ತು ಮಕ್ಕಳನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು. ದಂಪತಿಗಳು ಅಲ್ಲೇ ಮದುವೆಯ ದಿನವನ್ನು ಆಚರಿಸಿಕೊಳ್ಳುತ್ತಿದ್ದರು.

ಇನ್ನೂ ವಿದೇಶ ಪ್ರವಾಸ ಹೋಗಲಿಲ್ಲ ಅಂದರೆ ಮನೆಯಲ್ಲೇ ಆಚರಣೆಯನ್ನು ಮಾಡುತ್ತಿದ್ದರು. ಆದರೆ ಈ ಬಾರಿ ಅಪ್ಪುವಿನ ಅಗಲುವಿಕೆ ನಡುವೆ ಮದುವೆಯ ವಾರ್ಷಿಕೋತ್ಸವ ಬಂದಿರೋದು ಅಶ್ವಿನಿ ಅವರಿಗೆ ಮತ್ತಷ್ಟು ನೋವನ್ನು ತಂದುಕೊಟ್ಟಿತು.

ಇನ್ನೂ ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶಗಳು ದೊರಕಬೇಕು ಎನ್ನುವ ನಿಟ್ಟಿನಲ್ಲಿ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಕೂಡ ಪ್ರಾರಂಭಿಸಿದ್ದರು. ಜೊತೆಗೆ ಉತ್ತಮ ಕಥೆಯನ್ನು ಒಳಗೊಂಡ ಸಿನೆಮಾಗಳನ್ನು ಮಾಡಬೇಕು ಎನ್ನುವ ಹಂಬಲಕೂಡ ಅವರದಾಗಿತ್ತು. ಆದರೆ ಅಪ್ಪು ಅಗಲಿಕೆಯ ನಂತರ ಈ ಸಂಸ್ಥೆಯ ಜವಾಬ್ದಾರಿಯನ್ನು ಅಶ್ವಿನಿ ಅವರು ವಹಿಸಿಕೊಂಡಿದ್ದಾರೆ. ಪುನೀತ್ ಅವರ ಕನಸಿನ ಕೂಸಾದ ಪಿ. ಆರ್. ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಅಶ್ವಿನಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು, ಹಿಂದೆ ನಡೆದುಹೋಗಿರುವ ಘಟನೆಯನ್ನು ಮರೆಯಲು ಅಸಾಧ್ಯವಾಗಿದೆ. ಆದರೆ ಅಪ್ಪು ಅವರಿದ್ದಾಗ ಅವರು ನೀಡಿರುವ ಉತ್ಸಹ, ಸ್ಫೂರ್ತಿಯೊಂದಿಗೆ ಪಿ. ಆರ್. ಕೆ ಪ್ರೊಡಕ್ಷನ್ ಮತ್ತು ಆಡಿಯೋ ಎರಡು ಸಂಸ್ಥೆಗಳ ಕೆಲಸ ಕಾರ್ಯಗಳು ಮುಂದುವರಿಯಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸುತ್ತೇವೆ. ಅದಕ್ಕಾಗಿ ನಿಮ್ಮೆಲ್ಲರ ಬೆಂಬಲ ಬೇಕು ಎಂದು ಕರ್ನಾಟಕದ ಜನರಲ್ಲಿ, ಹಾಗೂ ಅಭಿಮಾನಿಗಳಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮನವಿ ಮಾಡಿಕೊಂಡಿದ್ದರು.

ನಂತರ ಪುನೀತ್ ಅವರ ಕನಸಿನ ಕೂಸಾದ ಪಿ.ಆರ್.ಕೆ ಪ್ರೊಡಕ್ಷನ್ ನಲ್ಲಿ ಅನೇಕ ಚಿತ್ರಗಳು ನಿರ್ಮಾಣವಾಗುತ್ತಿದೆ. ಪುನೀತ್ ಅವರ ಒಂದೊಂದೇ ಕನಸುಗಳನ್ನು ಈಡೇರಿಸುತ್ತಿರುವ ಅಶ್ವಿನಿಯವರು ಇತ್ತೀಚಿಗೆ ಅತ್ತೆ ಪಾರ್ವತಮ್ಮ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನ ಪುನೀತ್ ಅವರ ದೊಡ್ಡ ಕನಸಿನ ಪ್ರಾಜೆಕ್ಟ್ ಗಂಧದ ಗುಡಿ ಚಿತ್ರದ ಟೀಸರ್ ಅನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಿಡುಗಡೆ ಮಾಡಿದ್ದರು.

ಇನ್ನೂ ಪತಿ ಇಲ್ಲ ಅನ್ನೋ ನೋವನ್ನು ಯಾರಿಗೂ ತೋರಿಸದೆ ತನ್ನ ಎದೆಯಲ್ಲೇ ಬಚ್ಚಿಟ್ಟುಕೊಂಡು ತನ್ನೆಲ್ಲಾ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಅಶ್ವಿನಿ ಅವರು ಹೋಗುತ್ತಿದ್ದಾರೆ. ಅಂದಹಾಗೆ ಅಂದು ನಡೆದ ಪುನೀತ್ ರಾಜ್ ಕುಮಾರ್ ಅವರ ಹೊಸ ಮನೆಯ ಗೃಹಪ್ರವೇಶ ಹೇಗಿತ್ತು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ.

ಪುನೀತ್ ಅವರು ಇಂದಿನ ಮೊರ್ಡರ್ನ್ ವಿನ್ಯಾಸಕ್ಕೆ ತಕ್ಕಂತೆ ಮನೆಯನ್ನು ಕಟ್ಟಿಸಿದ್ದರು. ಅಷ್ಟೇ ಅಲ್ಲದೇ ತುಂಬಾ ಸುಂದರವಾಗಿ ಕುಟುಂಬದ ಜೊತೆ ಸೇರಿ ಸಂಭ್ರಮದಿಂದ ಮನೆಯ ಗೃಹಪ್ರವೇಶವನ್ನು ಮಾಡಿಸಿದ್ದಾರು. ದೊಡ್ಮನೆ ಕುಟುಂಬದವರಗಿರೋದರಿಂದ ಅಪ್ಪು ಮನೆಯ ಗೃಹಪ್ರವೇಶವನ್ನು ಅದ್ದೂರಿಯಾಗಿಯೇ ಮಾಡಲಾಗಿತ್ತು. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ..


Leave a Reply

Your email address will not be published. Required fields are marked *