10ನೇ ತರಗತಿ ಪರೀಕ್ಷೆಯಲ್ಲಿ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಮಹತಿ ಎಷ್ಟು ಅಂಕ ಪಡೆದಿದ್ದಾರೆ ಗೊತ್ತಾ? ಮಹತಿ ಸಾಧನೆಗೆ ಮೆಚ್ಚಿದ ನೆಟ್ಟಿಗರು.

ಸುದ್ದಿ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ಗಟ್ಟಿಮೇಳ ಕೂಡ ಒಂದು ಕರ್ನಾಟಕದ ಹೆಣ್ಣು ಮಕ್ಕಳ ಮನೆಮಾತಾಗಿರುವ ಈ ಧಾರಾವಾಹಿ ಅತ್ಯಂತ ಜನಪ್ರಿಯ ಹೊಂದಿದ್ದು ಟಿ.ಆರ್. ಪಿ ಎರಡರಲ್ಲೂ no1 ಸ್ಥಾನದಲ್ಲಿ ನಿಂತ್ತಿದೆ. ಈ ಗಟ್ಟಿಮೇಳ ಧಾರಾವಾಹಿಯಲ್ಲಿ ನಟ ವೇದಾಂತ್ ಹಾಗೂ ಅಮೂಲ್ಯ ಅವರ ಪಾತ್ರ ಸಾಕಷ್ಟು ಜನಪ್ರಿಯತೆ ಹೊಂದಿದೆ. ಇದರಲ್ಲಿ ಉಳಿದ ಪಾತ್ರಗಳು ಕೂಡ ಸಾಕಷ್ಟು ಜನಮನ್ನಣೆ ಗೊಂಡಿದೆ. ಇವರ ಅಭಿನಯಕ್ಕೆ ಕರ್ನಾಟಕದ ಅಭಿಮಾನಿಗಳು ಫಿದಾ ಆಗಿದ್ದಾರೆ.
ಅಮೂಲ್ಯ ಅವರ ಕೊನೆ ತಂಗಿ ಪಾತ್ರ ಅಂಜಲಿ. ಈ ಮುದ್ದು ತಂಗಿಯ ಈ ಪಾತ್ರ ತಮಾಷೆಯ ಡೈಲಾಗ್ ನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆಗುದೇ. ಅಂಜಲಿ ಪಾತ್ರದಲ್ಲಿ ನಟಿಸುತ್ತಿರುವ ಆ ಹುಡುಗಿ ಹತ್ತನೇ ತರಗತಿಯ ಹುಡುಗಿ ಅಂತ ಯಾರು ಹೇಳಲು ಸಾಧ್ಯವಿಲ್ಲ ಅಷ್ಟು ಮುದ್ದಾಗಿ ಅಭಿನಯ ಮಾಡುತ್ತಾಳೆ. ಆ ಹುಡುಗಿ ಅಂಜಲಿ ಮೊನ್ನೆ ಬಂದಂಥ 10 ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?

ಈ ನಟಿ ಬರೇ ನಟನೆ ಅಲ್ಲದೇ ಸುಂದರವಾಗಿ ಹಾಡುತ್ತಾರೆ ಹಾಗೂ ಅಷ್ಟೇ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟನೆ ಮಾಡೋಕಿಂತ ಮುಂಚೆ ಜೀ ಕನ್ನಡದ ವಾಹಿನಿಯ ಫೇಮಸ್ ಕಾರ್ಯಕ್ರಮ ಡ್ರಾಮಾ ಜೂನಿಯರ್ ನಲ್ಲಿ ಪಾಲ್ಗೊಂಡಿದ್ದರು.
ಮಹತಿ ಭಟ್ ನಂತರ ಸಿಂಧೂರ ಸೀರಿಯಲ್ ನಲ್ಲಿ ನಟಿಸಿದ್ದರು. ಜೊತೆಗೆ ಕನ್ನಡ ಸಿನೆಮಾ ಎಳೆಯರು ನಾವು ಗೆಳೆಯರು ಎಂಬ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಇವಳು ಹುಟ್ಟಿದ್ದು ಫೆಬ್ರವರಿ 4 2006 ರಲ್ಲಿ ಇವರ ತಂದೆ ಮುರಳಿಧರನ್ ತಾಯಿ ಸೂಚಿತ್ರ ಇವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಇವರು ಓದಿನ ಜೊತೆಗೆ ನಟನೆಯನ್ನು ಸಹ ಮಾಡುತ್ತಿದ್ದಾರೆ ಮಹತಿ. ಈ ವರ್ಷ 10ನೇ ತರಗತಿಯ ಪರೀಕ್ಷೆಯ ಫಲಿತಾಂಶ ಬಂದಿದ್ದು ಮಹತಿ ಭಟ್ ಶೇ. 99.04 ರಷ್ಟು ಅಂಕ ಗಳಿಸಿದ್ದಾರೆ. ಇದು ನಿಜಕ್ಕೂ ಅವರ ಕುಟುಂಬದವರಿಗೆ ಹಾಗೂ ಮಹತಿ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. ಇದೀಗ ತಮ್ಮ ನೆಚ್ಚಿನ ನಟಿಗೆ ಸೋಷಿಯಲ್ ಮೀಡಿಯಾದ ಮೂಲಕ ಮೆಚ್ಚುಗೆಯ ಸುರಿಮಳೆ ಬರುತ್ತಿದೆ.
ತಮ್ಮ ಫಲಿತಾಂಶದ ವಿಚಾರವನ್ನು ಮಹತಿ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು 625 ಕ್ಕೆ 619 ಅಂಕಗಳನ್ನು ಪಡೆದುಕೊಂಡಿದ್ದಾರೆ ಇದು ಹೆಮ್ಮೆಯ ವಿಷಯ. ಯಾಕೆಂದರೆ ಕಲೆಯ ನಡುವೆಯೂ ಇವರು ತಮ್ಮ ವಿದ್ಯಾಭ್ಯಾಸದ ಕಡೆ ಇಷ್ಟು ಒಲವು ತೀರಿರುವುದು ತುಂಬಾ ವಿಶೇಷ. ಪ್ರತಿಯೊಂದು ಪೋಷಕರ ತಮ್ಮ ಬಾಯಿಯ ಮೇಲೆ ಬೆರಳಿಟ್ಟಿದ್ದರೆ. ನಟನೆಯ ಮಾಡೋದ್ರಲ್ಲೂ ಫಸ್ಟ್, ಓದಿನಲ್ಲೂ ಫಸ್ಟ್ ಹೇಗೆ ಇದು ಅಂಥ, ಈಗಿನ ಮಕ್ಕಳಿಗೆ ಮನೆಯಲ್ಲಿ ಓದು ಅಂದರೆ ಸಾಕು ಮನೆಯಿಂದ ಆಚೆ ಇರುತ್ತಾರೆ.
ಅಂತದ್ರಲ್ಲಿ ಅಂಜಲಿ ನಟನೆ ಮಾಡಿ ಇಡೀ ಕರ್ನಾಟಕದ ಜನರ ಮನಸ್ಸನ್ನು ಕದ್ದು ಈಗ ಮತ್ತೆ ಸುದ್ಧಿಯಲ್ಲಿದ್ದಾರೆ. ಇವರ ಮುಂದಿನ ಭವಿಷ್ಯ ಉಜ್ವಲ ವಾಗಿರಲಿ ಎಂದು ಕೇಳಿಕೊಳ್ಳೋಣ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *