ಕೆಜಿಎಫ್ 2 ನಟ ಮೋಹನ್ ಜುನೇಜಾ ಇನ್ನಿಲ್ಲ, ಅನಾರೋಗ್ಯದಿಂದ ಸ್ಯಾಂಡಲ್ ವುಡ್ ಹಾಸ್ಯ ನಟ ವಿಧಿವಶ!

ಸುದ್ದಿ

ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಹಾಸ್ಯ ನಟ ಹೆಸರಾಂತ ಹಾಸ್ಯ ನಟ ನಿ’ಧಾ’ನರಾಗಿದ್ದಾರೆ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಳುತ್ತಿದ್ದರು ಮೋಹನ್ ಜೂನೇಜ ಅವರು ಬೆಂಗಳೂರಿನ ಹೆಸರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಹಾಸ್ಪಿಟಲ್ ನಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ರು. ಆದರೆ ಅವರ ದೇಹದ ಪರಿಸ್ಥಿತಿ ತುಂಬಾ ಹದಗೆಟ್ಟಿರುದರಿಂದ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದರೆ.
ಮೋಹನ್ ಜೂನೇಜ ಅವರು ಕನ್ನಡ ಸಿನಿಮಾರಂಗ ಹಾಗೂ ಕಿರುತೆರೆಯ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಕನ್ನಡ ಕಿರುತೆರೆಯ ‘ವಠಾರ’ ಧಾರಾವಾಹಿಯ ಮೂಲಕ ಕರ್ನಾಟಕದ ಜನಪ್ರಿಯತೆ ಗಳಿಸಿದ್ದರು. ಕನ್ನಡದ ಹಲವಾರು ಚಿತ್ರಗಳ್ಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯ ಕಲಾವಿದರಾಗಿ ಜನರನ್ನು ರಂಜಿಸಿದ್ದರು. ಮೋಹನ್ ಜೂನೇಜ ಅವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಚೆಲ್ಲಾಟ” ಚಿತ್ರದಲ್ಲಿ ಮಧುಮಗನ ಪಾತ್ರ ತುಂಬಾ ಖ್ಯಾತಿ ಹಾಗೂ ಜನಪ್ರಿಯತೆ ತಂದುಕೊಟ್ಟಯಿತು. ಇತ್ತೀಚಿಗೆ ಬಿಡುಗಡೆಯದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಇರದರಲ್ಲೂ ಪೋಷಕ ನಟನಾಗಿ ಮೋಹನ್ ಜೂನೇಜ ಅವರು ಅಭಿನಯಿಸಿದ್ದರು.

ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಮುಖ ನಾಯಕ ನಟರ ಜೊತೆ ಅಭಿನಯಿಸಿದ್ದು ಅವರು ನವಗ್ರಹ, ಗಣೇಶನ ಗಲಾಟೆ, ಜೋಗಿ, ಹೀಗೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿ ಸುಮಾರು 100 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇಂದಿಗೆ ಅವರ ಬಣ್ಣದ ಬದುಕು ಮುಕ್ತಯವಾಗಿದೆ. ಕನ್ನಡ ಚಿತ್ರರಂಗದ ಹಿರಿಯ ಹಾಗೂ ಕಿರಿಯ ಕಲಾವಿದರು ಅವರಿಗಾಗಿ ಕಂಬನಿ ಮಿಡಿದಿದ್ದರೆ.
ಒಳ್ಳೆಯ ಕಲಾವಿದನನ್ನು ಕಳೆದುಕೊಂಡ ನಾವು ನಮ್ಮ ಚಿತ್ರರಂಗ ಬಡವಗಿದೆ ಎಂದಿದ್ದಾರೆ. ಮೋಹನ್ ಜೂನೇಜ ಅವರ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ರು. ಇವರು ಕನ್ನಡ ಅಲ್ಲದೇ ತೆಲುಗು ನಲ್ಲಿ ಸಹಾ ಅಭಿನಯ ಮಾಡಿ ಇಲ್ಲಿಯೂ ಸಹಾ ಉತ್ತಮನಟ ಎಂಬ ಹೆಗ್ಗಳಿಕೆಗೆ ಪತ್ರರಾಗಿದ್ದಾರೆ.

ಇಂದು ಬೆಂಗಳೂರಿನ ಉತ್ತರ ತಾಲೂಕಿನ ತಮ್ಮೆನಹಳ್ಳಿಯಲ್ಲಿ ವಾಸಿಸುತ್ತಿದ್ದ ಮೋಹನ್ ಜೂನೇಜ ಅವರ ಮೃ’ತ’ದೇಹವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಗಿದ್ದು, ಅವರ ಅಂತಿಮ ದರ್ಶನಕ್ಕೆ ಕುಟುಂಬದವರು, ಬಂಧುಗಳು, ಸ್ನೇಹಿತರು, ಹಾಗೂ ಕಲಾವಿದರಿಗೆ ಮೋಹನ್ ಜೂನೇಜ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅವರ ಆತ್ಮಕ್ಕೆ ಸಂತಿಸಿಗಲಿ.


Leave a Reply

Your email address will not be published. Required fields are marked *