ಸ್ಯಾಂಡಲ್ವುಡ್ ನ ಬಾಸ್ ದರ್ಶನ್ ಅವರ ಮದುವೆಯ ಲಗ್ನ ಪತ್ರಿಕೆಯಲ್ಲಿ ವಿಶೇಷವಾಗಿ ಏನೆಂದು ಬರೆಯಲಾಗಿತ್ತು ಗೊತ್ತಾ? ಇದೀಗ ಎಲ್ಲೆಡೆ ಅದೇ ಚರ್ಚೆ ನೋಡಿ!!

Cinema Entertainment

Actor darshan and vijaylakshmi marriage card : ನಮಸ್ತೆ ಪ್ರೀತಿಯ ವೀಕ್ಷಕರೆ ಚಂದನವನದಲ್ಲಿ ಸದ್ಯಕ್ಕೆ ಓಡುತ್ತಿರುವ ಕುದುರೆ ಅಂದ್ರೆ ಅದು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿಬಾಸ್ ಎಂದು ಹೇಳಬಹುದು. ಹೌದು ತಮ್ಮ ನೇರನುಡಿ ಹಾಗೂ ಕಾರ್ಯಗಳ ಮೂಲಕವೇ ಸಾಕಷ್ಟು ಸುದ್ದಿಯಲ್ಲಿರುವಂತಹ ನಟ ದರ್ಶನ್ ಕರ್ನಾಟಕದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ ಅಂತಾನೆ ಹೇಳಬಹುದು.

ನಟ ದರ್ಶನ್ ಅವರ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಸಿನಿಮಾದ ಪ್ರಮೋಶನ್ ಇಡೀ ಕರ್ನಾಟಕ ದಾದ್ಯಂತ ಅಭಿಮಾನಿಗಳೇ ತಮ್ಮ ಸ್ವಂತ ಖರ್ಚಿನಿಂದ ಅದ್ದೂರಿಯಾಗಿ ಭರ್ಜರಿಯಾಗಿ ಮಾಡುತ್ತಿದ್ದಾರೆ. ಅದೇ ರೀತಿ ಕ್ರಾಂತಿ ಸಿನಿಮಾ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ ಅಂತಾನೆ ಹೇಳಬಹುದು. ಇನ್ನು ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆಯ ದಿನಾಂಕವನ್ನು ಅನೌನ್ಸ್ ಮಾಡಲಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ವಿಜಯ ಲಕ್ಷ್ಮಿ ಅವರನ್ನು ಮೇ 14, 2000 ರಂದು ಧರ್ಮಸ್ಥಳದ ವಸಂತ ಮಹಲ್ ನಲ್ಲಿ ವಿವಾಹ ಮಾಡಿಕೊಂಡಿದ್ದು, ಇವರು ಮದುವೆ ಅದಾಗಲೇ ಸುಮಾರು 21 ವರ್ಷಗಳಾಗಿವೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆಯ ಲಗ್ನಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆ ತುಂಬಾ ಹರಿದಾಡುತ್ತಿದೆ.

36 ವರ್ಷದ ಅಂಕಲ್ ಜೋತೆ ಸಂಬಂಧ ಇಟ್ಟುಕೊಂಡಿದ್ದ 21ರ ಯುವತಿ. ಮದುವೆ ಆಗು ಎಂದು ಅಂಕಲ್ ಒತ್ತಾಯ ಮಾಡಿದಾಗ ಯುವತಿ ಮಾಡಿದ್ದೇನು ನೋಡಿ!!! ಶಾ ಕ್ ಆಗುತ್ತೀರಿ!!

ಇದನ್ನು ನೋಡಿದ ಸಾಕಷ್ಟು ಅಭಿಮಾನಿಗಳು ದರ್ಶನ್ ಅವರ ವಿವಾಹ ವಾರ್ಷಿಕೋತ್ಸವದ ದಿನ ಶುಭಾಶಯಗಳನ್ನು ತಿಳಿಸಿದ್ದಾರೆ. ಇನ್ನು ದರ್ಶನ್ ಅವರು ತಮ್ಮ ಮದುವೆಯ ವಾರ್ಷಿಕೋತ್ಸವ ದಿನದಂದು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಡೈಮಂಡ್ ನೆಕ್ಲೇಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ದರ್ಶನ್ ಅವರು ವಿಜಯಲಕ್ಷ್ಮಿ ಅವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ.

ಇನ್ನು ದರ್ಶನ್ ಅವರು ಫೆಬ್ರವರಿ 16, 1977 ರಲ್ಲಿ ತೂಗುದೀಪ ಶ್ರೀನಿವಾಸ ಮತ್ತು ಮೀನ ತೂಗುದೀಪ ಅವರಿಗೆ ಜನಿಸಿದ್ದಾರೆ. ಮೊದಲು ದರ್ಶನ್ ಅವರು ಕಿರುತೆರೆಯ ಒಂದು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಬೆಳ್ಳಿತೆರೆಗೆ ಬಂದು ಕೆಲ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಅಭಿನಯಿಸಿ, 2001 ರಲ್ಲಿ ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು.

ಇದಾದ ಮೇಲೆ ಧ್ರುವ, ದಿಲ್, ಲಾಲಿಹಾಡು, ದಾಸ, ಅಣ್ಣಾವ್ರು, ಧರ್ಮ, ದರ್ಶನ್, ಭೂಪತಿ, ಅನಾಥರು, ಪೊರ್ಕಿ, ಸಾರಥಿ, ಬಾಸ್, ಪ್ರಿನ್ಸ್, ಸ್ನೇಹಿತರು, ಬೃಂದಾವನ, ನಾಗರಹಾವು, ಯಜಮಾನ, ಕುರುಕ್ಷೇತ್ರ, ಒಡೆಯ, ರಾಬರ್ಟ್ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.

ದರ್ಶನ್ ಅವರು ಅಭಿನಯಿಸಿದ ಸಾಕಷ್ಟು ಸಿನಿಮಾಗಳು ಹಿಟ್ ಎಂದು ಹೇಳಬಹುದು. ದರ್ಶನ್ ಅವರು ಕೇವಲ ನಟರಾಗಿ ಮಾತ್ರವಲ್ಲ ಜೊತೆ ಜೊತೆಯಲಿ, ನವಗ್ರಹ, ಬುಲ್ ಬುಲ್, ಮದುವೆಯ ಮಮತೆಯ ಕರೆಯೋಲೆ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ.
ಇದರ ಜೊತೆಗೆ ಸಾಕಷ್ಟು ಚಿತ್ರಗಳನ್ನು ಡಿಸ್ಟ್ರಿಬ್ಯೂಟ್ ಸಹ ಮಾಡಿದ್ದಾರೆ. ಇನ್ನು ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ಅವರಿಗೆ ಸಿನಿಮಾಗಳು ಎಂದರೆ ಎಷ್ಟು ಇಷ್ಟವೋ ಅಷ್ಟೇ ಇಷ್ಟ ಪ್ರಾಣಿ ಪಕ್ಷಿಗಳ ಮೇಲೂ ಇದೆ. ಮೈಸೂರಿನಲ್ಲಿ ದರ್ಶನ್ ಅವರದ್ದೇ ಆದ ಒಂದು ಜೂ ಕೂಡ ಇದೆ. ಇದರಲ್ಲಿ ಸಾಕಷ್ಟು ಪಕ್ಷಿ ಪ್ರಾಣಿಗಳನ್ನು ದರ್ಶನ್ ಅವರು ಬೆಳೆಸುತ್ತಿದ್ದಾರೆ.


Leave a Reply

Your email address will not be published. Required fields are marked *