ಕಷ್ಟದ ದಿನಗಳನ್ನು ಎದುರಿಸಿ ಈ ಮಟ್ಟಕ್ಕೆ ಬೆಳೆದ ನವರಸ ನಾಯಕ ಜಗ್ಗೇಶ್ ಅವರ ಹೊಸ ಮನೆ ಹೇಗಿದೆ ಗೊತ್ತಾ? ನೋಡಿ ಈ ಭವ್ಯ ಬಂಗಲೆ ಎಷ್ಟು ವಿಶೇಷವಾಗಿದೆ.!

Cinema

actor jaggesh house : ಕನ್ನಡ ಚಿತ್ರರಂಗದ ಮಾತಿನಲ್ಲಿ ಕಚಗುಳಿ ನೀಡುವ ನವರಸದ ನಟನೆ ನೆನಪಾಗೊದು ನವರಸ ನಾಯಕ ಜಗ್ಗೇಶ್ ಎಂದು. ಸಣ್ಣ ಪುಟ್ಟ ಹಾಸ್ಯ, ಖಳನಾಗಿ ಅಭಿನಯಿಸಿ ಮುಂದೆ ಖ್ಯಾತ ನಟರಾಗಿ ಸ್ಯಾಂಡಲ್ವುಡ್ ನಲ್ಲಿ ಬೆಳೆದಿದ್ದಾರೆ. ಇವರ ಮೊದಲನೆಯ ಚಿತ್ರ ಇಬ್ಬನಿ ಕರಗಿತು,ರಣಧೀರ, ಸಾಂಗ್ಲಿಯಾನ, ರಣರಂಗ, ಯುದ್ಧಕಾಂಡ,ಪರಶುರಾಮ, ರಾಣಿ ಮಹಾರಾಣಿ, ಸೋಲಿಲ್ಲದ ಸರದಾರ’ ಸಿನೆಮಾದಲ್ಲಿ ಕಳನಾಯಕ ಹಾಗೂ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ.

2006 ರಲ್ಲಿ ಇವರ ನೂರನೇ ಚಿತ್ರ ಮಠ ಬರ್ಜರಿ ಪ್ರದರ್ಶನ ಪಡೆಯಿತು. ಮೇಕಪ್ ಎಂಬ ಚಿತ್ರ ನಿರ್ಮಿಸಿ ಇದರ ಮೂಲಕ ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ ಕೂಡಾ. ಇನ್ನೂ ಜಗ್ಗೇಶ್ ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ. ನವರಸನಾಯಕ’ ಜಗ್ಗೇಶ್ ನಟನೆ, ಮಿಮಿಕ್ರಿ, ಹಾಡುಗಾರಿಕೆಯಲ್ಲಿ ತೊಡಗಿಕೊಂಡವರು. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಡಲ್ಲಿ ಜಡ್ಜ್ ಆಗಿ ಬರುವ ಮೂಲಕ ಮತ್ತೆ ಪ್ರೇಕ್ಷಕರ ಮನ ಗೆದ್ದಿದ್ದರು. 2012 ರಲ್ಲಿ ತಮ್ಮ ಪುತ್ರ ಗುರುರಾಜ್‌ರ `ಗುರು’ ,2017 ರಲ್ಲಿ ತೆರೆಕಂಡ `ಮೇಲುಕೋಟೆ ಮಂಜ’ ಚಿತ್ರಗಳನ್ನು ನಿರ್ದೇಶನ ಮಾಡಿ ನಿರ್ದೇಶಕರಾಗಿ ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದರು.

ಬಹುತೇಕ ಎಲ್ಲ ವಿಚಾರಗಳ ಬಗ್ಗೆಯೂ ಅವರು ಮಾತನಾಡುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿ ಇರುತ್ತಾರೆ. ಇವರ ಬಾಲ್ಯದ ಹೆಸರು ಈಶ್ವರ ಗೌಡ ಎಂದಾಗಿದ್ದು ಚಿತ್ರರಂಗಕ್ಕೆ ಕಾಲಿಟ್ಟ ಬಳಿಕ ಇವರು ಜಗ್ಗೇಶ್ ಎಂದು ಕರೆಸಿಕೊಂಡರು. ಇವರು ಮೂಲತಃ ತುಮಕೂರು ಜಿಲ್ಲೆಯ ಮಾಯಸಂದ್ರದವರು(ಜಡೆ ಮಾಯಸಂದ್ರ).ಇವರಿಗೆ ಇಬ್ಬರು ಸಹೋದರ ಮತ್ತು ಸಹೋದರಿಯರಿದ್ದಾರೆ. ಇವರ ಸಹೋದರ ಕೋಮಲ್ ಕೂಡ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದರಾಗಿ ಗುರುತಿಸಿಕೊಂಡಿರುವ ನಟರಾಗಿದ್ದಾರೆ.

ಇವರು ಪರಿಮಳರವರನ್ನು ಪ್ರೀತಿಸಿ ವಿವಾಹವಾಗಿದ್ದು ಇವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ನಮಗೆಲ್ಲ ತಿಳಿದೆ ಇದೇ ನಟ ಜಗ್ಗೇಶ್ ಪ್ರೀತಿಸಿ ಮದುವೆಯಾದವರೆಂದು ಅದರಂತೆ ಅವರ ಸಾಕಷ್ಟು ವಿರೋಧದ ನಡುವೆ ಪ್ರೀತಿಸಿ ಮದುವೆಯಾದರೂ ಇಂದು ಸಾರ್ಥಕ ಜೀವನ ಪಡೆದಿದ್ದೇನೆ ಎಂದು ನಟ ಜಗ್ಗೇಶ್ ಅವರ ಪತ್ನಿ ರಿಯಾಲಿಟಿ ಶೋ ಒಂದರಲ್ಲಿ ಹೇಳಿದ್ದರು.

ಗಂಡನ ಪ್ರತಿಯೊಂದು ಕ್ಷಣಗಳಲ್ಲಿಯೂ ಬೆನ್ನೆಲುಬಾಗಿ ನಿಂತು ಈಗ ಮನೆಗೆ ಹೊಸ ರೂಪ ನೀಡಿ ಮನೆಯ ವಾತಾವರಣವನ್ನು ಒಂದಿಷ್ಟು ಬದಲಿಸುವ ಯೋಜನೆಗೆ ಜಗ್ಗೇಶ್ ಪತ್ನಿ ಮುಂದಾಗಿದ್ದು ಅದರಂತೆ ಹೊಸ ವಿನ್ಯಾಸದಲ್ಲಿ ಸಂಪೂರ್ಣ ಲಕ್ಶೂರಿಯಾಗಿ ಮನೆ ಸಿದ್ಧಪಡಿಸಲಾಯಿತು. ತಮ್ಮ ಹಾಗೂ ಮನೆಯವರ ಅಭಿರುಚಿಗೆ ತಕ್ಕಂತೆ ಹೇಳಿ ಮಾಡಿಸಿದ್ದಾರೆ ಪರಿಮಳ ಜಗ್ಗೇಶ್. ಜಗ್ಗೇಶ್ ಅವರ ಈ ಹೊಸ ಮನೆಯ ಒಳಗೆ ಸಂಪೂರ್ಣ ಇಂಪಿರಿಯಲ್ ಡಿಸೈನ್ ಮಾಡಲಾಗಿದ್ದು ಅತ್ಯಂತ ನವ ವಿನ್ಯಾಸದ ಕಾರ್ಪೆಟ್ ಅನ್ನು ಸಹ ಹಾಕಿದ್ದಾರೆ.

ಅತಿಥಿಗಳ ಸತ್ಕಾರಕ್ಕೆ ಮತ್ತು ಮನೆಯವರೆ ವಿರಾಮಿಸಲು ಬೇಕಾದ ಸೋಫಾ ಸೆಟ್ ಅನ್ನು ಸಹ ಹಾಕಲಾಗಿದ್ದು ಅದು ಸಹ ಬ್ರ್ಯಾಂಡೆಡ್ ಎನ್ನಬಹುದು. ಡೈನಿಂಗ್ ರೂಂ, ಕಿಚನ್, ಹಾಲ್, ಬಾತ್ರೂಂ ಹೀಗೆ ಎಲ್ಲವೂ ಅವರವರ ಅಭಿರುಚಿಗೆ ತಕ್ಕಂತಿದೆ. ಅವರು ಗುರು ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದು ರಾಯರ ಮಂತ್ರಾಕ್ಷತೆ, ಜಪಮಾಲೆ ಹಾಗೂ ಫೋಟೋ ಸಹ ಇದೆ. ಇದರೊಂದಿಗೆ ಗಿಟಾರ್, ಪಿಯಾನೊ, ಸಿತಾರ್ ಮುಂತಾದ ಸಂಗೀತ ವಾಧ್ಯಗಳು ಅವರ ಸಂಗೀತ ಪ್ರೇಮ ತಿಳಿಸುತ್ತದೆ.

ಇನ್ನು ಇವರ ಮನೆ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು ಸಿಕ್ಕಾಪಟ್ಟೆ ಫೇಮಸ್ ಕೂಡ ಆಗಿದೆ‌.‌ ಜಗ್ಗೇಶ್ ಅವರ ಈ ಸುಂದರ ಮನೆ ನೋಡಿ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Leave a Reply

Your email address will not be published. Required fields are marked *