ನಟಿ ಲವ್ಲೀ ಸ್ಟಾರ್ ಮಗಳು ಅಮೃತ ಸಿನಿಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಸಿನಿ ಲೋಕಕ್ಕೆ ಮತ್ತೊಂದು ನಟಿಯ ಸೇರ್ಪಡೆಯಾಗಿದೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಸಿನಿ ಕೆರಿಯರ್ ಶುರು ಮಾಡುತ್ತಿದ್ದು, ‘ಟಗರು ಪಲ್ಯ’ ಸಿನಿಮಾದಲ್ಲಿ ನಟಿಯಾಗಿ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. Prem Daughter ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕೆ ಉಮೇಶ್ ಅವರು ಅಮೃತ ಅವರಿಗೆ ಹಳ್ಳಿ ಹುಡುಗಿಯ ಶೈಲಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದು.
ಲಂಗ ದಾವಣಿ ತೊಟ್ಟು ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಸಿನಿಮಾದ ಫೋಟೋಶೂಟ್ ಮೇಕಿಂಗ್ ಅನಾವರಣಗೊಂಡಿದೆ. ನವೆಂಬರ್ 29 ರಂದು ‘ಟಗರು ಪಲ್ಯ’ ಮುಹೂರ್ತ ನೆರವೇರಿದೆ. ಟಗರು ಪಲ್ಯ ಸಿನಿಮಾದ ಮುಹೂರ್ತದ ಬಳಿಕ, ನಿರ್ದೇಶಕ ಉಮೇಶ್.ಕೆ ಕೃಪ, ‘ಸಿನಿಮಾಗೆ ಫ್ರೆಶ್ ಫೇಸ್ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಕೇಳಿ ಹೇಳುತ್ತೇನೆ ಎಂದಿದ್ರು. ಅವರಿಗೂ ಈ ಕಥೆ ಇಷ್ಟವಾಯ್ತು. ಸಿನಿಮಾ ಮಾಡಲು ಒಪ್ಪಿಕೊಂಡ್ರು’ ಎಂದಿದ್ದಾರೆ.

ಇದೇ ವೇಳೆಯಲ್ಲಿ ನಟ ಪ್ರೇಮ್ ಅವರು ಮಾತನಾಡಿದ್ದು, ಮಾತು ಶುರು ಮಾಡಿದ ನೆನಪಿರಲಿ ಪ್ರೇಮ್, ‘ತಂದೆಯಾಗಿ ನನಗೆ ತುಂಬ ಸಂತೋಷ ಆಗುತ್ತಿದೆ. ನಾನು ಟ್ರೆಂಡಿಂಗ್ನಲ್ಲಿ ಇರುವಾಗಲೇ ಮಗಳನ್ನು ಹೀರೋಯಿನ್ ಆಗಿ ನೋಡುವ, ಆಕೆಯ ಕಟೌಟ್ ನೋಡುವ ಸೌಭಾಗ್ಯ ನನಗೆ ಸಿಕ್ಕಿದೆ. ಗೆಳೆಯ ನಿರಂಜನ್, ಡಾಲಿ ಧನಂಜಯ್ ಹಾಗೂ ನಿರ್ದೇಶಕ ಉಮೇಶ್ ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಈ ಮೂವರು ಸೇರಿಕೊಂಡು ಅಪ್ಪಟ ಕನ್ನಡನಾಡಿನ ಸ್ಕ್ರಿಪ್ಟ್ ಮಾಡಿದ್ದಾರೆ. ಆ ಬಗ್ಗೆ ಸಂತೋಷ ಇದೆ. ನನ್ನ ಮಗಳಿಗೆ ಯೋಗ್ಯತೆ ಇದ್ದರೆ ಕನ್ನಡಿಗರು ಬೆಳೆಸಲಿ ಎಂದಿದ್ದಾರೆ. ಈ ಮೂಲಕ ನಟ ಪ್ರೇಮ್ ಅವರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.
ಹಾಗೆ ನನ್ನ ಮಗಳು ಕೂಡ ಸ್ವಂತ ಟ್ಯಾಲೆಂಟ್ ನಿಂದ ಕನ್ನಡಿಗರ ಮನ ಗೆಲ್ಲುತ್ತಾಳೆ. ತಂದೆ ತಾಯಿ ಕಲಾವಿದರು ಮಾತ್ರಕ್ಕೆ ಮಕ್ಕಳಿಗೆ ಕಲೆ ಹುಟ್ಟುತ್ತಲೇ ಬರೋದಿಲ್ಲ ಕಲೆಯನ್ನು ಕೂಡ ಅವರು ಅಭ್ಯಾಸ ಮಾಡಿ ಕಲಿಯಬೇಕಾಗುತ್ತದೆ. ನನ್ನ ಮಗಳಿಗೆ ಕೂಡ ಅರ್ಹತೆ ಮತ್ತು ಯೋಗ್ಯತೆ ಇದ್ದರೆ ಮಾತ್ರ ಕನ್ನಡಿಗರು ಬೆಳೆಸಲಿ ಎಂದಿದ್ದಾರೆ. ನಟಿಯಾಗಿ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿರುವ ಪ್ರೇಮ್ ಅವರ ಪುತ್ರಿ ಅಮೃತ ತೆರೆ ಮೇಲೆ ಹೇಗೆ ಕಮಲ್ ಮಾಡುತ್ತಾರೆ ಎಂದು ಕಾದು ನೋಡಬೇಕು.