actress priyamani age :ಬಹುಭಾಷಾ ನಟಿಯಾಗಿ ಮಿಂಚುತ್ತಿರುವವರ ಸಾಲಿನಲ್ಲಿ ನಟಿ ಪ್ರಿಯಾಮಣಿ ಕೂಡ ಒಬ್ಬರು. ಸಿನಿಮಾರಂಗದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಮಣಿಯವರು ಹುಟ್ಟಿದ್ದು 1984 ರಲ್ಲಿ. ಅಂದಹಾಗೆ,ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಪ್ರಿಯಾಮಣಿ ಅವರ ತಂದೆ ವಾಸುದೇವ ಮಣಿ ತಾಯಿ ಲತಾ ಮಣಿ. ಪ್ರಿಯಾಮಣಿಯವರ ತಾಯಿ ಲತಾ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ಆಟಗಾರ್ತಿ ಗಮನ ಸೆಳೆದಿದ್ದರು.
ಪ್ರಿಯಮಣಿ ಶ್ರೀ ಅರಬಿಂದೋ ಮೆಮೋರಿಯಲ್ಲಿ ಬಾಲ್ಯದ ವಿದ್ಯಾಭ್ಯಾಸ ವನ್ನು ಪೂರ್ಣಗೊಳಿಸಿದರು. ಬಿಷಪ್ ಕಾಟನ್ ಕಾಲೇಜ್ ನಲ್ಲಿ ಪದವಿ ಶಿಕ್ಷಣವನ್ನು ಪಡೆದುಕೊಂಡ ಪ್ರಿಯಾಮಣಿ ಸಿನಿ ರಂಗಕ್ಕೆ (cinema industry ) ಎಂಟ್ರಿ ಕೊಟ್ಟರು. ನಟಿ ಪ್ರಿಯಾಮಣಿಯವರನ್ನು ತಮಿಳು ಚಿತ್ರ ರಂಗದ ನಿರ್ದೇಶಕ ಭರತ್ ರಾಜ್ ಅವರು ಫಿಲಂ ಇಂಡಸ್ಟ್ರಿಗೆ ಪರಿಚಯ ಮಾಡಿದರು.
ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂ, ತಮಿಳು ಚಿತ್ರದಲ್ಲೂ ನಟಿಸುವ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಪುನೀತ್ ರಾಜಕುಮಾರ್ ರವರ ಸ್ಕ್ರೀನ್ ಶೇರ್ ಮಾಡಿಕೊಳ್ಳುವ ಮೂಲಕ ರಾಮ್ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಚಂದನವನವನ್ನು ಪ್ರವೇಶಿಸಿದರು.
ಅನೇಕ ಸಿನಿಮಾಗಳಲ್ಲಿ ಸಿನಿಪ್ರಿಯರ ಮನಸ್ಸನ್ನು ಗೆದ್ದಿರುವ ನಟಿ ಪ್ರಿಯಾಮಣಿ ಯವರಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಕನ್ನಡದಲ್ಲಿ ಅನೇಕ ಸಿನಿಮಾದಲ್ಲಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದು ಅನೇಕ ಡಾನ್ಸ್ ರಿಯಾಲಿಟಿ ಶೋಗಳನ್ನು ತೀರ್ಪುಗಾರರಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಯಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ.
ಅದರ ಜೊತೆಗೆ ಪ್ರಿಯಾಮಣಿ ಆಗಸ್ಟ್ 2017 ರಲ್ಲಿ ಮುಸ್ತಫಾ ರಾಜ್ ಅವರನ್ನು ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟರು. ಬಹುಭಾಷ ನಟಿಯಾಗಿ ಗುರುತಿಸಿಕೊಂಡಿರುವ ಪ್ರಿಯಾಮಣಿಯವರನ್ನು ಯಾವ ಯುವನಟಿಯರಿಗೇನು ಕಡಿಮೆಯಿಲ್ಲ. ಇವರ ನಿಜವಾದ ವಯಸ್ಸು ಕೇವಲ 38 ವರ್ಷ. ಮತ್ತೆ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ DR 56 ಸಿನಿಮಾದ ಫರ್ಸ್ಟ್ ಲುಕ್ ರಿಲೀಸ್ ಆಗಿತ್ತು.

ಸಿನಿಮಾದ ಫಸ್ಟ್ ಲುಕ್ ಅನ್ನು ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಈ ಫಸ್ಟ್ ಲುಕ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು. ಈ ಸಿನಿಮಾದಲ್ಲಿ ಪ್ರಿಯಾಮಣಿ ಸಿಬಿಐ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ತಯಾರಾಗುತ್ತಿದ್ದು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್ ಆಗಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ರಾಜೇಶ್ ಅನಂತಲೀಲಾ ಆಕ್ಷನ್ ಕಟ್ ಹೇಳಿದ್ದಾರೆ.
ವಿಮಾನದ ಒಳಗಡೆ ಏನೆಲ್ಲ ನಡೆಯುತ್ತೆ ಗೊತ್ತಾ? ಗಗನಸಖಿಯರು ವಿಮಾನದಲ್ಲಿ ಏನೆಲ್ಲ ಮಾಡ್ತಾರೆ ಗೊತ್ತಾ? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ!!
ಹರಿ ಹರ ಪಿಕ್ಚರ್ಸ್ ಮತ್ತು ಶ್ರೀ ಲಕ್ಷ್ಮೀ ಜ್ಯೋತಿ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದ್ದು, ಈ Dr.56 ರ ನಿರ್ಮಾಪಕ ಪ್ರವೀಣ್ ರೆಡ್ಡಿ ಟಿ ಸಹ ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದಾರೆ. ಡಿಸೆಂಬರ್ 9 ರಂದು ತೆರೆ ಕಾಣುತ್ತಿರುವ Dr.56 ಸಿನಿಮಾದ ಬಗ್ಗೆ ಬಹು ನಿರೀಕ್ಷೆಯಿದೆ. ಸದ್ಯಕ್ಕೆ ನಟಿ ಪ್ರಿಯಾಮಣಿಯವರ ಕೈಯಲ್ಲಿ ಸೈನೈಡ್, ಕೊಟೇಶನ್ ಗ್ಯಾಂಗ್, ಖೈಮರ, ಮೈದಾನ್, ಜವಾನ್ ಮತ್ತು ವೆಂಕಟ್ ಪ್ರಭು ನಿರ್ದೇಶನದ ಎನ್ಸಿ 22 ಸೇರಿದಂತೆ ಅನೇಕ ಸಿನಿಮಾಗಳಿದ್ದು, ಸಿನಿ ಲೋಕದಲ್ಲಿ ಬ್ಯುಸಿಯಾಗಿದ್ದಾರೆ.