anchor anushree house : ಸಿನೆಮಾರಂಗದಲ್ಲಿ ಹೆಸರು ಮಾಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಇನ್ನು ಸಿನಿ ಪ್ರಪಂಚಕ್ಕೆ ಯಾವುದೇ ಸಂಬಂಧವಿಲ್ಲದೆ ಕಷ್ಟ ಪಟ್ಟು ಮೇಲೆ ಬಂದಂತಹ ಅದ್ಬುತ ನಟಿ ಹಾಗೂ ಕನ್ನಡದ ನಂಬರ್ 1ನಿರೂಪಕಿ ಅನುಶ್ರೀ. ಹೌದು ಕನ್ನಡ ಕಿರುತೆರೆಯ ಟಾಪ್ ನಿರೂಪಕಿಯಾರ ಪೈಕಿ ಅನುಶ್ರೀ ಮೊದಲ ಸ್ಥಾನದಲ್ಲಿ ರಾರಾಜಿಸುತ್ತಿದ್ದಾರೆ.
ತಮ್ಮ ಚಿಟ ಪಾಠ ಮಾತಿನ ಅದ್ಬುತ ನಿರೂಪಣೆಯ ಮೂಲಕವೇ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸಲ್ಲಿ ಮನೆ ಮಾಡಿದ್ದಾರೆ ನಟಿ ಅನುಶ್ರೀ. ಯಾವುದೇ ಕಾರ್ಯಕ್ರಮ ಇರಲಿ, ಅಥವಾ ಯಾವುದೇ ಹೊಸ ಸಿನೆಮಾಗಳ ಪ್ರಚಾರ ಇರಲಿ ಅದಕ್ಕೆ ಅನುಶ್ರೀ ಅವರೇ ನಿರೂಪಣೆ ಮಾಡುತ್ತಾರೆ. ಅನುಶ್ರೀ ನಿರೂಪಣೆ ಇಲ್ಲದೆ ಆ ಕಾರ್ಯಕ್ರಮಕ್ಕೆ ಮೆರಗು ನೀಡುವುದಿಲ್ಲ.
ಇನ್ನು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದ ಮೂಲಕ ಅನುಶ್ರೀ ಅವರು ಎಲ್ಲರ ಮನೆ ಮಾತಾಗಿದ್ದಾರೆ. ತಮ್ಮ ಅದ್ಬುತ ನಿರೂಪಣೆ ಹಾಗೂ ಕಾಮಿಡಿ ಟೈಮಿಂಗ್ ನ ಮೂಲಕ ನಟಿ ಅನುಶ್ರೀ ಈ ಕಾರ್ಯಕ್ರಮಕ್ಕೆ ಇನ್ನಷ್ಟು ಜೀವ ತುಂಬುವ ಕೆಲಸ ಮಾಡಿದ್ದರು ಎಂದರೆ ತಪ್ಪಾಗಲಾರದು.
ಒಬ್ಬ ಅದ್ಭುತ ನಿರೂಪಕಿಯಾಗಿ ಜೊತೆಗೆ ಅವರು ಒಬ್ಬ ಅದ್ಬುತ ನಟಿ ಕೂಡ ಹೌದು. ಮುರಳಿ ಮೀಟ್ಸ್ ಮೀರಾ, ಬೆಂಕಿಪಟ್ಟಣ, ಮಾಧ ಮತ್ತು ಮಾನಸಿ, ಟೂಬಲೈಟ್ ರಿಂಗ್ ಮಾಸ್ಟರ್, ಉಪ್ಪು ಹುಲಿ ಕಾರ ಇನ್ನು ಮುಂತಾದ ಸಿನೆಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
ಸಿನೆಮಾಕ್ಷೇತ್ರಗಳಲ್ಲಿ ಕಾಣಿಸಿಕೊಂಡರು ಸಹ ಅನುಶ್ರೀ ಅವರು ಹೆಸರು ಮಾಡಿದ್ದು ನಿರೂಪಣೆ ಲೋಕದಲ್ಲಿ ಒಂದಾದ ಮೇಲೆ ಒಂದು ಕಾರ್ಯಕ್ರಮವನ್ನು ಅದ್ಬುತವಾದ ನಿರೂಪಣೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ನಟಿ ನಿರೂಪಕಿ ಅನುಶ್ರೀ.
ಅನುಶ್ರೀ ಅವರಿಗೆ 35 ವರ್ಷ ವಯಸ್ಸಾದರೂ ಕೂಡ ಇನ್ನು ದಾಂಪತ್ಯ ಜೀವನಕ್ಕೆ ಕಲಿಟ್ಟಿಲ್ಲ. ಸಾಧ್ಯ ಬಾಡಿಗೆ ಅಪಾರ್ಟ್ಮೆಂಟ್ ನಲ್ಲಿ ತಾಯಿ ಮತ್ತು ತಮ್ಮನ ಜೊತೆ ಅನುಶ್ರೀ ವಾಸವಾಗಿದ್ದರೆ. ಅನುಶ್ರೀ ಅವರ ಮನೆ ನೋಡಲು ತುಂಬಾ ಅದ್ಭುತವಾಗಿದೆ. ಮನೆಯ ಎದುರಿಗೆ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಅನುಶ್ರೀ ಇಟ್ಟುಕೊಂಡಿದ್ದಾರೆ.
ಇನ್ನು ಅನುಶ್ರೀ ಮನೆಯಲ್ಲಿ ಒಂದು ಮುದ್ದಾದ ನಾಯಿಮರಿಯನ್ನು ಸಾಕಿದ್ದಾರೆ. ಇನ್ನು ತನ್ನದೇ ಆದ ಸ್ವಂತ ಮನೆ ಕಟ್ಟಿಸುವ ಆಸೆ ಇದ್ದ ಅನುಶ್ರೀ ಇತ್ತೀಚಿಗೆ ಹೊಸ ಮನೆಯನ್ನು ಕಟ್ಟಿಸಲು ಭೂಮಿ ಪೂಜೆ ಕೂಡ ಮಾಡಿಸಿದ್ದಾರೆ. ಮನೆಯ ಕೆಲಸ ಈಗಾಗಲೇ ಭಾರದಿಂದ ಶುರುವಾಗಿದ್ದು, ಇನ್ನೊಂದು ವರ್ಷದಲ್ಲಿ ಮನೆ ಸಂಪೂರ್ಣವಾಗಿ ಪೂರ್ಣಗೊಳ್ಳಲಿದೆ. ಮನೆಯ ಗೃಹಪ್ರವೇಶ ಮುಗಿಸಿ ನಂತರ ತನ್ನ ಮದುವೆಯ ಬಗ್ಗೆ ಯೋಚಿಸುವುದಾಗಿ ಹೇಳಿದ್ದಾರಂತೆ ಅನುಶ್ರೀ. ಈ ಮಾಹಿತಿ ನಿಮಗೆ ಇಷ್ಟಾವಾಗಿದ್ದರೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.