Big Boss OTT: ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ಭರ್ಜರಿ ಎಂಟ್ರಿ ಕೊಟ್ಟ ಟಿಕ್ ಟಾಕ್ ಸುಂದರಿ ಸೋನು ಶ್ರೀನಿವಾಸ್ ಗೌಡ.!

ಸುದ್ದಿ

ದೊಡ್ಮನೆಗೆ 2ನೇ ಸ್ಪರ್ಧಿಯಾಗಿ ಭರ್ಜರಿ ಎಂಟ್ರಿ ಕೊಟ್ಟ ಟಿಕ್ ಟಾಕ್ ಸ್ಟಾರ್ ನಟಿ ಸೋನು ಶ್ರೀನಿವಾಸ್ ಗೌಡ ಈ ಹೆಸರು ಸೋಶಿಯಲ್ ಮೀಡಿಯಾಗಳಲ್ಲಿ ಮನರಂಜನೆಗಾಗಿ ಹೆಚ್ಚು ಹೊತ್ತು ಕಳೆಯುವ ಮಂದಿಗೆ ಬಹಳಷ್ಟು ಚಿರಪರಿಚಿತ ಹೆಸರಾಗಿದೆ. ಅದು ಮಾತ್ರವೇ ಅಲ್ಲದೇ ಸೋನು ಶ್ರೀನಿವಾಸ ಗೌಡ ಅವರ ಹೆಸರನ್ನು ಕೇಳಿದರೆ ತಟ್ಟನೆ ನೆನಪಾಗುವುದು ಅವರ ಸುತ್ತ ಹರಡಿಕೊಂಡಿದ್ದಂತಹ ಕಾಂಟ್ರವರ್ಸಿಗಳು. ಸೋನು ಶ್ರೀನಿವಾಸ್ ಗೌಡ ಯಾವುದೇ ಸಿನಿಮಾ ಅಥವಾ ಟಿವಿ ಸ್ಟಾರ್ ಆಗಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾ ಅವರಿಗೆ ಭರ್ಜರಿ ವೇದಿಕೆ ಒದಗಿಸಿಕೊಟ್ಟಿತು. ಅಲ್ಲಿಂದ ಆರಂಭವಾದ ಅವರ ಪ್ರಯಾಣ ಅವರನ್ನು ಸ್ಯಾಂಡಲ್ವುಡ್ ಸಿನಿಮಾಗಳಿಗೆ ಎಂಟ್ರಿ ನೀಡುವವರೆಗೆ ಕರೆ ತಂದಿದೆ.

ಇದೀಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ಸೋನು ಶ್ರೀನಿವಾಸ್ ಗೌಡ ಅವರು ಕನ್ನಡದ ಬಿಗ್ ಬಾಸ್ ಓಟಿಟಿಯ ಮೊದಲನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಎಂಟ್ರಿಯನ್ನು ನೀಡುವ ಮೂಲಕ ಎಲ್ಲರಿಗೂ ಅಚ್ಚರಿಯನ್ನು ಮೂಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ಸೋನು ಶ್ರೀನಿವಾಸ್ ಗೌಡ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿರುವುದು ಅವರ ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ಸೋನು ಅವರು ಕೆಲ ವರ್ಷಗಳ ಹಿಂದೆ ಕನ್ನಡ, ತೆಲುಗು ಚಿತ್ರರಂಗವನ್ನು ಹೋಲಿಕೆ ಮಾಡಿ ತೆಲುಗಿನ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದರು, ಆಗ ನೆಟ್ಟಿಗರ ಕೋಪಕ್ಕೆ ಗುರಿಯಾಗಿದ್ದರು. ಟಿಕ್ ಟಾಕ್ ವೀಡಿಯೋಗಳ ಮೂಲಕ ಸಖತ್ ಸದ್ದು ಮಾಡಿದ್ದ ಸೋನು ಅವರಿಗೆ ಆ ಜನಪ್ರಿಯತೆಯ ಫಲವಾಗಿಯೇ ಕನ್ನಡದ ಕ್ಯಾಟ್ಬರೀಸ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಹಾ ಒಲಿದು ಬಂದಿತ್ತು. ಟಿಕ್ ಟಾಕ್ ಬ್ಯಾನ್ ನಂತರ ಇನ್ಸ್ಟಾಗ್ರಾಂ ರೀಲ್ಸ್ ಮೂಲಕ ಸದ್ದು ಮಾಡುತ್ತಿರುವ ಸೋನು ಅವರನ್ನು ಏಳು ಲಕ್ಷಕ್ಕೂ ಅಧಿಕ ಮಂದಿ ಹಿಂಬಾಲಿಸುತ್ತಿದ್ದು, ಇವರ ಫೋಟೋ ಗಳು ಮತ್ತು ವೀಡಿಯೋಗಳು ಸಖತ್ ಸದ್ದು ಮಾಡುತ್ತಾ ಇರುತ್ತದೆ.


Leave a Reply

Your email address will not be published. Required fields are marked *