ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರ ಮಾರ್ಚ್ 17 ಅಪ್ಪು ಅವರ ಜನ್ಮ ದಿನದಂದು ತೆರೆಕಂಡು ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಪುನೀತ್ ರಾಜಕುಮಾರ್ ನಾಯಕ ನಟರಾಗಿ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್ ಚಿತ್ರ ಬಿಡುಗಡೆಗೊಂಡಾಗ ಅಪ್ಪು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತ ಮಾಡಿಕೊಂಡರು. ಚಿತ್ರ ಬಿಡುಗಡೆಯಡಗಿ 25 ದಿನವನ್ನು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡವು ಸಕ್ಸಸ್. ಮೀಟ್ ಅನ್ನು ಹಮ್ಮಿಕೊಂಡಿದೆ.
ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು. ಕಿಶೋರ್ ಪತ್ತಿಕೊಂಡ ನಿರ್ಮಾಣ ಮಾಡಿದ್ದರು. ಅಪ್ಪುಗೆ ನಾಯಕಿಯಾಗಿ ಪ್ರಿಯಾ ಆನಂದ್ ಅವರು ಜೊತೆಯಾದರೂ. ಏಪ್ರಿಲ್ 14 ರಂದು ಓ ಟಿ ಟಿ ಯಲ್ಲಿ ಬಿಡುಗಡೆಯಯಾಗಿತ್ತು. ಆದ್ರೂ ಚಿತ್ರಕ್ಕೆ ಕ್ರೀಜ್ ಕಡೆಯಾಗಿಲ್ಲ ಈಗಲೂ 50ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಈಗಲೂ ಪ್ರದರ್ಶನವಾಗುತ್ತಿದೆ. ಇದೀಗ ಚಿತ್ರತಂಡ ಹೊಸ ಅಪ್ಡೇಟ್ ಒಂದನ್ನು ನೀಡಿದೆ. ಅಪ್ಪು ಅವರು ನಟಿಸಿದ್ದ ಜೇಮ್ಸ್ ಚಿತ್ರದ ಅವರ ಪತ್ರಕ್ಕೆ ಅಪ್ಪು ಅವರ ಧ್ವನಿಯನ್ನು ಸೇರಿಸಲಾಗಿದೆ ಪುನೀತ್ ಅವರ ಧ್ವನಿಯಲ್ಲಿಯೇ ಜೇಮ್ಸ್ ಇನ್ನೂ ಮುಂದೆ ಚಿತ್ರ ಮಂದಿರದಲ್ಲಿ ಪ್ರದರ್ಶನ ಕಾಣಲಿದೆ.
ಹೊಸ ತಂತ್ರಜ್ಞಾನ ಬಳಸಿ ಇಂತದೊಂದು ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಚಿತ್ರದಲ್ಲಿ ಈ ಒಂದು ಹೊಸ ಪ್ರಯತ್ನವನ್ನು ಮಾಡಿದ್ದಾರೆ. ಶಿವಣ್ಣವರ ವಾಯ್ಸ್ ಬದಲು ಅಪ್ಪು ಅವರ ವಾಯ್ಸ್ ಅನ್ನು ಬಳಸಿದ್ದಾರೆ ಇದು ಅದ್ಭುತವಾಗಿ ಮೂಡಿ ಬಂದಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದಾರೆ ಇದು ಪಕ್ಕಾ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ಕೊಡುತ್ತದೆ. ಎಂದು ಚಿತ್ರತಂಡ ಹೇಳಿದೆ. ಇದೇ ಶುಕ್ರವಾರದಿಂದ ಅಪ್ಪು ಅಭಿಮಾನಿಗಳಿಗೆ ಹೊಸ ರೂಪದಲ್ಲಿ ಜೇಮ್ಸ್ ಅನ್ನು ಮತ್ತೆ ಕಣ್ತುಂಬಿಕೊಳ್ಳಬಹುದು. ಇದೇ ಏಪ್ರಿಲ್ 22 ರಿಂದ ಅಪ್ಪು ಧ್ವನಿಯನ್ನು ‘ಜೇಮ್ಸ್’ ಚಿತ್ರಕ್ಕೆ ಸೇರಿಸಲಾಗುತ್ತಿದ್ದು, ಅಂದಿನಿಂದ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ‘ಜೇಮ್ಸ್ ‘ ಲಭ್ಯವಾಗಲಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚಿತ್ರಕ್ಕೆ ವಾಯ್ಸ್ ಮಿಕ್ಸಿಂಗ್ ತಂತ್ರಜ್ಞ ಅಪ್ಪು ಮಾತನಾಡುತ್ತಾ ಇದರ ಹಿಂದಿನ ಹಿನ್ನೆಲೆಯನ್ನು ತೆರೆದಿಟ್ಟಿದ್ದಾರೆ. “ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಲ್ಲಿಯೇ ಇದು ಮೊದಲ ಪ್ರಯತ್ನವಾಗಿದೆ. ನಾವು ಹಲವು ವರ್ಷಗಳಿಂದ ಈ ಬಗ್ಗೆ ರೀಸರ್ಚ್ ಮಾಡುತಿದ್ದೆವು.
ಫ್ಯಾನ್ ಇಂಡಿಯಾ ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಅದೇ ಕಲಾವಿದರ ವಾಯ್ಸ್ ಇದ್ರೆ ಹೇಗಿರುತ್ತೆ ಅಂತ ಟ್ರೈ ಮಾಡುತ್ತಿದ್ದೆವು. ಸಲಗ ನಿರ್ಮಾಪಕ ಶ್ರೀಕಾಂತ್ ಸರ್ ಹೇಳಿದ್ರು, ಅಪ್ಪು ಅಭಿನಯದ ಜೇಮ್ಸ್ ಚಿತ್ರದ ಬಗ್ಗೆ ಪರಿಸ್ಥಿತಿಯ ಬಗ್ಗೆ.. ಆಗ ನಾವು ನಮ್ಮ ಟೀಮ್ ಈ ಪ್ರಯತ್ನಕ್ಕೆ ಕೈ ಹಾಕಿದೆವು.”
“ಸಿನಿಮಾ ರಿಲೀಸ್ ಗೂ ಮೊದಲೇ ಕೇಳಿದ್ದರು. ಆದರೆ ಆ ಟೈಮ್ ನಲ್ಲಿ ನಮಗೆ ಅದನ್ನು ರೆಡಿ ಮಾಡೋಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ನಾವು ಆಗಷ್ಟೇ ಅದರ ಪ್ರಯತ್ನ ನಡೆಸುತ್ತಿದ್ದೆವು. ಹಾಗಾಗಿ ನಮಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ನಮಗೆ ಬೇಸರವಿದೆ. ನಟ ಪ್ರಭಾಸ್ ಅವರ ಜೊತೆ ನಾವು ”ಆದಿಪುರುಷ್” ಚಿತ್ರಕ್ಕೆ ಈ ಕೆಲಸ ಮಾಡುತಿದ್ದೆವು. ನಟ ಪ್ರಭಾಸ್ ಬಳಿ ಅನುಮತಿ ಪಡೆದು,
”ಆದಿಪುರುಷ್”ಕೆಲಸ ನಿಲ್ಲಿಸಿ, ಅಪ್ಪು ಅವರ ಜೇಮ್ಸ್ ಚಿತ್ರ ಕೈಗೆತ್ತಿಕೊಂಡೆವು. ಈಗ ನಮಗೆ ತುಂಬ ಖುಷಿ ಆಗುತ್ತಿದೆ. ಇಂತಹ ಒಂದು ಅವಕಾಶ ಕೊಟ್ಟಿದ್ದಕ್ಕೆ ಜೇಮ್ಸ್ ಚಿತ್ರತಂಡಕ್ಕೆ ಧನ್ಯವಾದಗಳು” ಎಂದು ವಾಯ್ಸ್ ಮಿಕ್ಸಿಂಗ್ ತಂತ್ರಜ್ಞರು ಹೇಳಿದ್ದಾರೆ.
ಅಂದಹಾಗೆ ಧ್ವನಿ ತಂತ್ರಜ್ಞರು ಹಲವು ವರ್ಷಗಳಿಂದ ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದು, ಇದು ಅವರ ಟೀಮ್ ಗೆ ಸಿಕ್ಕ ಮೊದಲ ಜಯವಾಗಿದೆ ಈ ಬಗ್ಗೆಯೂ ಚಿತ್ರತಂಡ ಸಂತಸವನ್ನು ಹಚ್ಚಿಕೊಂಡಿದೆ.
ಅಪ್ಪು ಅಭಿಮಾನಿಗಳಿಗೆ ಮತ್ತೆ ಹಬ್ಬ ಅಣ್ಣಾವ್ರ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಅಭಿಮಾನಿಗಳಿಗೆ ಏಪ್ರಿಲ್ 22 ರಿಂದ ಅಪ್ಪು ಅವರ ವಾಯ್ಸ್ ನಲ್ಲಿ ನೋಡುವ ಅವಕಾಶ ದೊರಕಲಿದೆ. ಇದೊಂದು ಹೊಸ ರೀತಿಯ ಅನುಭವ ಕೊಡಲಿದೆ. ಮತ್ತು ಇಡೀ ಸಿನಿಮಾ ರಂಗದಲ್ಲೇ ಮೊಟ್ಟ ಮೊದಲ ಬಾರಿಗೆ ಈ ಟೆಕ್ನಾಲಜಿ ಉಪಯೋಗ ಮಾಡುತ್ತಿದ್ದಾರೆ. ಸರಿ ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಮರು ಬಿಡುಗಡೆ ಗೊಳ್ಳಲಿದೆ.