ಮಗುವಿನ ಮೂಖ ರೀವಿಲ್ ಮಾಡಿದ ನಟಿ ಕಾಜಲ್ ಅಗರವಾಲ್! ಮಗು ಥೇಟ್ ಅಪ್ಪನಂತೆ ಇದೆ ನೋಡಿ ಮೊದಲ ಬಾರಿಗೆ!!

News Uncategorized

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್ವಾಲ್ (Kajal Aggarwal) ಸದ್ಯ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾರೆ ಮಗನ ಜೊತೆಗೆ ಕಳೆಯುವ ಸಮಯದ ಮಧುರ ಕ್ಷಣಗಳ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಬಹುಭಾಷಾ ನಟಿ (Actress) ಕಾಜಲ್ ಅಗರ್ವಾಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬಹಳ ಮುದ್ದಾಗಿರುವ ಸಾಕಷ್ಟು ತೆಲುಗು (Telugu), ತಮಿಳು, (Tamil) ಹಿಂದಿ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ಇದೀಗ ಒಂದು ಗಂಡು ಮಗುವಿನ ತಾಯಿ ಆಗಿರುವ ಕಾಜಲ್ ಅಗರ್ವಾಲ್ ಮಗುವಿನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕಾಜಲ್ ತನ್ನ ಬಾಲ್ಯದ ಗೆಳೆಯ ಗೌತಮ್ ಕಿಚ್ಲು (Goutam Kichlu) ಅವರನ್ನು ವಿವಾಹವಾಗಿದ್ದಾರೆ. ಇತ್ತೀಚಿಗೆ ತೈವಾನ್ ನಲ್ಲಿ ಇಯರ್ ಎಂಡ್ ಟ್ರಿಪ್ ಮುಗಿಸಿ ಬಂದಿರುವ ಈ ಜೋಡಿ ತಮ್ಮ ರೋಮ್ಯಾಂಟಿಕ್ ಫೋಟೋ (Romantic Photos) ಗಳನ್ನ ಸೋಶಿಯಲ್ ಮೀಡಿಯಾ (Social Media) ದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಮಗುವಿನ ಲಾಲನೆ ಪಾಲನೆಯ ಜೊತೆಗೆ ಸಾಕಷ್ಟು ಬೇಬಿ ಪ್ರಾಡಕ್ಟ್ (Baby Product) ಗಳಿಗೆ ಜಾಹೀರಾತು (Advertisement) ಗಳನ್ನು ಕೂಡ ಮಾಡಿದ್ದಾರೆ ಕಾಜಲ್ ಅಗರ್ವಾಲ್. ಇನ್ನು ಸದಾ instagram ನಲ್ಲಿ ಆಕ್ಟಿವ್ (Active) ಆಗಿರುವ ನಟಿ ಕಾಜಲ್ ಅಗರ್ವಾಲ್ ಸುಮಾರು 24.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

ಇತ್ತೀಚಿಗೆ ಸೆಕೆಂಡ್ ಇನ್ನಿಂಗ್ಸ್ ಕೂಡ ವ್ರತ್ತಿ ಜೀವನದಲ್ಲಿ ಆರಂಭಿಸಿದ್ದಾರೆ, ಕಾಜಲ್ ಇಂಡಿಯನ್ 2 ಎನ್ನುವ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಈಗಾಗಲೇ ಶೂಟಿಂಗ್ ಶೆಡ್ಯೂಲ್ ಕೂಡ ಶುರುವಾಗಿದೆಯಂತೆ. ಅಷ್ಟೇ ಅಲ್ಲದೆ ಚಂದ್ರಮುಖಿ 2 ಚಿತ್ರದಲ್ಲಿಯೂ ಕೂಡ ಕಾಜಲ್ ಅವರನ್ನು ನಟನೆಗೆ ಕರೆಯಲಾಗಿದೆ ಹಾಗಾಗಿ ಈ ಸಿನಿಮಾವನ್ನು ಕೂಡ ಕಾಜಲ್ ಒಪ್ಪಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ ರಜನಿಕಾಂತ್ ಅಭಿನಯದ ಚಂದ್ರಮುಖಿ ಸಿನಿಮಾ 2005ರಲ್ಲಿ ಬಿಡುಗಡೆಯಾಗಿತ್ತು ಇದರ ಮುಂದುವರೆದ ಭಾಗ ಚಂದ್ರಮುಖಿ 2 ಎಂದು ಹೇಳಲಾಗುತ್ತಿದೆ.

ಅಂದಹಾಗೆ ಕಾಜಲ್ ಅಗರ್ವಾಲ್ ಕೂಡ ಒಬ್ಬ ಕೋಟ್ಯಾಧಿಪತಿ ಸೆಲೆಬ್ರಿಟಿ ಎನ್ನಬಹುದು. ಕೆಲವು ಮಾಹಿತಿಯ ಪ್ರಕಾರ ಇವರು ಒಟ್ಟು 83 ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿದ್ದಾರಂತೆ. ಇವರ ವಾರ್ಷಿಕ ಆದಾಯವೇ ಸುಮಾರು ಆರು ಕೋಟಿ ಎಷ್ಟು ಎಂದು ಅಂದಾಜಿಸಲಾಗಿದೆ. ಇವರು ವಾಸಿಸುವ ಐಷಾರಾಮಿ ಮನೆ ಸುಮಾರು ಏಳು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ.

ಮುದ್ದಾದ ನಟಿ ಕಾಜಲ್ ಅಗರ್ವಾಲ್ ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷಗಳಿಂದ ನಟನೆಗೆ ಬ್ರೇಕ್ ಕೊಟ್ಟಿದ್ರು. ಆದರೆ ಮಗು ಆದ ನಂತರ ಪ್ರಮೋಷನಲ್ ವಿಡಿಯೋಗಳನ್ನು ಮಾಡಿದ್ದಾರೆ. ಕಾಜಲ್ ಅವರು ತಮ್ಮ ಮಗನಿಗೆ ನೀಲ್ ಎಂದು ಹೆಸರಿಟ್ಟಿದ್ದಾರೆ. ಇನ್ನು ಕಾಜಲ್ ಅವರ ಮಗ ಇದೀಗ 9ನೇ ತಿಂಗಳಿಗೆ ಪಾದಾರ್ಪಣೆ ಮಾಡಿದ್ದಾರೆ.

ಹಾಗಾಗಿ ಮಗುವಿನ ಎತ್ತಿ ಕೊಂಡಿರುವ ಒಂದು ಫೋಟೋವನ್ನು instagram ನಲ್ಲಿ ಕಾಜಲ್ ಶೇರ್ ಮಾಡಿದ್ದಾರೆ ಇದರ ಜೊತೆಗೆ, ಈ ಕಳೆದ 9 ತಿಂಗಳು ಹಾಗೂ ಮುಂಬರುವ ವರ್ಷಗಳಿಗೆ ನಾನು ಕೃತಜ್ಞನಾಗಿದ್ದೇನೆ. 3/4 ನೇ ಹುಟ್ಟು ಹಬ್ಬದ ಶುಭಾಶಯಗಳು ನನ್ನ ಪ್ರೀತಿಯ ಹುಡುಗ ಎಂದು ಮಗನಿಗೆ ವಿಶ್ ಮಾಡಿ ಪೋಸ್ಟ್ ಬರೆದುಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಅವರ ಈ ಪೋಸ್ಟ್ ಗೆ ಸಾಕಷ್ಟು ಲೈಕ್ ಹಾಗೂ ಕಮೆಂಟ್ಗಳು ಬಂದಿದೆ. ಇನ್ನು ಮಗು ಆದರೂ ಕೂಡ ಸಕ್ಕತ್ ಫೀಟ್ ಆಗಿರುವ ಕಾಜಲ್ ಅಗರ್ವಾಲ್ ಆಗಾಗ ನವೀನ ರೀತಿಯಲ್ಲಿ ಫೋಟೋಶೂಟ್ ಕೂಡ ಮಾಡಿಸುತ್ತಾರೆ.


Leave a Reply

Your email address will not be published. Required fields are marked *