ಅಬ್ಬಬ್ಬಾ ರಾಕಿಬಾಯ್ ತುಫನ್ ಜೋರು ಸರಳವಾಗಿ ಹೇಳಬೇಕೆಂದರೆ, ಕೆಜಿಎಫ್ 1 ಗಿಂತ ಕೆಜಿಎಫ್ ಚಾಪ್ಟರ್ 2 10 ಪಟ್ಟು ಹೆಚ್ಚು ರಾಕೀಬಾಯಿ ಅಭಿಮಾನಿಗಳ್ಳಲ್ಲಿ ಖುಷಿ ಮುಗಿಲು ಮುಟ್ಟಿದೆ.
ನಾರಾಚಿಎಂಬಾ ಚಿನ್ನವೇ ತುಂಬಿರುವ ನರಕ ವನ್ನು ಸೃಷ್ಟಿಸಿ, ರಾಕಿಭಾಯ್ ನನ್ನು ಅದರ ಒಡೆಯನನ್ನಾಗಿ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್, ರಾಕಿಭಾಯ್ ನ ಊಹೆಗೂ ಮೀರಿ, ನಾರಾಚಿಯ ಚಿನ್ನದ ರಾಶಿಯನ್ನು ಮೀರಿದ್ದು ಎಂದು ‘ಕೆಜಿಎಫ್ ಚಾಪ್ಟರ್ 2’ ನಲ್ಲಿ ತೋರಿಸಿದ್ದಾರೆ.
ಕೆಜಿಎಫ್ 1 ನಲ್ಲಿ ರಾಕಿಭಾಯ್ ಗೆ ಗರುಡ ಎನ್ನುವ ದೈತ್ಯ ನನ್ನು ಹೊಡೆಯಬೇಕು ಎನ್ನುವ ಸ್ಪಷ್ಟ ಗುರಿ ಇದೆ ‘ ಅಲ್ಲಿ ರಾಕಿಭಾಯ್ ಗರುಡ ನೊಬ್ಬನೇ ಎದುರಾಳಿ. ಆದರೆ ಒಮ್ಮೆ ಗರುಡನ್ನು ಹೊಡೆದು ಕೆಜಿಎಫ್ ನ ಚಿನ್ನದ ನಾಡಿನ ಒಡೆಯನಾದ ಮೇಲೆ ದುಷ್ಮನ್ ಗಳ
ಸಂಖ್ಯೆ ಹೆಚ್ಚಾಗುತ್ತದೆ. ಒಬ್ಬ ಕ್ರೂರಿ, ಇನ್ನೊಬ್ಬ ಚಾಣಕ್ಷ ಅಸೂಯೆ ತುಂಬಿದ ಹಳೆ ಗೆಳೆಯನೊಬ್ಬ, ಜೊತೆಗೆ ಇದ್ದು ರಾಕಿಭಾಯ್ ಪತನ ಬಯಸುವನೊಬ್ಬ, ಒಬ್ಬಾಕೆ ಛಲವಾದಿ ಹೀಗೆ ಒಂದೊಂದು ರೀತಿಯ ಶತ್ರುಗಳು ರಾಕಿಭಾಯ್ ಮೇಲೆ ಮುಗಿಬಿಳುತ್ತಾರೆ. ಆದ್ರೆ ರಾಕಿಭಾಯ್ ಜಗ ಗಟ್ಟಿಗ ಜೊತೆಗೆ ಚನ್ನಾಕ್ಷಾ ಕೂಡ ತನ್ನ ಮೇಲೆ ಬರುವ ವೈರಿಗಳ ವಿರುದ್ಧ ಗೆದ್ದು ತನ್ನ ಸ್ವ ಇಚ್ಛೆಯಿಂದ ಸೋಲೋಪ್ಪಿಕೊಳ್ಳುತ್ತಾನೆ!
ಮೊದಲ ಅಧ್ಯಯಕ್ಕೂ ಎರಡೇನೇ ಅಧ್ಯಯಕ್ಕೂ ರಾಕಿಭಾಯ್ ಸ್ವಲ್ಪ ಬದಲಾವಣೆ ಆಗಿದ್ದಾನೆ. ಮೊದಲ ಚಾಪ್ಟರ್ ನಲ್ಲಿ ದುನಿಯಾ ಕೇಳಿದ್ದ ರಾಕಿಭಾಯ್ ಗೆ ಈಗ ನಾರಾಚಿಎಂಬ ಹಣದ ಸೂಪ್ಪತ್ತಿಗೆಯೇ ಸಿಕ್ಕಿದೆ. ಅದು ಯಾವ ಮಟ್ಟಿಗೆ ಅಂದರೆ ಅವನೇ ಹೇಳಿತ್ತಾನೆ, ನಾನು ದೇಶದ ಯಲ್ಲ ಸಾಲವನ್ನು ತೀರಿಸಬಲ್ಲೆ ಎಂದು ಆದರೂ ಅವನ ಆಸೆ ತಿರಲಿಲ್ಲ ಗರುಡನ ಗುಲಾಮರನ್ನು ಛಿದ್ರ ಮಾಡಿದ ರಾಕಿಭಾಯ್ ಈಗ ಅವರನ್ನು ತನ್ನ ಗುಲಾಮರನ್ನಗಿಸಿಕೊಂಡಿದ್ದಾನೆ ಚಿತ್ರದಲ್ಲಿ ಬರುವ ಪತ್ರವೊಂದು ರಾಕಿ ನೇ ಪ್ರೆಶ್ನೆ ಮಾಡಿಯೇ ಬಿಡುತ್ತೆ. ನಿನಗೂ ಗರುಡನಿಗೂ ಏನಿದೆ ವ್ಯತ್ಯಾಸ? ಎಂದು. ಆಗ ದುಡ್ಡಿನ, ಪವರ್ ನ ಮೋಹಕ್ಕೆ ರಾಕಿಭಾಯ್ ನೀಡುವ ಕಾರಣ ಮನಸ್ಸು ಕರಾಗುತ್ತದೆ.
ಕೆಜಿಎಫ್ ಚಾಪ್ಟರ್ 2 ಚಿತ್ರ ಇಡಿ ಕನ್ನಡ ಚಿತ್ರರಂಗವೆ ಹೆಮ್ಮೆಪಾಡುವಷ್ಟು ಅದ್ಬುತವಾಗಿ ಮೂಡಿಬಂದಿದೆ. ಈ ಚಿತ್ರ ಎಡಿಟಿಂಗ್ ಇತರೆ ಚಿತ್ರದ ನಿರ್ದೇಶಕರು, ಸಂಕಲನಕರಾರು ಇದನ್ನು ಒಂದು ಪಾಠವಾಗಿ ತೆಗೆದುಕೊಳ್ಳಬೇಕಾಗಿದೆ. ಆಕ್ಷನ್ ದೃಶ್ಯಗಳಲ್ಲಿ ಕ್ಯಾಮರಾಮ್ಯಾನ್ ಹಾಗೂ ಆಕ್ಷನ್ ದೃಶ್ಯ ನಿರ್ದೇಶಕನ ಶ್ರಮ ಎದ್ದು ಕಾಣುತಿದ್ದೆ. ಹಿನ್ನಲೆ ಸಂಗೀತ ತೆರೆ ಮೇಲೆ ರಾಕಿಭಾಯ್ ನ ಪವರ್ ಅನ್ನು ಇನ್ನಷ್ಟು ಹೆಚ್ಚಿಸಿದೆ. ಅಬ್ಬರ ಎನಿಸಿದರು ರಾಕಿಭಾಯ್ ಅವರ ರಗಡ್ ಪತ್ರಕ್ಕೆ ಸೂಕ್ತವಾದ ಮ್ಯೂಸಿಕ್ ಇದು ಎನಿಸುತ್ತದೆ.
ಯಶ್ಗೆ ರಾಕಿಭಾಯ್ ಪಾತ್ರ ಟೆಲರ್ ಮೆಡ್ ಆಕ್ಷನ್, ಸೆಂಟಿಮೆಂಟ್, ಕಾಮಿಡಿ ಗಂಭೀರ ಎಲ್ಲ ಬಹವೆನೆಯಲ್ಲೂ ಅವರು ರಾಕಿಂಗ್ ಅನಿಸಿದ್ದಾರೆ. ಸಂಜು ದಾದಾ ಸಹ ಬಹಳ ಕ್ರೂರವಾಗಿ ಕಾಣಿಸಿಕೊಂಡಿದ್ದಾರೆ. ಮೊದಲಾ ಭಾಗದಲ್ಲಿ ರಾಕಿ ಭಾಯ್ ಯಶ್ ಗೆ ಸಖತ್ ಚಮಕ್ಕ್ ಕೊಡುವ ಸಂಜು ಬಾಬಾ ಚಿತ್ರ ಪ್ರಾರಂಭವಾಗುತ್ತಿದ್ದಂತೆ ಕಣ್ಮರೆ ಆಗುತ್ತಾರೆ ಮತ್ತೆ ಅವರು ಕಾಣಿಸಿಕೊಳ್ಳುವುದು ಅಂತ್ಯದಲ್ಲಿಯೇ, ಅಲ್ಲದೆ ದೂರದಿಂದ ಬಂದೂಕಿನಲ್ಲಿ ಶೂಟ್ ಮಾಡಲು ಅಧೀರನಾಗಿ ಸಂಜಯ್ ದತ್ತೇ ಬೇಕೆಂದೇನೂ ಇರಲಿಲ್ಲ, ಆ ಕೆಲಸವನ್ನು ಯಾವುದೇ ಸಣ್ಣ ವಿಲನ್ನಿಂದಲೂ ಮಾಡಿಸಬಹುದಿತ್ತು. ಅಧೀರನ ಪಾತ್ರಪೋಷಣೆ ಇನ್ನಷ್ಟು ಚೆನ್ನಾಗಿರಬಹುದಿತ್ತು ಎನಿಸುವುದು ಸುಳ್ಳಲ್ಲ. ಸಂಜಯ್ ದತ್ ಅವರ ಅಧೀರನ ಪಾತ್ರಕ್ಕೆ ಹೋಲಿಸಿದರೆ ಅಚ್ಯುತ್ ಕುಮಾರ್ ನಿರ್ವಹಿಸಿರುವ ವಿಲನ್ ಪಾತ್ರವೇ ಹೆಚ್ಚು ಬಲಿಷ್ಠ ವಾಗಿದೆ ಅಧೀರನ ಬದಲು ಆ ಪಾತ್ರಕ್ಕೆ ನಿರ್ದೇಶಕರು ಇನ್ನಷ್ಟು ಗಮನಕೊಡಬಹುದಿತ್ತು ಅನುಸುತ್ತದೆ.
ರವೀನಾ ಟಂಡನ್ ಪಾತ್ರ ಸಹ ಗಟ್ಟಿಯಾಗಿದೆ ಫಸ್ಟ್ ಆಫ್ ಅಂತರ ಅವರ ಪಾತ್ರ ಎಂಟ್ರಿ ಆಗುತ್ತದೆ ಅವರ ಅಭಿನಯದ ಗಟ್ಟಿತನದಿಂದ ಕೂಡಿದ ಹಾಗೂ ಕಥೆಯ ಮೇಲೆ ಪ್ರಭಾವ ಬೀರುತ್ತದೆ ರವೀನಾ ಟಂಡನ್ ಲತಿನ ಅದ್ಭುತವಾಗಿದೆ ಎಂದು ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಾರೆ. ನಟ ಪ್ರಕಾಶ್ ರೈ ಅನಂತ್ನಾಗ್ ಪಾತ್ರದ ಬದಲಾಗಿ ಬಂದರು, ತಮ್ಮದೇ ಆದ ಗುರುತನ್ನು ಪಾತ್ರಕ್ಕೆ ನೀಡಿದ್ದಾರೆ. ನಟ ಅಚ್ಯುತ್ ಕುಮಾರ್ ನಟನೆ ಕೂಡ ಅದ್ಭುತವಾಗಿ ಮೂಡಿ ಬಂದಿದೆ. ಮೊದಲ ಭಾಗದಲ್ಲಿ ಜಂಬದ ಕೋಳಿ ಪಾತ್ರದಲ್ಲಿ ನಡೆಸಿದ ನಾಯಕಿ ಶ್ರೀನಿಧಿ ಶೆಟ್ಟಿ ಪಾತ್ರ ಎರಡನೆಯ ಭಾಗದಲ್ಲಿ ಪತಿಯ ಕ್ಷೇಮ ಬಯಸುವ ಗೃಹಿಣಿಯಾಗಿ, ರಾಕಿ ಬಾಯ್ ಪ್ರೇಯಸಿಯಾಗಿ ಬದಲಾಗಿದ್ದಾರೆ ಶ್ರೀನಿಧಿ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಚಪ್ಟರ್ ಒಂದರಲ್ಲಿ ರಾಕಿ ಬಾಯ್ ತಾಯಿಯ ಪಾತ್ರದಲ್ಲಿ ಗಮನಸೆಳೆದಿದ್ದ ಅರ್ಚನಾ ಚಪ್ಟರ್ 2 ನಲ್ಲಿ ತಮ್ಮ ಅದ್ಭುತ ನಟನೆಯಿಂದ ಮತ್ತೊಮ್ಮೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರಶಾಂತ್ ನೀಲ್ ಅವರ ನಿರ್ದೇಶನದ ಬಗ್ಗೆ ಹೇಳಬೇಕೆಂದರೆ ಫ್ಲಾಶ್ ಬ್ಯಾಗ್ ಗಳನ್ನು ಪ್ರಶಾಂತನ ಅಷ್ಟು ಚೆನ್ನಾಗಿ ಬಳಸಿಕೊಳ್ಳುವಷ್ಟು ಮತ್ತೊಬ್ಬ ನಿರ್ದೇಶಕ ಕನ್ನಡದಲ್ಲಿ ಇಲ್ಲ. ಒಂದೇ ಬಾರಿಗೆ ಮೂರು ಕಾಲಘಟ್ಟದ ದೃಶ್ಯಗಳನ್ನು ಪ್ರೇಕ್ಷಕನಿಗೆ ಗೊಂದಲ ಉಂಟು ಮಾಡುವಂತೆ ಒಂದಕ್ಕೊಂದು ಬಳಸಿಕೊಳ್ಳುವಂತೆ ತೋರಿಸುವ ಕಲೆ ಅವರಿಗೆ ಮಾತ್ರ ಇರೋದು. ಹಸುಗೂಸಿನ ನದಿಗೆ ಮಾತನಾಡುತ್ತಿರುವ ತಾಯಿ, ತಾಯಿಯ ಸಮಾಧಿ ಮುಂದೆ ಅಳುತ್ತಿರುವ ಬಾಲಕ ರಾಕಿ ಬಾಯ್, ಐಷಾರಾಮಿ ಬಂಗಲೆಯ ಮೇಲೆ ನಿಂತು ಅನಂತದತ್ತ ನೋಡುತ್ತಿರುವ ರಾಕಿ ಬಾಯಿ ಊರು ದರ್ಶನ ಒಟ್ಟಿಗೆ ತೋರಿಸಿ ಆ ಮೂಲಕ ಹೊಸ ಅರ್ಥವನ್ನು ಹೊಳೆಯುವಂತೆ ಮಾಡುತ್ತಾರೆ ಪ್ರಶಾಂತ್ ನೀಲ್. ಕೆಜಿಎಫ್ ಚಾಪ್ಟರ್ 1 ಅದು ಹಿಟ್ ಆದದ್ದಲ್ಲ ತಮ್ಮ ಪ್ರತಿಭೆಯಿಂದ ಅದೊಂದು ಎಂಬುದನ್ನು ಪ್ರಶಾಂತ್ ನೀಲ್ ಕೆಜಿಎಫ್ ಎರಡನೇ ಭಾಗದಲ್ಲಿ ಸಾಬೀತುಪಡಿಸಿದ್ದಾರೆ.
ಒಟ್ಟಾರೆ ಸಿನಿಮ ಹೇಗಿದೆ ಎಂದರೆ ಇದರ ಜೊತೆಗೆ ತುಸು ಲಾಜಿಕಲ್ ಪ್ರಶ್ನೆಗಳು ಇವೆ. ತನ್ನ ಅಪ್ಪನನ್ನು 25 ವರ್ಷಗಳ ನಂತರ ನೋಡುತ್ತಿರುವ ಮಗನಿಗೆ ಅಪ್ಪ ಬರೆದಿರುವ ಪುಸ್ತಕದ ಕಥೆ ಬಾಯಿಪಾಠ ಆಗಿದ್ದು ಹೇಗೆ? ನೆಲದಲ್ಲಿ ಹುದುಗಿಸಿಟ್ಟ ರಾಕಿ ಬಾಯ್ ನವಗ್ರಹ ಎತ್ತಿದವರು ಕಥೆ ಏನಾಯ್ತು. ಆ ವಿಗ್ರಹ ಏನಾಯ್ತು ಜನ ಅವರನ್ನು ಏನು ಮಾಡಿದರೂ ರಾಕಿಬಾಯ್ ಗ್ಯಾಂಗನ್ನು ಶೆಟ್ಟಿ, ಇನಾಯತ್ ಕಲೀಲ್ ಇತರರು ಸೇರಿ ಕೊಂದ ಬಳಿಕ ಮತ್ತೆ ರಾಕಿ ಬಾಯ್ ಪರವಾಗಿ ಗನ್ ಹಿಡಿದ ಶೆಟ್ಟಿ ಗ್ಯಾಂಗ್, ಇನಾಯತ್ ಗ್ಯಾನ್ ಸದಸ್ಯರನ್ನು ಕೊಂದ ಹುಡುಗರು ಯಾರು? ಅವರನ್ನು ರಾಕಿಬಾಯ್ ಎಲ್ಲಿಂದ ಕರೆತಂದ? ಇಂತಹ ಇನ್ನೂ ಕೆಲವು ಪ್ರಶ್ನೆಗಳನ್ನು ಕೇಳಬಹುದು. ಆದರೆ ಕಮರ್ಷಿಯಲ್ ಸಿನಿಮಾದಲ್ಲಿ ಇಂತಹ ಸಣ್ಣ ಪುಟ್ಟ ಹೊರ ಕೊಲೆಗಳಿಗೆ ಕ್ಷಮೆ ಇದ್ದೇ ಇದೆ ಒಟ್ಟಾರೆ ಕೆಜಿಎಫ್ ಚಾಪ್ಟರ್ 2 ಒಂದು ಒಳ್ಳೆ ಚಿತ್ರವಾಗಿ ಮೂಡಿಬಂದಿದೆ ರಾಕಿಂಗ್ ಸ್ಟಾರ್ ಯಶ್ ಅವರಿಗೆ ದೊಡ್ಡ ಮೈಲಿಗಲ್ಲು ಅಂತ ಪಕ್ಕ ಇಡೀ ಚಿತ್ರರಂಗದಲ್ಲಿ ಅತಿಹೆಚ್ಚು ಗಳಿಕೆ ಮಾಡುವುದು ಪಕ್ಕ ಇಂದು ಬಿಡುಗಡೆಯಾದ ಚಿತ್ರ ದೇಶ ದೇಶದಲ್ಲಿ ತೂಫಾನ್ ಎಬ್ಬಿಸಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಚಿತ್ರ ನೋಡಿದರೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬರೆದು ತಿಳಿಸಿ