ಒಂದೇ ಒಂದು ಸಿನಿಮಾದ ಮೂಲಕ ಸಿನಿ ಲೋಕದಲ್ಲಿ ಫೇಮಸ್ ಆದವರು ಹಲವರು ಇದ್ದಾರೆ. ಅಂತಹವರ ಸಾಲಿಗೆ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಸೇರಿಕೊಳ್ಳುತ್ತಾರೆ. ಕೆಜಿಎಫ್ ಚಾಪ್ಟರ್ 1 ಮತ್ತು 2 ಎರಡರಲ್ಲೂ ಅಭಿನಯಿಸಿದಂತ ಶ್ರೀನಿಧಿ ಶೆಟ್ಟಿ ಅವರು ಅಭಿನಯಿಸಿದ್ದು ಸಿಕ್ಕಾಪಟ್ಟೆ ಫೇಮ್ ಸೃಷ್ಟಿಸಿಕೊಂಡಿದ್ದಾರೆ. ಈ ಎರಡು ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿಯವರು ಪಡೆದ ಸಂಭಾವನೆ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.
ಈ ಸಿನಿಮಾದ ಬಳಿಕ ಶ್ರೀನಿಧಿ ಶೆಟ್ಟಿಯವರಿಗೆ ಬಾರಿ ಬೇಡಿಕೆ ಸೃಷ್ಟಿಯಾಗಿದೆ.ನಟಿ ಶ್ರೀನಿಧಿಯವರ ಬದುಕಿನ ಹಿನ್ನಲೆ ಗಮನಿಸುವುದಾದರೆ, 1992 ಅಕ್ಟೋಬರ್ 21ರಂದು ಮಂಗಳೂರಿನಲ್ಲಿ ಜನಿಸಿದರು. ಬೆಂಗಳೂರಿನ ಜೈನ ವಿದ್ಯಾಲಯದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ನಲ್ಲಿ ಪದವಿ ಪಡೆದ ಇವರು 2016 ರಲ್ಲಿ ಜರುಗಿದ ಮಿಸ್ ದಿವಾ ಸ್ಪರ್ಧೆಯ ವಿಜೇತಯಾಗಿದ್ದಾರೆ.
ತದನಂತರದಲ್ಲಿ ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ `ಆಕ್ಸೆಂಚರ್’ ನ ಉದ್ಯೋಗಿಯಾಗಿದ್ದರು. ಈ ವೇಳೆಯಲ್ಲಿ ಹಲವಾರು ಡಿಸೈನರ್ಗಳ ಜೊತೆಗೆ ಮಾಡೆಲ್ ಆಗಿ ಕೆಲಸ ಮಾಡಿ ಅನುಭವ ಇವರಿಗಿದೆ. ಅಷ್ಟೇ ಅಲ್ಲದೇ, ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆಯ ವಿಜೇತೆಯಾದರು.
ಹೌದು, ದುಬೈ, ಪ್ರಾನ್ಸ್, ಜಪಾನ್, ಸಿಂಗಾಪುರ್, ಥೈಲಾಂಡ್, ಪೊಲ್ಯಾಂಡ್ ದೇಶಗಳ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡ ಇವರು ಮಾಡೆಲಿಂಗ್ ಮೂಲಕ ಫೇಮಸ್ ಆದವರು. ಹೀಗಿರುವಾಗ ಶ್ರೀನಿಧಿ ಶೆಟ್ಟಿಯವರು ನಿರ್ದೇಶಕ ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದರು. ತದನಂತರದಲ್ಲಿ ಶ್ರೀನಿಧಿ ಶೆಟ್ಟಿಯವರ ಬದುಕಿನ ದಾರಿಯೇ ಬದಲಾಯಿತು. ಹೀಗಿರುವಾಗ ಬಿಗ್ ಬಜೆಟ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು.
ಸುಮಾರು ಎಂಟು ವರ್ಷಗಳ ಕಾಲ ಒಂದೇ ಸಿನಿಮಾದಲ್ಲಿ ನಟಿಸಿದ್ದ ನಟಿ ಶ್ರೀನಿಧಿ ಶೆಟ್ಟಿಯವರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ. ಕೆಜಿಎಫ್ 2 ಸಿನಿಮಾ ಯಶಸ್ಸು ಕಂಡ ಮೇಲೆ ಶ್ರೀನಿಧಿಯವರ ಬೇಡಿಕೆಯೂ ಹೆಚ್ಚಾಗಿದ್ದು, ಈ ಸಿನಿಮಾದ ಬಳಿಕ ಅವಕಾಶಗಳು ಬರುತ್ತಿದೆ. ಕೆಜಿಎಫ್ ಸಿನಿಮಾದ ಬಳಿಕ ತಮಿಳಿನ ಚಿಯಾನ್ ವಿಕ್ರಂರವರೊಡನೆ ‘ಕೋಬ್ರಾ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಆದರೆ ಇತ್ತೀಚೆಗಷ್ಟೇ ನಟಿ ಶ್ರೀ ನಿಧಿ ಶೆಟ್ಟಿ ಹಾಟ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರೂ ಶಾಕ್ ಆಗಿದ್ದಾರೆ. ಹೌದು, ಸಮುದ್ರ ತೀರದಲ್ಲಿ ಕಾಣಿಸಿಕೊಂಡಿದ್ದ ನಟಿ ಶ್ರೀ ನಿಧಿ ಶೆಟ್ಟಿ ಜಾಕೆಟ್ ತೆಗೆಯುತ್ತ ಸಮುದ್ರದ ಕಡೆಗೆ ಹಾಟ್ ಆಗಿ ನಡೆದುಕೊಂಡು ಹೋಗಿದ್ದಾರೆ. ಕೊನೆಗೆ ಜಾಕೆಟ್ ತೆಗೆದು ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದು, ನಟಿಯ ಹಾಟ್ ವಿಡಿಯೋವೊಂದು ವೈರಲ್ ಆಗಿದ್ದು.
ನೆಟ್ಟಿಗರಿಗೆ ನಟಿಯ ಈ ಅವತಾರವು ಶಾಕ್ ಆಗುವಂತೆ ಮಾಡಿದೆ. ಒಟ್ಟಿನಲ್ಲಿ ಶ್ರೀನಿಧಿ ಶೆಟ್ಟಿಯವರು ಹಾಟ್ ಕಾಣಿಸಿಕೊಂಡದ್ದು ತುಂಬಾ ಕಡಿಮೆಯೇ. ಆದರೆ ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಸದ್ಯಕ್ಕೆ ಕೆಜಿಎಫ್ ಬೆಡಗಿ ಸಾಲು ಸಾಲು ಸಿನಿಮಾ ಅವಕಾಶಗಳು ಬರುತ್ತಿದ್ದು, ಸಿನಿ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ.