ಸ್ತ್ರೀ ಪಾತ್ರದ ಮಾಡಿದ್ದಾಗ ಅನುಭವಿಸಿದ ಕೆಟ್ಟ ಅನುಭವದ ಬಗ್ಗೆ ರಿವೀಲ್ ಮಾಡಿದ ಮಜಾ ಭಾರತದ ರಾಘವೇಂದ್ರ! ಸತ್ಯ ಬಿಚ್ಚಿಟ್ಟ ರಘು ಹೇಳಿದ್ದೇನು ನೋಡಿ!!

Entertainment

ಕಿರುತೆರೆ ಹಾಗೂ ಸಿನಿಮಾಲೋಕವು ಅನೇಕರ ಬದುಕಿಗೆ ವರವಾಗಿದೆ. ಹೌದು, ಈ ಲೋಕವು ಲೆಕ್ಕವಿಲ್ಲದಷ್ಟು ಕಲಾವಿದರಿಗೆ ಬದುಕು ಹಾಗೂ ಅನ್ನ ನೀಡಿದೆ. ಈ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ಸು ಕಂಡವರು ಇದ್ದಾರೆ, ಅಷ್ಟೇ ಅಲ್ಲದೆ ಸೋಲುಂಡವರು ಇದ್ದಾರೆ. ಆದರೆ ಕಿರುತೆರೆಲೋಕದಲ್ಲಿ ರಿಯಾಲಿಟಿ ಶೋ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದವರು ರಾಘವೇಂದ್ರ.

ಹೌದು, ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಭಾರತ ಕಾಮಿಡಿ ಕಾರ್ಯಕ್ರಮದಲ್ಲಿ ರಾಗಿಣಿ ಎಂದೇ ಖ್ಯಾತಿ ಪಡೆದಿರುವ ರಾಘವೇಂದ್ರ ಅವರು ಎಲ್ಲರಿಗೂ ಪರಿಚಯ. ರಾಘವೇಂದ್ರ ಅವರು ಕಾಮಿಡಿ ಕಾರ್ಯಕ್ರಮ ಮಜಾಭಾರತದಲ್ಲಿ ಸೆಲೆಕ್ಟ್ ಆದ ಬಳಿಕ ಮೊದಲ ವಾರ ಹುಡುಗಿ ಪಾತ್ರ ಕೊಟ್ಟಿದ್ದು ಹೀಗೆ ಮೂರು ವಾರವು ಸಹ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ತದನಂತರದಲ್ಲಿ ಹುಡುಗಿ ಪಾತ್ರದಲ್ಲಿ ರಾಘವೇಂದ್ರ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡು ಅವರ ಹೆಸರು ರಾಗಿಣಿ ಆಗಿ ಬಿಟ್ಟಿತು. ಅಷ್ಟೇ ಅಲ್ಲದೇ ರಾಗಿಣಿ ಪಾತ್ರವು ಸಿಕ್ಕಾಪಟ್ಟೆ ಫೇಮಸ್ ಆಯಿತು ಕೂಡ. ಇನ್ನು, 17 ವರ್ಷಕ್ಕೆ ಮಜಾ ಭಾರತಕ್ಕೆ ಎಂಟ್ರಿ ಕೊಟ್ಟ ರಾಘವೇಂದ್ರ ಅವರಿಗೆ ಈಗ 21 ವರ್ಷ ವಯಸ್ಸು.

ಮಜಾ ಭಾರತದ ಜೊತೆಸಿನಿಮಾಗಳಲ್ಲಿ ಹಾಸ್ಯ ಕಲಾವಿದನಾಗಿ ನಟಿಸಿದ್ದಾರೆ. ಏನ್​ ಚಂದನೋ ತಕ್ಕೋ ಹಾಡಿ​ನಲ್ಲಿ ಹಾಗೂ ಮಾಯಾ ಬಜಾರ್​ ಸಿನಿಮಾದಲ್ಲಿ ದ್ರೌಪದಿ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಅದರ ಜೊತೆಗೆ ಜರ್ಸಿ ನಂ 10 ಸಿನಿಮಾದಲ್ಲಿ ಮುಖ್ಯ ಹಾಸ್ಯ ನಟನಾಗಿ ಅಭಿನಯಿಸಿದ್ದಾರೆ.

ಈ ಹಿಂದೆ ಹೆಣ್ಣಿನ ಪಾತ್ರದಿಂದ ತಾನು ಅನುಭವಿಸಿದ ನೋವನ್ನು ಹೇಳಿ ಕೊಂಡಿದ್ದರು ರಾಘವೇಂದ್ರ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ರಾಘವೇಂದ್ರ, ‘ಮಜಾ ಭಾರತ’ ರಿಯಾಲಿಟಿ ಶೋನಲ್ಲಿ ನನಗೆ ಮೊದಲ ಬಾರಿಗೆ ಹುಡುಗಿ ಪಾತ್ರ ನೀಡಿದರು. ಎರಡನೇ ವಾರ, ಮೂರನೇ ವಾರವೂ ನನಗೆ ಹುಡುಗಿ ಪಾತ್ರ ಸಿಗುತ್ತಿತ್ತು. ಪದೇ ಪದೇ ಹೆಣ್ಣಿನ ಪಾತ್ರವನ್ನು ಕೊಡುತ್ತಿರುವುದನ್ನು ನೋಡಿ ಕೊನೆ ತನಕವೂ ಹೆಣ್ಣಿನ ಪಾತ್ರ ಬಿಟ್ಟು ಬೇರೆ ಪಾತ್ರಗಳನ್ನು ಕೊಡುವುದೇ ಇಲ್ಲವಾ ಎಂದು ಯೋಚನೆಯಾಗಿತ್ತು.

ಯಾವಾಗ ನೋಡಿದರೂ ಹೆಣ್ಣಿನ ಪಾತ್ರವನ್ನೇ ಕೊಡುತ್ತಿದ್ದೀರಿ ಯಾಕೆ ಎಂದು ರಿಯಾಲಿಟಿ ಶೋ ತಂಡದವರನ್ನು ಕೇಳಿದಾಗ ಎಲ್ಲರಿಗೂ ನಾನು ಹುಡುಗಿ ಪಾತ್ರ ಹಾಕುತ್ತಿರುವುದು ಇಷ್ಟವಾಗಿದೆ, ಅದಕ್ಕೆ ಹುಡುಗಿ ಪಾತ್ರ ಕೊಡಲಾಗುತ್ತಿದೆ ಎಂದಿದ್ದರು’ ಎನ್ನುವುದು ಹೇಳಿಕೊಂಡಿದ್ದರು. ಅಷ್ಟೇ ಅಲ್ಲದೇ, “ರಾಘವೇಂದ್ರನಾಗಿ ನಾನು ಊರಿಗೆ ಹೋದರೆ ಯಾರೂ ಕೂಡ ಅಲ್ಲಿ ರಾಘವೇಂದ್ರ ಅಂತ ಈಗ ನನ್ನ ನಂಬಲು ರೆಡಿಯಿಲ್ಲ.

Maja bharata raghu
Maja bharata raghu

ಅನುಬಂಧ ಅವಾರ್ಡ್ಸ್‌ ಶೋನಲ್ಲಿ ಕೂಡ ಕಲಾವಿದರಿಗೆ ಊಟ ಹಾಕುವ ವೇಳೆ ನನ್ನನ್ನು ಕಲಾವಿದ ಅಲ್ಲ ಎಂದು ಊಟ ಹಾಕಲು ರೆಡಿ ಇರಲಿಲ್ಲ. ಆಮೇಲೆ ನಿರ್ಮಾಪಕರನ್ನು ಕರೆಸಿ ನಾನೇ ರಾಘವೇಂದ್ರ ಅಂತ ಹೇಳಿಸಲಾಯಿತು, ಆಮೇಲೆ ಊಟ ಹಾಕಿದರು” ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದರು.ಅದರ ಜೊತೆಗೆ, ‘ ನಮ್ಮನ್ನು ನಾವೇ ಕಾಮಿಡಿ ಮಾಡಿಕೊಂಡರೆ ಜನರು ನಮ್ಮ ಕಾಲೆಳೆಯುವುದನ್ನು ಬಿಡುತ್ತಾರೆ. ಇದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಹಾಗಾಗಿ ವೇದಿಕೆ ಮೇಲೆ ನನ್ನನ್ನೇ ನಾನೇ ಕಾಮಿಡಿ ಮಾಡಿಕೊಂಡೆ.

ನಾನು ಹುಡುಗಿ ಪಾತ್ರದಲ್ಲಿ ಇದ್ದರೆ ಮಾತ್ರ ವೀಕ್ಷಕರು ನನ್ನ ಗುರುತುಹಿಡಿಯುತ್ತಿದ್ದಾರೆ. ಆರಂಭದಲ್ಲಿ ಹುಡುಗಿ ಪಾತ್ರ ಹಾಕಿದಾಗ ಅನೇಕರಿಗೆ ನಾನು ಹುಡುಗ ಎಂದು ಗೊತ್ತಿರಲಿಲ್ಲ. ಆಮೇಲೆ ಹಳ್ಳಿಗೆ ನಾಟಕ ಮಾಡಲು ಹೋದಾಗ ಕೆಲವರು ಬಂದು ಅಪ್ಪಿಕೊಳ್ಳುತ್ತಿದ್ದರು, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಕೂಡ ಹುಡುಗಿ ಅಂತ ತಿಳಿದುಕೊಂಡು ಕೆಲವರಂತೂ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡಿದ್ದರು.

ಗೌರಮ್ಮರ ತರ ಹುಡುಗಿ ಉಡುಗೆ ತೊಟ್ಟುಕೊಂಡರೂ ಕೂಡ ಕೆಲವರು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅದನ್ನು ನೋಡಿದರೆ ಬೇಸರವಾಗುತ್ತದೆ. ಹೆಣ್ಣಿನ ಪಾತ್ರ ಹಾಕಿ ಹೆಣ್ಣಿನ ಕಷ್ಟ ಏನೆಂದು ಅರ್ಥವಾಯಿತು’ ಎನ್ನುವುದನ್ನು ಮಜಾಭಾರತ ಖ್ಯಾತಿಯ ರಾಘವೇಂದ್ರ ರಿವೀಲ್ ಮಾಡಿದ್ದರು.


Leave a Reply

Your email address will not be published. Required fields are marked *