Sonu srinivas gowda house : ಸೋಶಿಯಲ್ ಮೀಡಿಯಾದಲ್ಲಿ ಬದುಕು ಕಟ್ಟಿಕೊಂಡವರು ಹಲವರು ಇದ್ದಾರೆ. ಈ ಸೋಶಿಯಲ್ ಮೀಡಿಯಾದ ಮೂಲಕ ಫೇಮಸ್ ಆದವರಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಒಬ್ಬರು. ಟಿಕ್ ಟಾಕ್ ನಿಂದಲೇ ಫೇಮಸ್ ಆದ ಸೋನು ಶ್ರೀನಿವಾಸ್ ಗೌಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಟಿಕ್ ಟಾಕ್ ಬ್ಯಾನ್ ಆದ ಬಳಿಕ ಸೋನು ಇನ್ಸ್ಟಾಗ್ರಾಮ್ ಸೇರಿದಂತೆ ವಿವಿಧ ಅಪ್ಲಿಕೇಶನ್ ನಲ್ಲಿ ಕಾಣಿಸಿಕೊಂಡಿದ್ದರು.
ಅಂದಹಾಗೆ, ಬೋಲ್ಡ್ ಫೋಟೋಸ್ ಮತ್ತು ಡ್ಯಾನ್ಸ್ ಮೂಲಕ ಈಕೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುವ ಮೂಲಕ ಲಕ್ಷಾಂತರ ಜನ ಫ್ಯಾನ್ಸ್ ಫಾಲೋವರ್ಸ್ ಹೊಂದಿದ್ದಾಳೆ. ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡರವರು ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಫೇಮಸ್ ಆಗಿದ್ದರೋ ಅದರ ಜೊತೆಗೆ ವಿವಾದಗಳಿಗೂ ಫೇಮಸ್ ಆಗಿದ್ದರು. ಟಿಕ್ ಟಾಕ್ ಸ್ಟಾರ್ ಆಗಿರುವ ಸೋನು ಶ್ರೀನಿವಾಸ್ ಗೌಡ ರವರ ರೀಲ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ.
ಟಿಕ್ ಟಾಕ್ ನಿಂದಾಗಿ ಬಿಗ್ ಬಾಸ್ ಅವಕಾಶಗಳನ್ನು ಪಡೆದುಕೊಂಡ ಸೋನು ಶ್ರೀನಿವಾಸ ಗೌಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹೌದು ನಲವತ್ತೆರಡು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಫಿನಾಲೆಯಿಂದ ಬಂದಿದ್ದರು. ಬಿಗ್ ಬಾಸ್ ಕನ್ನಡ ಒಟಿಟಿಯಲ್ಲಿದ್ದ ಸೋನು ಶ್ರೀನಿವಾಸ ಗೌಡ ಮನೆಯಲ್ಲಿ ಲೀಕ್ ಆದ ವಿಡಿಯೋದ ಬಗ್ಗೆ ಮಾತನಾಡಿದ್ದರು. ಹೌದು, ಈ ಹಿಂದೆ ಸೋನು ಗೌಡ ಅವರ ಖಾಸಗಿ ವಿಡಿಯೋ ಲೀಕ್ ಆಗಿತ್ತು.
ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಖಾಸಗಿ ಅಂಗಗಳನ್ನು ಪ್ರದರ್ಶನ ಮಾಡಿದ ಇಂಥವರಿಗೆಲ್ಲ ‘ಬಿಗ್ ಬಾಸ್ ಕನ್ನಡ ಒಟಿಟಿ’ ವೇದಿಕೆಯಲ್ಲಿ ಅವಕಾಶ ನೀಡಿದ್ದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಆದರೆ ಈ ಕುರಿತು ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಮಾತನಾಡಿ, ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿದ್ದಕ್ಕೆ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದು ಕಣ್ಣೀರು ಸುರಿಸಿದ್ದರು.
ಈ ರೀತಿಯಾಗಲು ಬಾಯ್ ಫ್ರೆಂಡ್ ಕಾರಣ ಎನ್ನುವುದನ್ನು ಬಿಚ್ಚಿಟ್ಟಿದ್ದು, ಹಳೇ ಘಟನೆಯನ್ನು ನೆನಪಿಸಿಕೊಂಡ ಸೋನು ಗೌಡ ಕಣ್ಣೀರು ಹಾಕುವುದನ್ನು ನೋಡಿ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳು ಸಮಾಧಾನ ಮಾಡಿದ್ದರು. ಇನ್ನು ಅವರನ್ನು ತಬ್ಬಿಕೊಂಡು ನಟ ರಾಕೇಶ್ ಅಡಿಗ ಸಮಾಧಾನಿಸಿದ್ದರು.
ಈ ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರದಲ್ಲಿ ಗಮನ ಸೆಳೆದಿದ್ದ ಸೋನು ಬಿಗ್ ಬಾಸ್ ಓಟಿಟಿನಲ್ಲಿ ಫಿನಾಲೆ ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿದ್ದರು. ತದನಂತರದಲ್ಲಿ ಖಾಸಗಿ ವಾಹಿನಿಯ ಸಂದರ್ಶನಗಳಲ್ಲಿ ಭಾಗಿಯಾಗಿದ್ದು, ಈ ವೇಳೆಯಲ್ಲಿ ತಾವು ತಿಂಗಳಿಗೆ ಪಡೆಯುವ ಸಂಬಳದ ಬಗ್ಗೆ ರಿವೀಲ್ ಮಾಡಿದ್ದು, `ಬಿಗ್ ಬಾಸ್’ ಖ್ಯಾತಿಯ ಸೋನು ಅವರು ಈ ಹಿಂದೆ ರೀಲ್ಸ್ ಮೂಲಕ ತಿಂಗಳಿಗೆ 3 ಲಕ್ಷ ರೂಪಯಿ ದುಡಿಯುತ್ತಿದ್ದರು.
ಒಂದು ತಿಂಗಳಿಗೆ 3 ಲಕ್ಷ ದುಡಿಯುತ್ತೇನೆ ಎಂದಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಸೋನು ಶ್ರೀನಿವಾಸ್ ಗೌಡರವರು ಹೋಂ ಟೂರ್ ಮಾಡಿದ್ದರು. ತನ್ನ ಸ್ವಂತ ಮನೆಯನ್ನು ತನ್ನ ಫ್ಯಾನ್ ಫಾಲ್ಲೋರ್ಸ್ ಗೆ ತೋರಿಸಿದ್ದರು. ಹೌದು, ಸೋನು ಶ್ರೀನಿವಾಸ್ ಗೌಡ ತಾವು ಸೆಲ್ಫಿ ವಿಡಿಯೋ ಮಾಡುತ್ತಾ, ತಾಯಿ ಸುನಂದ ಹಾಗೂ ಮನೆಯ ಮುದ್ದಿನ ಪೆಟ್ ಅನ್ನು ಪರಿಚಯ ಮಾಡಿದ್ದರು.
ತನ್ನ ಬೆಡ್ ರೂಮ್, ಬೆಡ್ ರೂಮ್ ನಲ್ಲಿರುವ ಕಬೋರ್ಡ್, ಮೇಕ್ ಅಪ್ ಮಾಡುವ ಕನ್ನಡಿ ಹೀಗೆ ಪ್ರತಿಯೊಂದನ್ನು ತೋರಿಸಿದ್ದರು. ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡರವರ ಮನೆ ನೋಡಿದ ನೆಟ್ಟಿಗರು ಇಷ್ಟೊಂದು ದೊಡ್ಡದು ಇದೆಯಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಬಿಗ್ ಬಾಸ್ ಒಟಿಟಿಯಿಂದ ಸ್ಪರ್ಧಿಯಾಗಿ ಭಾಗವಹಿಸಿ ಹೊರ ಬಂದ ಬಳಿಕ ಸಿನಿಮಾ ಅವಕಾಶಗಳು ಸೋನು ಗೌಡರಿಗೆ ಬರುತ್ತಿದ್ದು, ಸದ್ಯಕ್ಕೆ ತನ್ನ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.