Sunita lost two kidney : ನಮ್ಮ ಸುತ್ತ ಮುತ್ತಲಲ್ಲಿ ನಡೆಯುವ ಘಟನೆಗಳು ಬೆಚ್ಚಿ ಬೀಳಿಸುವಂತೆ ಇರುತ್ತದೆ. ಆ ಘಟನೆಗಳನ್ನು ನೋಡಿದಾಗ ಅಯ್ಯೋ ಎನ್ನುವ ಕನಿಕರ ಭಾವವು ಮೂಡಬಹುದು. ಇಲ್ಲೊಬ್ಬ ಮಹಿಳೆ ಕಷ್ಟ ಕೇಳಿದರೆ ಮನಸ್ಸು ಕರಗಿ ನೀರಾಗುತ್ತದೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದ ಈ ಮಹಿಳೆಯ ಎರಡು ಕಿಡ್ನಿ ಕದ್ದು ಬಿಟ್ಟರು. ಇದನ್ನು ಕಂಡ ಪತಿಯು ಆಕೆಯನ್ನು ಬಿಟ್ಟು ಹೋದ. ಆದರೆ ಇತ್ತ ಇಬ್ಬರೂ ಮಕ್ಕಳ ಮಡಿಲಿನಲ್ಲಿದ್ದು, ಸಾ-ವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ ಈ ಮಹಿಳೆ. ಈಕೆಯ ಹೆಸರು ಸುನೀತಾ.
ಹೌದು ಗ_ರ್ಭಕೋಶದ ಸೋಂಕಿನಿಂದ ಬಳಲುತ್ತಿದ್ದಳು ಸುನೀತಾ. ಹೀಗಿರುವಾಗ ಬಿಹಾರದ ಮುಜಾಫರ್ಪುರದ ಬರಿಯಾಪುರ್ ಚೌಕ್ನಲ್ಲಿನ ಶುಭ್ಕಾಂತ್ ಕ್ಲಿನಿಕ್ನಲ್ಲಿ ಸೆ. 3ರಂದು ಚಿಕಿತ್ಸೆಗೆಂದು ದಾಖಲಾಗಿದ್ದಳು. ಆದರೆ ಚಿಕಿತ್ಸೆಗೆಂದು ದಾಖಲಾಗಿದ್ದ ಈಕೆಯ ಎರಡು ಕಿಡ್ನಿಗಳನ್ನು ಕಳವು ಮಾಡಲಾಗಿತ್ತು. ಹೌದು, ಕಿಡ್ನಿ ಕಳ್ಳರು ವೈದ್ಯರ ಸೋಗಿನಲ್ಲಿ ಈಕೆಯ ಎರಡೂ ಕಿಡ್ನಿಯನ್ನು ಕದ್ದು ಬಿಟ್ಟರು. ಕೊನೆಗೆ ಆರೋಗ್ಯವು ತುಂಬಾನೇ ಕೈ ಕೊಟ್ಟಿತು.
ಹೀಗಿರುವಾಗ ಕ್ಲಿನಿಕ್ನ ವೈದ್ಯ ಪವನ್ ಆಕೆಯನ್ನು ಪಾಟ್ನಾದ ನರ್ಸಿಂಗ್ ಹೋಮ್ಗೆ ದಾಖಲಿಸಿ ಪರಾರಿಯಾಗಿ ಬಿಟ್ಟನು. ತದನಂತರದಲ್ಲಿ ಪತ್ನಿಯನ್ನು ನೋಡಿಕೊಂಡ ಅಕ್ಲು ರಾಮ್ ಆಕೆಗೆ ಕಿಡ್ನಿ ಕೊಡಲು ರೆಡಿಯಾಗಿದ್ದಾನು. ಆದರೆ ಆಕೆಗೆ ಅದು ಹೊಂದಾಣಿಕೆ ಆಗಲಿಲ್ಲ. ಒಂದು ಕಡೆಗೆ ಆರೋಗ್ಯವು ಸರಿಯಿರಲಿಲ್ಲ. ಇನ್ನೊಂದೆಡೆ ಈ ದಂಪತಿ ನಡುವೆ ಜಗಳವಾಗಿತ್ತು. ಆ ವೇಳೆ ಸಿಟ್ಟಿನಲ್ಲಿ ನೀನಿನ್ನು ಇದ್ದರೂ ಅಷ್ಟೇ, ಸತ್ತರೂ ಅಷ್ಟೇ ಎಂದು ಹೇಳಿದ್ದಾನೆ. ಅದರ ಜೊತೆಗೆ ಮೂರು ಮಕ್ಕಳ ಜೊತೆಗೆ ಹೆಂಡತಿಯನ್ನೂ ಬಿಟ್ಟು ಹೋಗಿದ್ದಾನೆ.
ನಾನು ಆರೋಗ್ಯವಾಗಿದ್ದಾಗ ಮನೆಗೆಲಸ ಮಾಡಿ ಮಕ್ಕಳನ್ನು ಸಾಕುತ್ತ ಮನೆ ನಿಭಾಯಿಸುತ್ತಿದ್ದೆ. ಆದರೆ ಈಗ ಆರೋಗ್ಯ ಕೈಕೊಟ್ಟಿದೆ, ನಿನ್ನೊಂದಿಗೆ ನನಗೆ ಇರಲು ಆಗುವುದಿಲ್ಲ ಎಂದು ಹೇಳಿ ಪತಿಯೂ ಬಿಟ್ಟು ಹೋಗಿದ್ದಾರೆ, ಕೆಲಸ ಮಾಡಲೂ ಆಗುತ್ತಿಲ್ಲ. ಪತಿ ಬೇರೆ ಮದುವೆ ಆಗುತ್ತಾನೋ ಎಂದು ಚಿಂತೆಯಲ್ಲಿ ಮುಳುಗಿ ಹೋಗಿದ್ದಾರೆ. ಎರಡೂ ಕಿಡ್ನಿ ಕಳವಾಗಿದೆ, ಪತಿಯೂ ಬಿಟ್ಟು ಹೋಗಿದ್ದಾರೆ, ಮೂರು ಮಕ್ಕಳು ಜೊತೆಗಿದ್ದು, ಆಸ್ಪತ್ರೆಯಲ್ಲಿದ್ದೇನೆ. ನಾನು ನನ್ನ ಸಾವಿನ ದಿನಗಳನ್ನು ಎಣಿಸುತ್ತಿದ್ದೇನೆ.
ಇನ್ನು ಎಷ್ಟು ದಿನಗಳು ಉಳಿದಿದೆಯೋ ಗೊತ್ತಿಲ್ಲ, ಆದರೆ ಇದರಲ್ಲಿ ನನ್ನ ತಪ್ಪೇನು? ನನ್ನ ನಂತರ ಈ ಮಕ್ಕಳ ಕಥೆಯೇನು? ಅವರು ಹೇಗೆ ಬದುಕುತ್ತಾರೆ?’ ಎಂದು ನೊಂದುಕೊಂಡಿದ್ದಾರೆ. ಇತ್ತ ಆಸ್ಪತ್ರೆಯಲ್ಲಿದ್ದು, ತಾಯಿಯ ಆರೈಕೆಯಲ್ಲಿದ್ದಾರೆ. ಸುನೀತಾ ಎಸ್ಕೆ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎರಡು ದಿನಕ್ಕೊಮ್ಮೆ ಡಯಾಲಿಸಿಸ್ಗೆ ಒಳಗಾಗುತ್ತಿದ್ದಾರೆ. ಆಕೆಗೆ ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನದಲ್ಲಿ ವೈದ್ಯರು ಇದ್ದಾರೆ. ಸದ್ಯಕ್ಕೆ ಪೊಲೀಸರು ಪವನ್ನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ. ವೈದ್ಯೋ ನಾರಾಯಣ ಹರಿ ಎಂಬ ಮಾತಿದೆ ದೇವರ ರೂಪದಲ್ಲಿರುವ ಡಾಕ್ಟರ್ ಗಳೇ ಈ ರೀತಿ ಕೆಲಸ ಮಾಡಿದರೆ ಇನ್ಮೇಲೆ ಯಾರನ್ನು ನಂಬೋದು.