tanvi geetha ravishankar : ಸಿನಿಮಾದ ಕೆಲವು ಹಾಡು ಸಿನಿಮಾ ಬಿಡುಗಡೆಗೂ ಮುನ್ನ ಸಖತ್ ಟ್ರೆಂಡ್ ಸೃಷ್ಟಿಸಿ ಬಿಡುತ್ತದೆ. ಹೌದು ಈ ಸಿನಿಮಾಗಳಿಗೆ ಸೆಲೆಬ್ರಿಟಿಗಳು ರೀಲ್ಸ್ ಸ್ಟಾರ್ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ. ಕೆಲವು ಸಿನಿಮಾಗಳ ಹಾಡು ಸಿನಿಮಾ ಬಿಡುಗಡೆಗೂ ಮುನ್ನ ಸಖತ್ ಟ್ರೆಂಡ್ ಸೃಷ್ಟಿಸಿ ಬಿಡುತ್ತದೆ. ಹೌದು ಈ ಸಿನಿಮಾಗಳಿಗೆ ಸೆಲೆಬ್ರಿಟಿಗಳು ರೀಲ್ಸ್ ಸ್ಟಾರ್ ಸ್ಟೆಪ್ ಹಾಕುವ ಮೂಲಕ ನೆಟ್ಟಿಗರ ಗಮನ ಸೆಳೆಯುತ್ತಾರೆ.
ನಟಿ ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡು ವಿವಾದ ಸೃಷ್ಟಿಸಿದೆಯೋ, ಈ ಹಾಡು ಸಿನಿ ರಸಿಕರ ಮನಸ್ಸು ಗೆದ್ದು ಕೊಂಡಿದೆ. ಅನೇಕ ಜನರು ಈಗಾಗಲೇ ಈ ಸಾಂಗ್‌ಗೆ ಡಾನ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಟಿ ದೀಪಿಕಾ ಪಡುಕೋಣೆ ಮಾಡಿದ್ದ ಬೇಷರಮ್ ರಂಗ್ ಹುಕ್ ಸ್ಟೆಪ್‌ಗಳನ್ನು ತನ್ವಿ ಗೀತಾ ರವಿಶಂಕರ್ ಎಂಬುವವರು ಮರುಸೃಷ್ಟಿ ಮಾಡಿದ್ದಾರೆ.

ದೀಪಿಕಾ ಪಡುಕೋಣೆಯಂತೆ ಹಾಟ್ ಉಡುಗೆಯಲ್ಲಿ ಸ್ಟೆಪ್ ಹಾಕಿದ್ದಾರೆ. ಕಳೆದ ವರ್ಷ ಡಿಸೆಂಬರ್ 30 ರಂದು ಫ್ಯಾಶನ್ ಇನ್‌ಫ್ಲುಯೆನ್ಸರ್ ಆಗಿರುವ ತನ್ವಿ ಗೀತಾ ರವಿಶಂಕರ್ ಮಾಡಿದ್ದರು. ಈ ಡಾನ್ಸ್ ವಿಡಿಯೋವೊಂದು ನೆಟ್ಟಿಗರ ಮನಸ್ಸು ಕದ್ದಿದೆ.ಹೌದು, ಈಗಾಗಲೇ ತನ್ವಿ ಗೀತಾ ರವಿಶಂಕರ್ ಅವರು ಇನ್‌ಸ್ಟಾಗ್ರಾಂನಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ಈ ಪೋಸ್ಟ್‌ನ ಶೀರ್ಷಿಕೆಯಲ್ಲಿ ತನ್ವಿ ಗೀತಾರವರು “ಬೇಷರಮ್ ಆಗಿರಿ. ನೀವು ಇಷ್ಟಪಡುವದನ್ನು ಮಾಡುವುದು, ನೀವು ಇಷ್ಟಪಡುವದನ್ನು ಧರಿಸುವುದು ಮತ್ತು ನೀವು ಬಯಸಿದ ಜೀವನವನ್ನು ನಡೆಸುವುದು, ನಿಮ್ಮನ್ನು ಬೇರೆಯವರ ದೃಷ್ಟಿಯಲ್ಲಿ “ಬೇಷರಾಮ್” ಆಗಿ ಮಾಡಿದರೆ, ಅದು ಸಂಪೂರ್ಣವಾಗಿ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋವನ್ನು ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ ಗಳು ಬಂದಿವೆ. ಈ ಹಾಡಿಗೆ ಸ್ಟೆಪ್ ಹಾಕಿದ್ದನ್ನು ಕಂಡು ನೆಟ್ಟಿಗರು ನಾನಾ ರೀತಿಯಲ್ಲಿ ಪ್ರಕ್ರಿಯೆ ನೀಡುತ್ತಿದ್ದಾರೆ. ನೆಟ್ಟಿಗನೊಬ್ಬನು, “ಒ ಎಂ ಜಿ! ನಾನು ಇದನ್ನು ನೋಡುವಾಗ ನಾನು ನಗುತ್ತಿದ್ದೆ. ಸಖತ್ತಾಗಿ ಮಾಡಿದ್ದೀರಿ.. ನೀವು ಮಾಡಿದ್ದ ಆ ಸ್ಟೆಪ್ಸ್ ತುಂಬಾ ಚೆನ್ನಾಗಿತ್ತು. ನಾನೂ ನಿಮ್ಮ ಹಾಗೆಯೇ ಆತ್ಮವಿಶ್ವಾಸ ಹೊಂದಿದ್ದರೆ, ಆದ್ರೆ ಒಂದು ದಿನ ಬರಬಹುದು..” ಎಂದು ಕಾಮೆಂಟ್ ಮಾಡಿದ್ದಾನೆ.
ಒಟ್ಟಿನಲ್ಲಿ ತನ್ವಿ ಗೀತಾರವರ ಈ ಹಾಟ್ ಡಾನ್ಸ್ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರ ನಿದ್ದೆ ಕದಿಯುತ್ತಿದೆ.ಅಂದಹಾಗೆ, ಭಾರೀ ವಿವಾದಕ್ಕೆ ಕಾರಣವಾಗಿದ್ದ ಪಠಾಣ್ ಸಿನಿಮಾದ ದೀಪಿಕಾ ಪಡುಕೋಣೆ ಅವರ ಕೇಸರಿ ಈಜುಡುಗೆಯ ದೃಶ್ಯಗಳನ್ನು ಬೇಷರಂ ರಂಗ ಹಾಡಿನಿಂದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸಿಬಿಎಫ್ ಸಿ ತೆಗೆದುಹಾಕಿದೆ.
ಅಂದಹಾಗೆ, ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡು ವಿವಾದಕ್ಕೆ ಕಾರಣವಾಗಿದ್ದು ಚಿತ್ರದಲ್ಲಿನ ಅಶ್ಲೀಲ ಉಡುಪು ವ್ಯಾಪಕ ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಕೇಸರಿ ಬಿಕಿನಿಯು ಹಿಂದೂ ಧರ್ಮಕ್ಕೆ ಹಾನಿಯುಂಟು ಮಾಡುತ್ತದೆ ಎಂಬ ಆರೋಪದ ಮೇಲೆ ಹಾಡನ್ನು ನಿಷೇಧಿಸಬೇಕೆಂದು ಒತ್ತಾಯಿಸಲಾಗಿತ್ತು.
tanvi geetha ravishankar video :
View this post on Instagram
ಈ ಕಾರಣದಿಂದಾಗಿ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಗುರುವಾರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಮತ್ತೊಂದೆಡೆ, ಅಯೋಧ್ಯೆಯ ಮಹಂತ್ ಹನುಮಾನ್ ಗರ್ಹಿ ರಾಜು ದಾಸ್, ಚಲನಚಿತ್ರವನ್ನು ಬಹಿಷ್ಕರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಈ ಎಲ್ಲಾ ವಿವಾದದ ನಡುವೆ ಸಿಬಿಎಫ್‌ಸಿ ಹಾಡಿನಲ್ಲಿ ವಿವಾದಕ್ಕೆ ಕಾರಣವಾದ ದೃಶ್ಯವನ್ನು ತೆಗೆದು ಹಾಕಿದೆ.