ಹೆಂಡತಿಯ ಮೇಲೆ ಅನುಮಾನ ಪಡೆದ ಗಂಡಸೆ ಇಲ್ಲ. ಮದುವೆಯಾದ ದಿನದಿಂದ ಗಂಡ ಹೆಂಡತಿಯ ಮೇಲೆ ಅನುಮಾನ ಪಡುತ್ತಾರೆ.ಹೆಂಡತಿ ಬೇರೆಯವರ ಜೊತೆ ಫೋನ್ನಲ್ಲಿ ಮಾತನಾಡಿದರೆ ಕೂಡ ಅನುಮಾನ ಪಡುವಂತ ಗಂಡಸರು ಇದ್ದಾರೆ. ತನ್ನ ಹೆಂಡತಿ ಬೇರೆಯವರ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸುವ ಇಂತಹ ಕಾಲದಲ್ಲಿ, ಹೆಂಡತಿಯನ್ನು ಅವಳ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡುವಂತ ಗಂಡ ಇದ್ದಾನೆ ಎಂದರೆ ನೀವೆಲ್ಲ ನಂಬಲೇಬೇಕು.
ಹೌದು ಸ್ನೇಹಿತರೆ, ಇದು ನಂಬಲಿಕ್ಕೆ ಸಾಧ್ಯವಾಗದೇ ಇದ್ದರೂ ಕೂಡ ಬಿಹಾರ ರಾಜ್ಯದಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಉಗಾರಿಯ ಜಿಲ್ಲೆಯ ಸಪ್ನಾ ಎಂಬ ಮಹಿಳೆಗೆ ಉತ್ತಮ್ ಮಂಡಲ್ ಎಂಬ ಪುರುಷನ ಜೊತೆ ವಿವಾಹವಾಗಿತ್ತು. ಇಬ್ಬರು ಸುಮಾರು ಏಳು ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ್ದಾರೆ. ಮದುವೆಯಾದ ದಿನದಿಂದ ಇಬ್ಬರ ಸಂಬಂಧವು ತುಂಬಾ ಚೆನ್ನಾಗಿತ್ತು. ಉತ್ತಮ ಮಂಡಲ್ ಸ್ವಪ್ನ ಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದ.
ಪ್ರಾರಂಭದಲ್ಲಿ ಸ್ವಪ್ನ ಕೂಡ ಉತ್ತಮ ಮಂಡಲ್ ನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು. ಒಂದು ದಿನ ಸ್ವಪ್ನ ಗೆ ಉತ್ತಮ ಮಂಡಲ್ ಅವರ ಸಂಬಂಧಿ ರಾಜಕುಮಾರ್ ಎಂಬ ಪುರುಷನ ಪರಿಚಯವಾಗುತ್ತದೆ. ಇಬ್ಬರ ಪರಿಚಯ ನಂತರ ಪ್ರೀತಿಯಾಗಿ ಪರಿವರ್ತನೆಗೊಳ್ಳುತ್ತದೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಕೂಡ ಸ್ವಪ್ನಾಗೆ ರಾಜಕುಮಾರ್ ಮೇಲಿನ ಪ್ರೀತಿ ಕಡಿಮೆಯಾಗುವುದಿಲ್ಲ. ದಿನೇ ದಿನೇ ಇವರಿಬ್ಬರ ಪ್ರೀತಿ ಪ್ರೇಮಪರ್ವವಾಗಿ ಬೆಳೆಯುತ್ತೆ.
ತನಗೆ ಮದುವೆಯಾಗಿದೆ.. ಇಬ್ಬರು ಮಕ್ಕಳಿದ್ದಾರೆ.. ಬೇರೆ ಗಂಡಸರ ಜೊತೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು.. ಎಂದು ತಿಳಿದಿದ್ದರು ಕೂಡ ರಾಜಕುಮಾರ್ ಜೊತೆಗೆ ಸಂಬಂಧವನ್ನು ಮುಂದುವರೆಸಿಕೊಂಡು ಹೋದಳು. ಹೆಂಡತಿ ಸ್ವಪ್ನ ಮತ್ತು ರಾಜಕುಮಾರ್ ಜೊತೆಗಿನ ಈ ಕಳ್ಳ ಸಂಬಂಧದ ವಿಚಾರ ಉತ್ತಮ್ ಮಂಡಲ್ ಗೆ ಗೊತ್ತಾಗುತ್ತೆ. ಈ ವಿಷಯ ತಿಳಿದ ತಕ್ಷಣವೇ ಹೆಂಡತಿ ಸಪ್ನಾಳ ಜೊತೆ ಜಗಳ ಮಾಡುತ್ತಾನೆ. ನನಗೆ ನಿನ್ನ ಈ ರೀತಿಯ ಬದಲಾವಣೆ ಇಷ್ಟ ಆಗಲ್ಲ ನೀನು ಅವನ ಜೊತೆಗೆ ಸಂಬಂಧ ಬಿಟ್ಟು ಬಿಡು ಇದೆಲ್ಲ ತಪ್ಪು ಎಂದು ಹೇಳುತ್ತಾನೆ.
ಎಷ್ಟೇ ಬುದ್ಧಿಮಾತು ಹೇಳಿದರು ಸ್ವಪ್ನ ಬದಲಾವಣೆಯಾಗಲ್ಲ. ಗೋಳೋ ಅಂತ ಅಳುತ್ತಾ ನಾನು ರಾಜಕುಮಾರ್ ನನ್ನ ಬಿಟ್ಟಿರಲಾರೆ ಎಂದು ಕಣ್ಣೀರು ಹಾಕಿದಳು. ಇನ್ನು ಮುಂದೆ ನಾನು ರಾಜಕುಮಾರ್ ಜೊತೆಯಲ್ಲಿ ಇರುತ್ತೇನೆ ಎಂದು ಗಂಡನಿಗೆ ಹೇಳಿದಳು. ಇದರಿಂದ ಏನು ಮಾಡಬೇಕೆಂದು ತಿಳಿಯದೆ ಉತ್ತಮ್ ನಿಜವಾಗಲೂ ಉತ್ತಮ ಕೆಲಸ ಮಾಡಿದ್ದಾನೆ.

ತನ್ನ ಹೆಂಡತಿಯನ್ನು ಅವರ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡುವಂತಹ ದೊಡ್ಡ ಮನಸ್ಸನ್ನು ತೋರಿದ್ದಾನೆ.ಪೋಷಕರ ಮತ್ತು ಸಂಬಂಧಿಕರು ಉತ್ತಮ್ ಮಂಡಲ್.ನ ಈ ನಿರ್ಧಾರವನ್ನು ನೋಡಿ ನಿನಗೆ ಹುಚ್ಚು ಹಿಡಿದಿದೆಯಾ? ಎಂದು ಪ್ರಶ್ನೆ ಮಾಡಿದರು ಆಗ ಉತ್ತಮ್ ಈ ರೀತಿಯಾಗಿ ಉತ್ತರಿಸಿದನು ” ಆದರೆ ಬೇರೆ ದಾರಿಯಿಲ್ಲ, ನನ್ನ ಹೆಂಡತಿ ನನ್ನ ಮನೆಯಲ್ಲಿದ್ದರೂ, ಅಪರಿಚಿತರು ಧ್ಯಾನದಲ್ಲಿದ್ದರೆ ನನಗೆ ನರಕ.. ಅದಕ್ಕಿಂತ ಇದು ಉತ್ತಮ,’’ ಎಂದು ಉತ್ತಮ್ ಮಂಡಲ್ ಮಾತು ಮುಗಿಸಿದರು.
ಇದರಿಂದ ಎರಡೂ ಕುಟುಂಬದವರು ಅಚ್ಚರಿಗೊಂಡಿದ್ದಾರೆ. ರಾಜ್‌ಕುಮಾರ್‌ಗೆ ಪತ್ನಿಯನ್ನು ಕೊಟ್ಟು ಮದುವೆ ಮಾಡಲು ಯೋಚಿಸಿದ ಉತ್ತಮ್, ಸುಲ್ತಂಗಂಜ್‌ನ ದುರ್ಗಾ ಮಾತಾ ದೇವಸ್ಥಾನದಲ್ಲಿ ರಾಜ್‌ಕುಮಾರ್‌ಗೆ ಪತ್ನಿಯನ್ನು ಮದುವೆಯಾದರು. ಕುಟುಂಬದ ಸದಸ್ಯರು ಕೂಡ ಈ ವಿವಾಹದಲ್ಲಿ ಪಾಲ್ಗೊಂಡು ವಧುವರರನ್ನು ಆಶೀರ್ವದಿಸುತ್ತಿರುವುದು ಗಮನಿಸಬೇಕಾದ ಸಂಗತಿ.
ಇದೇ ವೇಳೆ ರಾಜ್ ಕುಮಾರ್ ಪತ್ನಿಯ ತಾಳಿ ತೊಳೆಯುತ್ತಿದ್ದಾಗ ಉತ್ತಮ್ ಕಣ್ಣಲ್ಲಿ ನೀರು ತುಂಬಿತ್ತು. ತಾನು ಪ್ರೀತಿಸಿದವನ ಜೊತೆ ಕೊನೆಗೂ ಮದುವೆ ಆಗುತ್ತಿರುವುದು ಸಪ್ನಾಳ ಅದೃಷ್ಟವೇ?.. ಅಥವಾ ಅಂತಹ ಮಹಾನ್ ಮನಸ್ಸಿನ ಗಂಡನನ್ನು ಬಿಟ್ಟು ಬೇರೆ ಮದುವೆ ಆಗುತ್ತಿರುವ ಸ್ವಪ್ನ ದುರಾದೃಷ್ಟಶಾಲಿಯೇ?..
ಚಿಕ್ಕ ಪುಟ್ಟ ವಿಷಯಕ್ಕೆ ಹೆಂಡತಿ ಮೇಲೆ ಅನುಮಾನ ಪಡುವ ಇಂತಹ ಒಂದು ಯುಗದಲ್ಲಿ ಹೆಂಡತಿಯ ಕಷ್ಟವನ್ನು ಅರ್ಥ ಮಾಡಿಕೊಂಡು ಅವಳಿಗೆ ಇಷ್ಟವಾಗುವ ಹುಡುಗನ ಜೊತೆ ಮದುವೆ ಮಾಡಿದ ಉತ್ತಮ್ ನಿಜವಾಗಲೂ ದೊಡ್ಡಮನೆ ಹುಡುಗ.